39 ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಕಾಯಂ ಹುದ್ದೆ!

* ನಿವೃತ್ತಿ ವಯಸ್ಸು ಆಗುವವರೆಗೂ ಉದ್ಯೋಗ

* 39 ಮಹಿಳೆಯರಿಗೆ ಸೇನೆಯಲ್ಲಿ ‘ಪರ್ಮನಂಟ್‌ ಕಮಿಶನ್‌’

* ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿಕೆ

* 1 ವಾರದಲ್ಲಿ ಆದೇಶ ಪತ್ರ ನೀಡಿ: ಕೋರ್ಟ್‌ ಸೂಚನೆ

* ಮಹಿಳಾ ಸೇನಾಧಿಕಾರಿಗಳಿಗೆ ಮತ್ತೊಂದು ಜಯ

ನವದೆಹಲಿ(ಅ.23): ಸೇನೆಯ ಕೆಲವು ಮಹತ್ವದ ಹುದ್ದೆಗಳಲ್ಲಿ ಮಹಿಳೆಯರಿಗೂ ಸ್ಥಾನ ಲಭ್ಯವಾದ ಬೆನ್ನಲ್ಲೇ, ಮಹಿಳಾ ಸೇನಾಧಿಕಾರಿಗಳಿಗೆ(women Army officers) ಕಾನೂನು ಹೋರಾಟದಲ್ಲಿ ಮತ್ತೊಂದು ಜಯ ಸಿಕ್ಕಿದೆ. 39 ಮಹಿಳಾ ಸೇನಾಧಿಕಾರಿಗಳಿಗೆ ಪರ್ಮನಂಟ್‌ ಕಮಿಶನ್‌ (Permanent commission) ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ(Supreme Court) ಮಾಹಿತಿ ನೀಡಿದೆ. ಇದಕ್ಕೆ ಒಪ್ಪಿರುವ ಸುಪ್ರೀಂ ಕೋರ್ಟ್‌ 7 ದಿನದಲ್ಲಿ ಇವರಿಗೆ ನೇಮಕ ಆದೇಶ ಪತ್ರ ನೀಡಬೇಕು ಎಂದು ಸೂಚಿಸಿದೆ.

ಸೇನೆಯ 72 ಮಹಿಳಾ ಶಾರ್ಟ್‌ ಸರ್ವೀಸ್ ಕಮಿಶನ್ಡ್(Short Service Commission) ಅಧಿಕಾರಿಳಿಗೆ (ಸೇವೆ ಆರಂಭಿಸಿದ 14ನೇ ವರ್ಷಕ್ಕೆ ನಿವೃತ್ತಗೊಳ್ಳುವ) ಅಧಿಕಾರಿಗಳಿಗೆ ಪರ್ಮನಂಟ್‌ ಕಲ್ಪಿಸುವ ವಿಷಯವಾಗಿ ಸ್ಪಷ್ಟನಿರ್ಧಾರಕ್ಕೆ ಬರುವಂತೆ ಸುಪ್ರೀಂಕೋರ್ಟ್‌ ಕಳೆದ ಮಾಚ್‌ರ್‍ನಲ್ಲಿ ಕೇಂದ್ರ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಿತ್ತು. ಅನಂತರ ಅ.1ರಂದು 72 ಮಹಿಳೆಯರಿಗೆ ಶಾಶ್ವತ ಆಯೋಗ ಕಲ್ಪಿಸದಿರಲು ಕಾರಣ ಏನು ಎಂದು ಕೇಳಿತ್ತು.

ಈ ಸಂಬಂಧ ಶುಕ್ರವಾರ ನಡೆದ ವಿಚಾರಣೆ ವೇಳೆ ಸರ್ಕಾರಿ ವಕೀಲರು ಪ್ರತಿಕ್ರಿಯಿಸಿ ‘ಒಟ್ಟು 72 ಮಹಿಳಾ ಅಧಿಕಾರಿಗಳ ಪೈಕಿ 39 ಮಹಿಳೆಯರು ಪರ್ಮನಂಟ್‌ ಕಮಿಶನ್‌ಗೆ ಅರ್ಹರಾಗಿದ್ದಾರೆ. ಏಳು ಮಂದಿ ವೈದ್ಯಕೀಯ ಪರೀಕ್ಷೆಯಲ್ಲಿ ನಪಾಸಾಗಿದ್ದಾರೆ. ಉಳಿದ 25 ಮಂದಿ ವಿರುದ್ಧ ಶಿಸ್ತಿನ ಸಂಬಂಧ ಗಂಭೀರ ದೂರುಗಳಿವೆ. ಓರ್ವ ಮಹಿಳೆ ತಾವಾಗಿಯೇ ಹಿಂದೆ ಸರಿದಿದ್ದಾರೆ’ ಎಂದು ಸುಪ್ರೀಂಕೋರ್ಟ್‌ ತ್ರಿಸದಸ್ಯಪೀಠಕ್ಕೆ ತಿಳಿಸಿದರು.

ಪರ್ಮನಂಟ್‌ ಕಮಿಶನ್‌ ಎಂದರೆ ನಿವೃತ್ತಿಯವರೆಗೂ ಸೇನಾ ವೃತ್ತಿಯಲ್ಲಿ ಇರುವುದು. ಶಾರ್ಟ್‌ ಸವೀರ್‍ಸ್‌ ಕಮಿಶನ್‌್ಡ ಹುದ್ದೆಯು 14 ವರ್ಷಗಳ ಅವಧಿಯದ್ದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *