#JrChirubirthday : ಇಂದು ಜೂನಿಯರ್ ಚಿರು ಫಸ್ಟ್ ಬರ್ತ್ ಡೇ

1 /4

ಕಳೆದ ಅಕ್ಟೋಬರ್‌ನಲ್ಲಿ ಮೇಘನಾ ರಾಜ್ ಮತ್ತು ದಿವಂಗತ ಚಿರಂಜೀವಿ ಸರ್ಜಾ ಅವರ ಪ್ರೀತಿಯ ಕುಡಿ ಭೂಮಿಗೆ ಕಾಲಿಟ್ಟಿತು. ಚಿರು ಮತ್ತೆ ತಮ್ಮ ಮಗನ ರೂಪದಲ್ಲಿ ಜನಿಸಿದ್ದಾರೆ ಎಂದು ಇಡೀ ಕರುನಾಡೇ ಮಗುವಿಗೆ ಜೂನಿಯರ್ ಚಿರು ಎಂದು ಕರೆಯಿತು. ಚಿರಂಜೀವಿ ಹಾಗೂ ಮೇಘನಾ ಕುಟುಂಬದವರೂ ಕೂಡ ಚಿರು ಅವರೇ ಮಗನ ರೂಪದಲ್ಲಿ ಮತ್ತೆ ಮನೆಗೆ ಬಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದರು. ಇಂದು ಜೂನಿಯರ್ ಚಿರು ತಮ್ಮ ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

2 /4

ಚಂದನವನದ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಖ್ಯಾತ ನಟಿ ಮೇಘನಾ ರಾಜ್ ಅವರ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) 2020ರ ಅಕ್ಟೋಬರ್ 22ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದರು. ಅಂದಿನಿಂದ ಜೂನಿಯರ್ ಚಿರು ಎಂದೇ ಖ್ಯಾತಿ ಪಡೆದಿರುವ ಮೇಘನಾ ಚಿರಂಜೀವಿ ಅವರ ಮಮತೆಯ ಕುಡಿಯನ್ನು ಪ್ರೀತಿಯಿಂದ ಪ್ರಿನ್ಸ್, ಸಿಂಬಾ ಮತ್ತು ಚಿಂಟು ಎಂದು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.

3 /4

ಜೂನಿಯರ್ ಚಿರುಗೆ ಸೆಪ್ಟೆಂಬರ್ ತಿಂಗಳಿನಲ್ಲಿ ನಾಮಕರಣ ಮಾಡಲಾಯಿತು. ಬಳಿಕ ಮಗನ ಹೆಸರನ್ನು ರಿವೀಲ್ ಮಾಡಿದ ಮೇಘನಾ ರಾಜ್, ನಾವು ನನ್ನ ಮಗನಿಗೆ  ‘ರಾಯನ್ ರಾಜ್ ಸರ್ಜಾ’ (Raayan Raj Sarja) ಎಂದು ಹೆಸರಿಟ್ಟಿದ್ದೇವೆ. ರಾಯನ್ ಎಂದರೆ ಎರಡು ಅರ್ಥಗಳಿವೆ. ಒಂದು ರಾಜಕುಮಾರ ಮತ್ತು ಇನ್ನೊಂದು ಸ್ವರ್ಗದ ಬಾಗಿಲು ಎಂದು ತಿಳಿಸಿದ್ದರು. ಇ

4 /4

ಮೇಘನಾ ರಾಜ್ – ಚಿರಂಜೀವಿ ಸರ್ಜಾ ಅವರನ್ನು 2018 ರಲ್ಲಿ ಅದ್ಧೂರಿಯಾಗಿ ವಿವಾಹವಾದರು. ಇಬ್ಬರು ಮದುವೆಯಾಗಲು ನಿರ್ಧರಿಸುವ ಮೊದಲು ಸುಮಾರು 10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. ಜೂನಿಯರ್ ಚಿರು ಕಳೆದ ವರ್ಷ ಅಕ್ಟೋಬರ್ 22 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದರು. ಕಾಕತಾಳೀಯವಾಗಿ, ಮೇಘನಾ ಮತ್ತು ಚಿರಂಜೀವಿ ಸರ್ಜಾ ಅವರ ನಿಶ್ಚಿತಾರ್ಥದ ದಿನವೇ ಮಗು ಜನಿಸಿತು. ಈ ಎಲ್ಲಾ ಫೋಟೋಗಳನ್ನು ನಟಿ ಮೇಘನಾ ರಾಜ್ ಅವರ Meghana Raj Sarja (@megsraj) ಸೋಶಿಯಲ್ ಮೀಡಿಯಾ ಖಾತೆಯಿಂದ ತೆಗೆದುಕೊಳ್ಳಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *