ಬೆಂಗಳೂರಿನಲ್ಲಿ ಇನ್ ಫ್ಲುಯೆಂಜಾ ಮಾದರಿ ಕಾಯಿಲೆ ಏರಿಕೆ: 6 ತಿಂಗಳಲ್ಲಿ 23,745 ಪ್ರಕರಣಗಳು

ಬೆಂಗಳೂರು: ನಗರದಲ್ಲಿ ಇನ್ ಫ್ಲುಯೆಂಜಾ ಮಾದರಿಯ(Influenza Like Illness- ILI) ಕಾಯಿಲೆ ಗಣನೀಯ ಏರಿಕೆ ಕಾಣುತ್ತಿರುವ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ಕಳೆದ 6 ತಿಂಗಳಲ್ಲಿ 23,745 ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ನಾಗರಿಕರು ಎಲ್ಲಾ ಬಗೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಲಬೇಕಾಗಿ ಪರಿಣತರು ಎಚ್ಚರಿಕೆ ನೀಡಿದ್ದಾರೆ. ILI ಕಾಯಿಲೆ ಸಾಂಕ್ರಾಮಿಕವಾಗಿದ್ದು. ರೋಗಿ ಸೀನಿದಾಗ, ಕೆಮ್ಮಿದಾಗ ಹಾಗೂ ಮಾತನಾಡುವ ಸಮಯದಲ್ಲಿ ಎದುರಿನ ವ್ಯಕ್ತಿಗೆ ಹರಡುತ್ತದೆ.

 

ಬಿಬಿಎಂಪಿ ನೀಡೀರುವ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ 9,770 ಪ್ರಕರಣಗಳು ದಾಖಲಾಗಿದ್ದವು. ಜೂನ್ ತಿಂಗಳಲ್ಲಿ 3,399 ಪ್ರಕರಣಗಳು ದಾಖಲಾಗಿದ್ದವು. ಅಗಸ್ಟ್ ನಲ್ಲಿ 2,982 ಹಾಗೂ ಸೆಪ್ಟೆಂಬರ್ ನಲ್ಲಿ 3,960 ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್ ತಿಂಗಳಲ್ಲಿ ಇದುವರೆಗೂ 1,373 ಪ್ರಕರಣಗಳು ಪತ್ತೆಯಾಗಿವೆ. ತಿಂಗಳಾಂತ್ಯದ ವೇಳೆಗೆ ಈ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ.

 

ಕೊರೊನಾಗೆ ಎಲ್ಲರೂ ಪ್ರಾಮುಖ್ಯತೆ ನೀಡುತ್ತಿದ್ದು, ಇತರೆ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇನ್ ಫ್ಲುಯೆಂಜಾ ಬಂದರೂ ರೋಗಿಗಳು ಔಷಧ ಹಾಗೂ ಲಸಿಕೆ ತೆಗೆದುಕೊಳ್ಳುತ್ತಿಲ್ಲ. ಅದರಿಂದಾಗಿ Influenza Like Illness ಪ್ರಕ್ರಣಗಳು ಏರಿಕೆ ಕಾಣುತ್ತಿವೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ತಡೆಗಟ್ಟುವುದು ಹೇಗೆ?

  • ಕಾಯಿಲೆಯಿಂದ ಬಳಲುತ್ತಿರುವವರಿಂದ ದೂರ ಇರುವುದು. ನಿಮಗೆ ಹುಷಾರು ತಪ್ಪಿದಾಗ ನೀವೂ ಇತರರಿಂದ ಅಂತರ ಕಾಯ್ದುಕೊಳ್ಳುವುದು.
  • ಸೀನುವಾಗ, ಕೆಮ್ಮುವಾಗ ಕೈಯ್ಯನ್ನು ಅಡ್ಡಗಟ್ಟುವುದು, ಬಾಯಿ ಮುಚ್ಚಿಕೊಳ್ಳುವುದು
  • ಸ್ವಚ್ಚತೆ ಕಾಪಾಡಿಕೊಳ್ಳುವುದು. ಕೈ ತೊಳೆದುಕೊಳ್ಳುವುದು.
  • ಕೈಗಳಿಂದ ಆಗಾಗ್ಗೆ ಕಣ್ಣು, ಮೂಗು, ಬಾಯನ್ನು ಮುಟ್ಟಿಕೊಳ್ಳದೇ ಇರುವುದು
  • ಆರೋಗ್ಯಯುತ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು. ಚೆನ್ನಾಗಿ ನೀರು ಕುಡಿಯುವುದು. ಪೋಷಕಾಂಶಯುಕ್ತ ಆಹಾರ ಸೇವನೆ, ಯೋಗ, ಉಸಿರಾಟ ವ್ಯಾಯಾಮ ಮತ್ತು ಚಿಂತೆ ಮಾಡದಿರುವುದು.
  • ಮನೆಯಲ್ಲಿ ಕಾಯಿಲೆಪೀಡಿತರಿದ್ದಲ್ಲಿ ಮನೆಯನ್ನು ಹಾಗೂ ಟೇಬಲ್ ಮತ್ತಿತರ ಸ್ಥಳಗಳನ್ನು ಸ್ವಚ್ಚ ಮಾಡುವುದು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *