Morning Digest: ಇನ್ನೂ 3 ದಿನ ರಾಜ್ಯದಲ್ಲಿ ಮಳೆ, ದುಬೈನಲ್ಲಿ ಯಶ್​-ರಾಧಿಕಾ; ಬೆಳಗಿನ ಟಾಪ್ ನ್ಯೂಸ್​ಗಳು

1.Karnataka Weather Today: ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ- ವಿವಿಧ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

Karnataka Rains Today ಬೆಂಗಳೂರು(ಅ.13):ಮುಂಗಾರು (Monsoon)ಅಂತ್ಯವಾಗಲು ಶುರುವಾಗಿ ಬಹಳ ದಿನಗಳಾಗಿದೆ, ಆದರೆ ಮಳೆಯ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಒಂದೆಡೆ ವಾಯುಭಾರ ಕುಸಿತ ಹಾಗೂ ಮತ್ತೊಂದೆಡೆ ಜವಾಬ್ (Javab)ಚಂಡಮಾರುತ ಪರಿಣಾಮ ದೇಶದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ರಾಜ್ಯದಲ್ಲಿ(Karnataka) ಸಹ ಕಳೆದ ಮಳೆಯಾಗುತ್ತಿದೆ(Rainfall). ಇನ್ನು ರಾಜ್ಯದಲ್ಲಿ ನೈರುತ್ಯ ಮುಂಗಾರು ತೀವ್ರಗೊಂಡಿರುವುದರಿಂದ ಅ.13 ರಿಂದ 15ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

2.Gold Price Today: ಏರಿಕೆಯಾಗುತ್ತಲೇ ಇದೆ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟಿದೆ?

Gold Rate on October 13 2021: ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ(Gold Price) ನಿರಂತರವಾಗಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಿದೆ. ಕಳೆದ 2 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 90 ರೂಪಾಯಿ ಹೆಚ್ಚಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,940 ರೂ. ಇತ್ತು. ಇಂದು ಅದೇ ಚಿನ್ನಕ್ಕೆ 46,030 ರೂಪಾಯಿ ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 46,940 ರೂ. ಇತ್ತು. ಇಂದು 47,030 ರೂಪಾಯಿಗೆ ಏರಿಕೆಯಾಗಿದೆ.

3.Bengaluru Power Cut: ಮಳೆಯಿಂದ ಫೀಡರ್​ಗಳಿಗೆ ಹಾನಿ – ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಕಳೆದ ಮೂರು ನಾಲ್ಕು ದಿನಗಳಿಂದ ನಗರದಲ್ಲಿ ಧಾರಕಾರ ಮಳೆ (Rainfall) ಸುರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಜನರು ಪರದಾಡುವಂತಾಗಿತ್ತು. ಈ ಮಧ್ಯೆ ಬೆಸ್ಕಾಂ(BESCOM) ಸಹ ಪವರ್ ಕಟ್ (Power Cut)ಮಾಡುತ್ತಿದ್ದು ಜನರ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ. ಮಳೆಯ ಕಾರಣದಿಂದ ಫೀಡರ್​ಗಳು ಹಾಳಾಗಿರುವ ಕಾರಣ ಅದರ ತುರ್ತು ನಿರ್ವಹಣೆಯನ್ನು ಮಾಡಬೇಕಾಗಿದ್ದು, ಇಂದು ಸಹ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದ್ದು, ಯಾವ್ಯಾವ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂಬ ಲಿಸ್ಟ್ ಸಹ ನೀಡಿದೆ.

4.Petrol Price| ಸತತ 15ನೇ ದಿನವೂ ಜಿಲ್ಲೆಗಳಲ್ಲಿ ತೈಲ ಬೆಲೆ ಏರಿಕೆ; ಇಲ್ಲಿದೆ ಪೆಟ್ರೋಲ್-ಡೀಸೆಲ್ ಬೆಲೆ ವಿವರ!

ಬೆಂಗಳೂರು (ಅಕ್ಟೋಬರ್​ 13); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಸತತ 15ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ (Bengaluru) ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದ್ದರೂ ಸಹ ಜಿಲ್ಲೆಗಳಲ್ಲಿ ತೈಲ ಬೆಲೆಗಳನ್ನು ಏರಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್ ಅನ್ನು 108.08 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 98.89 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಚಿತ್ರದುರ್ಗದಲ್ಲಿ (Chitradurga) ಪೆಟ್ರೋಲ್ ಇಂದು 35 ಪೈಸೆ ಏರಿಕೆ ಕಂಡಿದ್ದು, ಅತ್ಯಧಿಕ 110.40 ರೂ. ಮಾರಾಟ ಮಾಡಲಾಗುತ್ತಿದೆ. 100.76 ರೂ ಮಾರಾಟವಾಗುವ ಮೂಲಕ ಡೀಸೆಲ್ ಬಳ್ಳಾರಿಯಲ್ಲಿ (Bellary) ಹೊಸ ಇತಿಹಾಸ ನಿರ್ಮಿಸಿದೆ.

5.Dubaiನಲ್ಲಿ ರಾಕಿಂಗ್​ ಜೋಡಿ: Yash​-Radhika Pandit​ ಫೋಟೋ ವೈರಲ್​..!

ಇತ್ತೀಚೆಗಷ್ಟೆ ಮುಂಬೈನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಕೆಜಿಎಫ್​ ಚಾಪ್ಟರ್ 2 ಸಿನಿಮಾದ ನಟ-ರಾಕಿಂಗ್​ ಸ್ಟಾರ್​ ಯಶ್​ ಈಗ ತಮ್ಮ ಮಡದಿ ರಾಧಿಕಾ ಪಂಡಿತ್ ಜೊತೆ ದುಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಈ ರಾಕಿಂಗ್ ಜೋಡಿ ದುಬೈ ಪ್ರವಾಸದ ಚಿತ್ರಗಳು ವೈರಲ್ ಆಗುತ್ತಿವೆ. ರಾಧಿಕಾ ಪಂಡಿತ್ ಹಾಗೂ ಯಶ್​ ಅವರು ದುಬೈಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಅಧಿಕಾರಿಗಳು ಈ ಜೋಡಿಯನ್ನು ಬರ ಮಾಡಿಕೊಂಡಿದ್ದಾರೆ. ಯಶ್​ ಅವರ ಜೊತೆ ಅವರ ಅಭಿಮಾನಿಗಳು ಫೋಟೋಗಳನ್ನು ತೆಗೆಸಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *