ಬೀದರ್: ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭಾಲ್ಕಿ ತಾಲೂಕಿನ ಚಳಕಾಪುರವಾಡಿಗೆ ಭೇಟಿ ನೀಡಿದರು.
ಬೀದರ್: ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭಾಲ್ಕಿ ತಾಲೂಕಿನ ಚಳಕಾಪುರವಾಡಿಗೆ ಭೇಟಿ ನೀಡಿದರು. ಆಗಸ್ಟ್ 5ರಂದು ಹೊಲದಲ್ಲಿ ಕೆಲಸ ಮಾಡುವಾಗ ಅಚಾನಕ್ಕಾಗಿ ಮೂವರು ಗಂಡು ಮಕ್ಕಳು ಏಕಕಾಲಕ್ಕೆ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಆಘಾತದಲ್ಲಿದ್ದ ಧೂಳಪ್ಪ ಬನ್ನಾಳೆ ಎಂಬ ರೈತನ ಕುಟುಂಬದ ಸದಸ್ಯರಿಗೆ ಸಚಿವ ಚವ್ಹಾಣ್ ಇದೇ ವೇಳೆ ಸಾಂತ್ವನ ಹೇಳಿದರು.
ಘಟನೆಯ ಕುರಿತು ಕುಟುಂಬದವರಿಂದ ಮಾಹಿತಿ ಪಡೆದುಕೊಂಡ ಸಚಿವರು, ಇಡೀ ಕುಟುಂಬಕ್ಕೆ ಆಧಾರ ಸ್ಥಂಭದಂತಿದ್ದ, ಎದೆಯೆತ್ತರ ಬೆಳೆದಿದ್ದ ಹೆತ್ತ ಮಕ್ಕಳನ್ನು ಕಳೆದುಕೊಂಡು ತಾವು ದುಃಖದಲ್ಲಿದ್ದೀರಿ. ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ರೈತ ಧೂಳಪ್ಪ ಬನ್ನಾಳೆ ಮತ್ತು ಪರಿವಾರದವರಿಗೆ ಧೈರ್ಯ ತುಂಬಿದರು.
ವರದಿ:-ಮಹೇಶ ಸಜ್ಜನ ಬೀದರ