ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ್ದಾರೆ. ತೈಲ ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆಯಿದೆ ಅಂತ ತಿಳಿಸಿದ್ದಾರೆ.
ಎಷ್ಟಿದೆ ಡೀಸೆಲ್ ದರ?
ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೀಟರ್ ಡೀಸೆಲ್ ದರ 100ರ ಗಡಿ ದಾಟಿದೆ. ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.37 ರೂ. ಆಗಿದ್ದರೆ, ರಾಯಚೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.25 ರೂಪಾಯಿ, ತುಮಕೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.84 ರೂಪಾಯಿ, ಕಲಬುರಗಿಯಲ್ಲಿ ಲೀಟರ್ ಡೀಸೆಲ್ ಬೆಲೆ 100.16 ರೂಪಾಯಿ ಹಾಗೂ ರಾಮನಗರದಲ್ಲಿ ಲೀಟರ್ ಡೀಸೆಲ್ ಬೆಲೆ 100.67 ರೂಪಾಯಿಗೆ ಏರಿಕೆ ಆಗಿದೆ. ಬೀದರ್ನಲ್ಲಿ ಲೀಟರ್ ಡೀಸೆಲ್ ಬೆಲೆ 101.22 ರೂಪಾಯಿ ಹಾಗೂ ಚಿತ್ರದುರ್ಗದಲ್ಲಿ ಲೀಟರ್ ಡೀಸೆಲ್ ಬೆಲೆ 101.93 ರೂಪಾಯಿ ಇದೆ. ಪ್ರತಿದಿನ ಸಾಗುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ದರ ಇನ್ನಷ್ಟು ಏರಿಕೆಯಾಗುತ್ತಿರುವುದನ್ನು ಕಂಡು ವಾಹನ ಸವಾರರು ಬೇಸರ ಹೊರಹಾಕಿದ್ದಾರೆ.
ಎಷ್ಟಿದೆ ಪೆಟ್ರೋಲ್ ಬೆಲೆ?
ಇಂದು ರಾಯಚೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ಗೆ 109.35 ರೂ. ಇದೆ. ತುಮಕೂರಿನಲ್ಲಿ 108.08 ರೂ, ಕಲಬುರಗಿಯಲ್ಲಿ ಪೆಟ್ರೋಲ್ 109.26, ಬೀದರ್ನಲ್ಲಿ 110.42, ಚಿತ್ರದುರ್ಗದಲ್ಲಿ 111.30, ಮಂಡ್ಯದಲ್ಲಿ 109.28, ಯಾದಗಿರಿಯಲ್ಲಿ 109.88, ಚಿಕ್ಕಬಳ್ಳಾಪುರದಲ್ಲಿ 109.59, ಧಾರವಾಡದಲ್ಲಿ 109.26 ರೂ ಇದೆ. ಇನ್ನು ವಿಜಯಪುರದಲ್ಲೂ ಒಂದು ಲೀಟರ್ ಪೆಟ್ರೋಲ್ಗೆ 109.24 ರೂಪಾಯಿ ಆಗಿದೆ.