ನಾನು ಇನ್ಮುಂದೆ ಅಡ್ಡದಾರಿ ಹಿಡಿಯಲ್ಲ, ಬಡವರಿಗಾಗಿ ಕೆಲಸ ಮಾಡುತ್ತೇನೆ: ಆರ್ಯನ್ ಖಾನ್

ಮುಂಬೈ: ನಾನು ಇನ್ಮುಂದೆ ಯಾವುದೇ ರೀತಿ ಅಡ್ಡದಾರಿ ಹಿಡಿಯುವುದಿಲ್ಲ, ಬಡವರಿಗಾಗಿ ಕೆಲಸ ಮಾಡುತ್ತೇನೆಂದು ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹೇಳಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ನಡೆಸಿದ ಆಪ್ತ ಸಮಾಲೋಚನೆ(Aryan Khan Counseling)ಯ ವೇಳೆ ಈ ಮಾತುಗಳನ್ನು ಆರ್ಯನ್ ಹೇಳಿದ್ದಾರೆಂದು ವರದಿಯಾಗಿದೆ. ‘ನಾನು ಇನ್ಮುಂದೆ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಮತ್ತು ಭವಿಷ್ಯದಲ್ಲಿ ಯಾವುದೇ ರೀತಿಯ ಅಡ್ಡದಾರಿ ಹಿಡಿಯುವ ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಬಂಧನದಲ್ಲಿ ಕೌನ್ಸೆಲಿಂಗ್ ಮಾಡಲಾಯಿತು

ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ(Sameer Wankhede) ಮತ್ತು ಸಾಮಾಜಿಕ ಕಾರ್ಯಕರ್ತರ ಕೌನ್ಸೆಲಿಂಗ್ ವೇಳೆ ಮಾತನಾಡಿರುವ ಆರ್ಯನ್, ‘ಜೈಲಿನಿಂದ ಬಿಡುಗಡೆಯಾದ ಬಳಿಕ ಬಡವರ ಮತ್ತು ದೀನದಲಿತರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವುದಾಗಿ’ ಹೇಳಿದ್ದಾರೆ. ಇದಲ್ಲದೆ ತನ್ನ ಹಾಗೂ ತನ್ನ ಕುಟುಂಬದ ಹೆಸರು ಹಾಳುಮಾಡುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ನೀವು ನನ್ನ ಬಗ್ಗೆ ಹೆಮ್ಮೆ ಪಡುವಂತಹ ಕೆಲಸವನ್ನು ನಾನು ಮಾಡುತ್ತೇನೆಂದು ಆರ್ಯನ್ ಹೇಳಿದ್ದಾರೆ.

ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್

23 ವರ್ಷದ ಆರ್ಯನ್ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ(Mumbai’s Arthur Road Jail)ದ್ದಾರೆ. ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಸಿದ ಡ್ರಗ್ಸ್ ರೇವ್ ಪಾರ್ಟಿ ಪ್ರಕರಣದಲ್ಲಿ ಆತನನ್ನು ಎನ್‌ಸಿಬಿ ಬಂಧಿಸಿದೆ. ಆರ್ಯನ್ ಹೊರತಾಗಿ ಎನ್‌ಸಿಬಿ ಇತರ 7 ಆರೋಪಿಗಳನ್ನು ಬಂಧಿಸಿದೆ. ಈ ಪೈಕಿ ಇಬ್ಬರು ಆರ್ಯನ್ ಹಳೆಯ ಸ್ನೇಹಿತರಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಜೈಲಿಗೆ ಕಳುಹಿಸುವ ಮೊದಲು ಇವರೆಲ್ಲರಿಗೂ ಕೂಡ ಆಪ್ತಸಮಾಲೋಚನೆ ನಡೆಸಲಾಗಿದೆ.

ಆರ್ಯನ್ ಗೆ ಮನೆಯೂಟ ನೀಡಲು ಸಾಧ್ಯವಿಲ್ಲ

ವರದಿಗಳ ಪ್ರಕಾರ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್(Aryan Khan)ಗೆ ಕೈದಿ ನಂಬರ್ 956 ಸಂಖ್ಯೆ ನೀಡಲಾಗಿದೆ. ಆರ್ಯನ್ ಮತ್ತು ಇತರ ಖೈದಿಗಳನ್ನು ಕ್ವಾರಂಟೈನ್ ಬ್ಯಾರಕ್ ನಿಂದ ಬಿಡುಗಡೆಗೊಳಿಸಿದ್ದು, ಸಾಮಾನ್ಯ ಕೈದಿಗಳ ವಾರ್ಡ್ ಗೆ ವರ್ಗಾಯಿಸಲಾಗಿದೆ. ಪ್ರತಿಯೊಬ್ಬರ ಕೊರೊನಾ ವರದಿ ನೆಗೆಟಿವ್ ಬಂದ ನಂತರವೇ ಜೈಲು ಆಡಳಿತ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಇದೀಗ ಆರ್ಯನ್ ಗೆ ಹೊರಗಿನ ಅಥವಾ ಮನೆಯೂಟವನ್ನು ಸೇವಿಸಲು ಅನುಮತಿ ಇರುವುದಿಲ್ಲ. ಆದರೆ ಮನೆಯಿಂದ ಕಳುಹಿಸಿದ ಬಟ್ಟೆಗಳನ್ನು ಬಳಸಲು ಅವಕಾಶವಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *