Shah Rukh Khanಗೂ ಮುಂಚೆ ಆ ಮನೆಯಲ್ಲಿ ಯಾರಿದ್ದರು? ಗಾಂಧಿ ಕುಟುಂಬಕ್ಕೂ ಮನ್ನತ್ ಮನೆಗೂ ನಂಟು ಇದ್ಯಾ?
ಶಾರುಖ್ ಖಾನ್ (Shah Rukh Khan) ಬಾಲಿವುಡ್ನ ಖ್ಯಾತ ನಟ. ಕೆಲವು ತಿಂಗಳಿನಿಂದ ಕಿಂಗ್ ಖಾನ್ ಮತ್ತು ಅವರ ಮಗ ಅರ್ಯನ್ ಖಾನ್ (Aryan Khan) ಡ್ರಗ್ಸ್ ಸೇವನೆ ಕುರಿತಾದ ಸುದ್ದಿ ವೈರಲ್ ಆಗುತ್ತಿದೆ. ಈ ವಿಚಾರ ಬದಿಗಿಟ್ಟು ಶಾರುಖ್ ಖಾನ್ ಕುರಿತಾದ ಇನ್ನಿತರ ವಿಚಾರವನ್ನು ಗಮನಿಸುದಾದರೆ ಕಿಂಗ್ ಖಾನ್ ಭವ್ಯ ಬಂಗಲೆ ಕೂಡ ಸುದ್ದಿಯಲ್ಲಿದೆ. ಶಾರುಖ್ ಕನಸಿನ ಮನೆ ‘ಮನ್ನತ್’ (Mannat). ಮುಂಬೈಗೆ ಹೋಗುವ ಪ್ರತಿಯೊಬ್ಬ ವ್ಯಕ್ತಿಯು ಶಾರುಖ್ ಮನೆಯ ಮನೆಯ ಮುಂದೆ ಒಂದು ಫೋಟೋ ಕ್ಲಿಕ್ಕಿಸದರೆ ಇರಲಾರರು. ಪ್ರತಿ ದಿನ ‘ಮನ್ನತ್’ ಹೊರಗಡೆ ನೂರಾರು ಜನರು ಸೇರಿರುತ್ತಾರೆ. ಬಾಂದ್ರಾದಲ್ಲಿರುವ ಈ ಮನೆಯನ್ನು ದೂರದಿಂದ ನೋಡುವುದರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಆದರೆ ಈ ಐಷಾರಾಮಿ ಮನೆಯ ಬಗ್ಗೆ ಕೆಲವೊಂದು ಗೊತ್ತಿಲ್ಲದ ಸಂಗತಿಯಿದೆ. ಶಾರುಖ್ ಖಾನ್ಗೂ ಮೊದಲು ಇಲ್ಲಿ ಯಾರು ವಾಸಿಸುತ್ತಿದ್ದರು?. ಅವರ ಹೆಸರೇನು? ಎಂಬ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಆ ಕುರಿತಾಗಿ ಮಾಹಿತಿ ಇಲ್ಲಿದೆ.
ಶಾರುಖ್ ಖಾನ್ ‘ಮನ್ನತ್’ ಮನೆಯ ಹಿಂದಿನ ಹೆಸರು ‘ವಿಲ್ಲಾ ವಿಯೆನ್ನಾ’. ಇದರ ಮೂಲ ಮಾಲೀಕರು ಗುಜರಾತಿ ಮೂಲದ ಪಾರ್ಸಿ ವ್ಯಕ್ತಿಯಾದ ಕೇಕು ಗಾಂಧಿ. ಕೇಕು ಜಿ ಒಬ್ಬ ಪ್ರಸಿದ್ಧ ಕುಶಲಕರ್ಮಿ ಮತ್ತು ಗ್ಯಾಲರಿಸ್ಟ್. ‘ಕೆಕೀ ಮಂಜಿಲ್’ ಎಂದು ಹೆಸರಿಸಲಾದ ‘ವಿಲ್ಲಾ ವಿಯೆನ್ನಾ’ದ ಮುಂದಿನ ಕಟ್ಟಡವೂ ಇದೇ ಮಾಲೀಕರಿಗೆ ಸೇರಿತ್ತು. ಕೇಕು ಜಿ ಅವರ ತಾಯಿಯ ಅಜ್ಜ ಮಾನೆಕ್ಜಿ ಬಟ್ಲಿವಾಲಾ ಅವರು ‘ಕೇಕಿ ಮಂಜಿಲ್’ ನಲ್ಲಿ ವಾಸಿಸುತ್ತಿದ್ದರು. ಅವರ ಮಗಳು ಅಂದರೆ ಕೇಕು ಗಾಂಧಿಯವರ ತಾಯಿ ವಿಲ್ಲಾ ವಿಯೆನ್ನಾ ಅಕಾ ಮನ್ನತ್‌ನಲ್ಲಿ ವಾಸಿಸುತ್ತಿದ್ದರು.

ಮಾನೆಕೇಜಿ ಬಟ್ಲಿವಾಲಾ ವಿಲ್ಲಾ ವಿಯೆನ್ನಾವನ್ನು ಆರ್ಥಿಕ ನಷ್ಟದಿಂದ ಗುತ್ತಿಗೆಗೆ ಪಡೆದರು ಮತ್ತು ಅವರ ಇಡೀ ಕುಟುಂಬವು ‘ಕೇಕಿ ಮಂಜಿಲ್’ ನಲ್ಲಿ ವಾಸಿಸಲು ಪ್ರಾರಂಭಿಸಿತು. ಅಂತಿಮವಾಗಿ, ವಿಲ್ಲಾ ವಿಯೆನ್ನಾ ನಾರಿಮನ್ ದುಬಾಶ್ ಹೆಸರಾಯಿತು.

ಶಾರುಖ್ ಖಾನ್ ಈ ಮನೆಯನ್ನು ನಾರಿಮನ್ ದುಬಾಶ್ ಅವರಿಂದ 13.32 ಕೋಟಿಗೆ ಖರೀದಿಸಿದ್ದಾರೆ. ಶಾರುಖ್ ಖಾನ್ ದುಬಾಶ್ ಮನೆಯನ್ನು ಖರೀದಿಸಲು ಮನವರಿಕೆ ಮಾಡಬೇಕಾಯಿಯು ಎಂದು ಹೇಳಲಾಗುತ್ತದೆ, ಏಕೆಂದರೆ ಶಾರುಖ್ ಮನೆಯನ್ನು ಅದರ ಸ್ಥಳ, ಪ್ರದೇಶ ಇತ್ಯಾದಿಗಳಿಂದ ಖರೀದಿಸಲು ಹತಾಶರಾಗಿದ್ದರು. ಕೊನೆಗೆ ಖರೀದಿಸಿದರು.
ಆರಂಭದಲ್ಲಿ ಶಾರುಖ್ ತಮ್ಮ ಹೊಸ ಮನೆಗೆ ‘ಜನ್ನತ್’ ಎಂದು ಹೆಸರಿಡಲು ಬಯಸಿದ್ದರು, ಆದರೆ ಅವರು ಮನೆಯನ್ನು ಖರೀದಿಸಿದ ನಂತರ ಅವರ ಎಲ್ಲಾ ಆಸೆಗಳು ಈಡೇರಿದವು, ಆದ್ದರಿಂದ ಅವರು ತಮ್ಮ ಮನೆಗೆ ‘ಮನ್ನತ್’ ಎಂದು ನಾಮಕರಣ ಮಾಡಿದರು.
ಸದ್ಯ ಶಾರುಖ್ ಈ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪತ್ನಿ ಗೌರಿ ಖಾನ್ ಮತ್ತು ಮಕ್ಕಳೊಂದಿಗೆ ಈ ಭವ್ಯ ಬಂಗಲೆಯಲ್ಲಿ ಇದ್ದಾರೆ.