Goa Election: ಇಂದು ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ
ನವದೆಹಲಿ, ಅ. 28: ಮುಂದಿನ ವರ್ಷದ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ಉತ್ತ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರ ಖಂಡ (Uttarakhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. 2024ರ ಲೋಕಸಭಾ ಚುನಾವಣೆಯ (2024 Lokasabha Election) ದೃಷ್ಟಿಯಿಂದ ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದ್ದರೆ ಸ್ಥಳೀಯ ಪಕ್ಷಗಳಾದ ಆಮ್ ಆದ್ಮಿಪಕ್ಷ (Aam Admi Party) ಮತ್ತು ತೃಣಮೂಲ ಕಾಂಗ್ರೆಸ್ (Trinomial Congress) ಗಳಿಗೆ ನೆಲೆ ವಿಸ್ತರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾದುದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಟಿಎಂಸಿ ಅಧಿನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banarji) ಗೋವಾಕ್ಕೆ ಭೇಟಿ ನೀಡಿ ಅಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
2 ಗೋವಾದಲ್ಲಿ ದೀದಿ ವಾಸ್ತವ್ಯ
ತೃಣಮೂಲ ಕಾಂಗ್ರೆಸ್ ಪಕ್ಷ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಾಗಿ ಘೋಷಿಸಿದಾಗಲೇ ಇಂಥದೊಂದು ಕುತೂಹಲ ನಿರ್ಮಾಣ ಆಗಿತ್ತು. ಬಳಿಕ ಟಿಎಂಸಿ ಗೋವಾದಲ್ಲಿ ತನ್ನ ಚುನಾವಣಾ ತಯಾರಿಯನ್ನು ಚುರುಕುಗೊಳಿಸಿತ್ತು. ಈಗ ಎರಡು ದಿನ ಗೋವಾದಲ್ಲಿ ಇರಲಿರುವ ಮಮತಾ ಬ್ಯಾನರ್ಜಿ ಗೋವಾ ವಿಧಾನಸಭಾ ಚುನಾವಣೆಗೆ ಇನ್ನಷ್ಟು ಮೆರುಗು ನೀಡಲಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಲುಝಿನ್ಹೋ ಫಲೇರೋ (Former Chief Minister Luizinho Falerio) ಮತ್ತು ಕಾಂಗ್ರೆಸ್ (Congress) ಪಕ್ಷದ ಇತರ ದೊಡ್ಡ ನಾಯಕರು ಟಿಎಂಸಿ ಸೇರಿಕೊಂಡಿದ್ದು ಮಮತಾ ಬ್ಯಾನರ್ಜಿ ಭೇಟಿ ವೇಳೆ ಇನ್ನಷ್ಟು ನಾಯಕರು ಟಿಎಂಸಿ ಸೇರುವ ಸಾಧ್ಯತೆ ಇದೆ.
ಟಿಂಎಂಸಿ ಪರ ಪ್ರಶಾಂತ್ ಕಿಶೋರ್ ರಣತಂತ್ರ
ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಭೇಟಿ ನೀಡುವ ವೇಳೆ ಅಲೆ ಸೃಷ್ಟಿ ಮಾಡಬೇಕು ಎಂಬ ಕಾರಣಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Election Strategist Prashant Kishor) ಗೋವಾದಲ್ಲಿ ದೀರ್ಘಕಾಲ ಬೀಡು ಬಿಟ್ಟಿದ್ದು ಟಿಎಂಸಿ ಪರ ರಣತಂತ್ರ ರೂಪಿಸುತ್ತಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ ಸೆಪ್ಟೆಂಬರ್ 29ರಂದು ಟಿಎಂಸಿ ಸೇರಿದ್ದ ಕಾಂಗ್ರೆಸ್ ನಾಯಕ ಲುಝಿನ್ಹೋ ಫಲೇರೋ ಅವರಿಗೆ ಈಗ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಮುಂದೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ (TMC general secretary Abhishek Banerjee) ಕೂಡ ಗೋವಾ ಪ್ರವಾಸ ಕೈಗೊಳ್ಳಲಿದ್ದಾರೆ.
ಇತ್ತೀಚೆಗೆ ಗೋವಾ ಪ್ರವಾಸದಲ್ಲಿದ್ದ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡೇರಿಕ್ ಓ’ಬ್ರೆಯನ್ (Trinamool Congress Rajasabha Member Derek O’Brien), ಗಾಯಕ ಲಕ್ಕಿ ಅಲಿ (Singer Lucky Ali) ಮತ್ತು ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಫೀಸಾ ಅಲಿ (Actress and Activist Nafisa Ali) ಅವರನ್ನು ಭೇಟಿ ಮಾಡಿ ಇವರಿಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ್ದ ಡೇರಿಕ್ ಓ’ಬ್ರೆಯನ್, ‘ರಾಜಕಾರಣಿಗಳು ಮಾತ್ರವಲ್ಲ, ನಾವು ಎಲ್ಲಾ ವರ್ಗದ ಜನರನ್ನು, ನಿರ್ದಿಷ್ಟವಾಗಿ ನಾಗರಿಕ ಸಮಾಜದ (Civil Society) ಜನರನ್ನು ಭೇಟಿಯಾಗುತ್ತಿದ್ದೇವೆ. ಹಾಗಾಗಿ ಎಲ್ಲೆಡೆಯಿಂದ ಜನರು ಟಿಎಂಸಿಗೆ ಸೇರುವುದನ್ನು ನೀವು ನೋಡುತ್ತೀದ್ದೀರಿ’ ಎಂದು ಹೇಳಿದ್ದರು. ಮಮತಾ ಬ್ಯಾನರ್ಜಿ ವೇಳೆ ಡೇರಿಕ್ ಓ’ಬ್ರೆಯನ್ ಹೇಳಿದಂತೆ ಕೆಲವು ಬೆಳವಣಿಗೆಗಳು ಆಗುವ ಸಾಧ್ಯತೆ ಇದೆ.
ಅಕ್ಟೋಬರ್ 30ಕ್ಕೆ ರಾಹುಲ್ ಗಾಂಧಿ ಭೇಟಿ
ಇನ್ನೊಂದೆಡೆ ಬೇರೆಲ್ಲಾ ರಾಜಕೀಯ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷದ ಪಾಲಿಗೆ ಗೋವಾ ಚುನಾವಣೆ ಅತ್ಯಂತ ನಿರ್ಣಾಯಕಾವಾಗಿವೆ. ಈ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 30ರಂದು ಎಐಸಿಸಿ ಮಾಜಿ ಅಧ್ಯಕ್ಷರೂ ಹಾಗೂ ಸಂಸದರೂ ಆದ ರಾಹುಲ್ ಗಾಂಧಿ (AICC Former President Rahul Gandhi) ಗೋವಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ (Election Campaign) ನೀಡಲಿರುವ ರಾಹುಲ್ ಗಾಂಧಿ ಅವರು ಅಲ್ಲಿ ಸಮಾಜದ ವಿವಿಧ ವರ್ಗದ ಜನರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕಡಲ ತೀರದ ರಾಜ್ಯದಲ್ಲಿ ತೀವ್ರ ಸಮಸ್ಯೆಯಲ್ಲಿರುವ ಮೀನುಗಾರರು (Fisherman) ಮತ್ತು ಗಣಿ ನಿಷೇಧದಿಂದ ಸಂತ್ರಸ್ತರಾಗಿರುವವರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ ಎಂಬುದು ಖಚಿತವಾಗಿದೆ. ರಾಹುಲ್ ಗಾಂಧಿ ಅವರು ಗೋವಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಗೋವಾ ಕಾಂಗ್ರೆಸ್ ಉಸ್ತುವಾರಿಯಾದ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ (Dinesh Gundurao), ಗೋವಾ ಚುನಾವಣಾ ಉಸ್ತುವಾರಿ ಪಿ. ಚಿದಂಬರಂ (P. Chidambaram) ಮತ್ತು ಗೋವಾ ಕಾಂಗ್ರೆಸ್ ನಾಯಕರು ಉಪಸ್ಥಿತರಿರಲಿದ್ದಾರೆ.