Petrol price Today : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಲ್ಲಿ ಹೊಸ ದಾಖಲೆ : ನಿಮ್ಮ ನಗರದ ದರ ಇಲ್ಲಿ ಪರಿಶೀಲಿಸಿ
ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ದೇಶಾದ್ಯಂತ ಮತ್ತೊಂದು ಹೊಸ ದಾಖಲೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106.89 ರೂ. 35 ಪೈಸೆ ಏರಿಕೆ ಆಗಿದೆ, ಮತ್ತೆ ಡೀಸೆಲ್ ದರ 95.62 ರೂ. ಇದ್ದು ಇದು ಕೂಡ 35 ಪೈಸೆ ಹೆಚ್ಚಳವಾಗಿದೆ.
ಮುಂಬೈನಲ್ಲಿ, ಪೆಟ್ರೋಲ್(Petrol price) ಅನ್ನು ಪ್ರತಿ ಲೀಟರ್ಗೆ 112.78 ರೂ.ಗೆ ಖರೀದಿಸಬಹುದು, ಈಗ 34 ಪೈಸೆ ಮತ್ತು ಡೀಸೆಲ್ ಬೆಲೆ 103.63 ರೂ., 37 ಪೈಸೆ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 110.61 ರೂ. ಮತ್ತೆ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 101.49 ರೂ. ಇದೆ.
ಚೆನ್ನೈನಲ್ಲಿ, ಒಂದು ಲೀಟರ್ ಪೆಟ್ರೋಲ್ ಬೆಲೆ 103.92 ರೂ, ಇದು 31 ಪೈಸೆ ದುಬಾರಿಯಾಗಿದೆ. ಶುಕ್ರವಾರ, ಪ್ರತಿ ಲೀಟರ್ ಡೀಸೆಲ್ ಬೆಲೆ(Diesel Price) ಪ್ರತಿ ಲೀಟರ್ ಗೆ 99.92 ರೂ, 33 ಪೈಸೆ ಹೆಚ್ಚಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 107.44 ರೂ., ದುಬಾರಿ 33 ಪೈಸೆ ಮತ್ತು ಡೀಸೆಲ್ ಬೆಲೆ 98.73 ರೂ. ಇದು 35 ಪೈಸೆ ಹೆಚ್ಚಾಗಿದೆ.
ಭೋಪಾಲ್ ನಲ್ಲಿ 115.54 ರೂ.ಗೆ ಪೆಟ್ರೋಲ್(Petrol) ಖರೀದಿಸಬಹುದಾಗಿದ್ದು, 37 ಪೈಸೆ ಮತ್ತು ಡೀಸೆಲ್ ಬೆಲೆ 104.89 ರೂ., ದುಬಾರಿ 37 ಪೈಸೆ.