ಡಿಕೆಶಿ ಹೊಗಳಿ ನಾನು ಮೂಲ ಕಾಂಗ್ರೆಸಿಗ ಎಂದ JDS ಶಾಸಕ : ಹೊಸ ಟ್ವಿಸ್ಟ್

  •  ಕೆಪಿಸಿಸಿ  ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನಗೆ ಸಂಬಂಧಿಯಾಗಿದ್ದು, ಪ್ರತಿ ಚುನಾವಣೆಯಲ್ಲಿ ಅವರು ಸಹಕಾರ ನೀಡಿದ್ದಾರೆ
  • ಜೆಡಿಎಸ್ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ರಿಂದ ಕೈ ನಾಯಕ ಡಿಕೆಶಿಗೆ ಹೊಗಳಿಕೆ

ತುಮಕೂರು (ಅ.19):  ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ನನಗೆ ಸಂಬಂಧಿಯಾಗಿದ್ದು, ಪ್ರತಿ ಚುನಾವಣೆಯಲ್ಲಿ ಅವರು ಸಹಕಾರ ನೀಡಿದ್ದಾರೆ ಎಂದು ಗುಬ್ಬಿ ಜೆಡಿಎಸ್‌ (JDS) ಶಾಸಕ ಎಸ್‌.ಆರ್‌.ಶ್ರೀನಿವಾಸ್‌ (SR Shrinivas) ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಮೂಲತಃ ನಾವು ಕಾಂಗ್ರೆಸ್‌ನವರು (Congress). ಕಾಂಗ್ರೆಸ್‌ ನನಗೆ ಜಿಲ್ಲಾ ಪಂಚಾಯಿತಿ ಟಿಕೆಟ್‌ ನೀಡಿತ್ತು ಎಂದರು. ಕುಮಾರಸ್ವಾಮಿ (Kumaraswamy) ಅವರು ಎಂಎಲ್‌ಎ (MLA) ಟಿಕೆಟ್‌ ಕೊಡ್ತೀನಿ ಪಕ್ಷಕ್ಕೆ ಬಾ ಎಂದಿದ್ದರು. ಆದರೆ ಕುಮಾರಸ್ವಾಮಿ ಜೆಡಿಎಸ್‌ ಟಿಕೆಟ್‌ ಕೊಡಿಸಲಾಗಲಿಲ್ಲ. ಹೀಗಾಗಿ ನಾನು ಸ್ವತಂತ್ರವಾಗಿ ಚುನಾವಣೆಯಲ್ಲಿ ನಿಂತು ಗೆದ್ದೆ. ಕುಮಾರಸ್ವಾಮಿ ವರ್ಚಸ್ಸು ಯಾವತ್ತೋ ಕಡಿಮೆಯಾಗಿದೆ. ಮೊದಲ ಬಾರಿಗೆ ಸಿಎಂ ಆಗಿದ್ದಾಗ ಜೆಡಿಎಸ್‌ಗೆ ಹಾಗೂ ಎಚ್‌ಡಿಕೆಗೆ ಒಳ್ಳೆ ಮನ್ನಣೆ ಇತ್ತು. ಈ ಸಲ ಅದೇನಾಯ್ತೋ ಗೊತ್ತಿಲ್ಲ, ಅವರು ಸಿಎಂ ಆಗುತ್ತಿದ್ದಂತೆ ವರ್ಚಸ್ಸು ಕಡಿಮೆಯಾಗಿದೆ ಎಂದರು.

 

ಈಗ ವರ್ಚಸ್ಸು ವೃದ್ಧಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇಮೇಜ್‌ ಕಡಿಮೆಯಾಗಿದೆ ಎಂದು ಪಕ್ಷ ಕಟ್ಟಲು ಓಡಾಡುತ್ತಿದ್ದಾರೆ ಎಂದು ಟಾಂಗ್‌ ನೀಡಿದ್ದಾರೆ.

ನಾವು ವೀರಣ್ಣಗೌಡರನನ್ನು (Veeranna Gowda) ಬೆಂಬಲಿಸಿ ಎಂಎಲ್‌ಎ ಮಾಡಿದ್ವಿ. ವೀರಣ್ಣಗೌಡರು ಕಾಂಗ್ರೆಸ್‌ಗೆ ಬಂದರು. ಹಾಗಾಗಿ ನಾವು ಕಾಂಗ್ರೆಸ್‌ಗೆ ವಾಪಸ್‌ ಬಂದೆವು ಎಂದರು.

ಎಚ್‌ಡಿಕೆ ಟಾಂಗ್

ಸದ್ಯ ಜೆಡಿಎಸ್‌ (JDS) ಶಾಸಕ ಎಸ್.ಆರ್‌ ಶ್ರೀನಿವಾಸ್‌ ಗೆ (SR Shrinivas) ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತೊಂದು ಟಾಂಗ್‌ ನೀಡಿದ್ದರು.  ಜೆಡಿಎಸ್‌ ಶಾಸಕಗೆ ತಿಳಿಸದೆ ಜೆಡಿಎಸ್‌ ಸಮಾವೇಶ (JDS Program) ಆಯೋಜನೆ ಮಾಡಿದ್ದು,  ಜೆಡಿಎಸ್‌ ಶಾಸಕರಿಗೆ ತಿಳಿಸದೆಯೇ ಕಾರ್ಯಕ್ರಮ ಫಿಕ್ಸ್‌ ಮಾಡಿದ್ದಾರೆನ್ನುವ ಆರೋಪ ಕೇಳಿಬಂದಿತ್ತು.

ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದ್ದು, ಗುಬ್ಬಿ (Gubbi) ಪಟ್ಟಣದ ಸರ್ಕಾರಿ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ತಿಂಗಳ 25ರಂದು ಕಾರ್ಯಕ್ರಮದ ದಿನಾಂಕ ಘೋಷಣೆ ಮಾಡಲಾಗಿದ್ದು, ಕಾರ್ಯಕ್ರಮದ ಪಾಂಪ್ಲೇಟನ್ನು ಕೂಡ ಹೊರಡಿಸಲಾಗಿದೆ.

ಇದೇ ವೇಳೆ ಗುಬ್ಬಿ ಜೆಡಿಎಸ್ ಘಟಕಕ್ಕೆ ಹೊಸ ಮುಖಂಡನ ಸೇರ್ಪಡೆ ಕಾರ್ಯಕ್ರಮವೂ ನಡೆಯಲಿದ್ದು,  ಸಿ.ಎಸ್ ಪುರ ಮೂಲದ ನಾಗರಾಜು (Nagaraju) ಜೆಡಿಎಸ್ಗೆ ಸಮಾವೇಶದ ವೇಳೆ ಸೇರ್ಪಡೆಯಾಗಲಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಿಂದ ಇದೀಗ ಹೊಸದಾಗಿ ಜೆಡಿಎಸ್‌ಗೆ ಸೇರ್ಪಡೆಯಾಗಲು ಸಜ್ಜಾಗಿರುವ ನಾಗರಾಜುಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಮುಂದಾಗಿದ್ದು, ಎಸ್.ಆರ್ ಶ್ರೀನಿವಾಸ್ ಗೆ ಕೋಕ್ ನೀಡಿ ನಾಗರಾಜುಗೆ ಜೆಡಿಎಸ್ ಟಿಕೆಟ್ ನೀಡಲಾಗುತ್ತಿದೆ.

ನನಗೆ ಮಾಹಿತಿ ಇಲ್ಲ

ಜೆಡಿಎಸ್ ಸಮಾವೇಶದ ಬಗ್ಗೆ ಎಸ್.ಆರ್ . ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದು,  ಕಾರ್ಯಕ್ರಮ ಆಯೋಜನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು  ಎಸ್.ಆರ್ ಶ್ರೀನಿವಾಸ್ ಹೇಳಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *