ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನಿಂದ 9 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ವಶ

ಬೆಂಗಳೂರು: ಡಾರ್ಕ್ ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ತರುತ್ತಿದ್ದಾಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಕುಖ್ಯಾತ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಶದಿಂದ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್ (ಕ್ರಿಪ್ಟೋ ಕರೆನ್ಸಿ)ಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಯನಗರ ನಿವಾಸಿಯಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (25)ಯ ವಿಚಾರಣೆ ಮುಂದುವರಿದಿದ್ದು, ಅಂತಾರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಗಳನ್ನು , ಬೇರೆ ಬೇರೆ ದೇಶದ ವಿವಿಧ ಪೋಕರ್ ಗೇಮ್ ವೆಬ್ ಸೈಟ್ ಗಳನ್ನು ಮತ್ತು ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್ , ವೈಎಫ್ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಶ್ರೀಕೃಷ್ಣ ತನ್ನ ಸಹಚರರಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್, ಹೇಮಂತ್ ಮುದ್ದಪ್ಪ, ರಾಬಿನ್ ಖಂಡೇಲ್ ವಾಲ್ ಹಾಗೂ ಇತರರೊಂದಿಗೆ ಸೇರಿಕೊಂಡು ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ದೇಶದ ಹಾಗೂ ಬೇರೆ ಬೇರೆ ದೇಶಗಳ ಪೋಕರ್ ಗೇಮಿಂಗ್ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ, ಡೇಟಾವನ್ನು ಕಳವು ಮಾಡಿ, ಆ ಡೇಟಾವನ್ನು ತಮ್ಮ ಗೇಮಿಂಗ್ ವೆಬ್ ಸೈಟ್ ಉಪಯೋಗಿಸಿಕೊಳ್ಳುವ ಪ್ರವೃತ್ತಿ ಹೊಂದಿದ್ದಾನೆ.

3 ಬಿಟ್ ಕಾಯಿನ್ ಎಕ್ಸ್ ಜೇಂಜಸ್, 10 ಪೋಕರ್ ವೆಬ್ ಸೈಟ್ , 4 ವೆಬ್ ಸೈಟ್, 3 ಮಾಲ್ವಾರ್ಸ್ ಎಕ್ಸ್ ಪ್ಲೋಯ್ಟಡ್ ಹ್ಯಾಕ್ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಈ ತನಿಖಾ ಪ್ರಗತಿಯ ಮಾಹಿತಿಯನ್ನು ಇಂಟರ್ ಪೋಲ್ ಮುಖಾಂತರ ಸಂಬಂಧಿಸಿದ ಕಂಪನಿಗಳಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ಆರೋಪಿ ಪ್ರತಿಷ್ಠಿತ ಹೋಟೆಲ್ ಗಳಲ್ಲಿ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದು, ಐಶಾರಾಮಿ ಜೀವನಕ್ಕಾಗಿ ಬಿಟ್ ಕಾಯಿನ್ ಖಾತೆಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಬಿಟ್ ಕಾಯಿನ್ ಗಳನ್ಉ ಕಳವು ಮಾಡಿ ಬಿಟ್ ಕಾಯಿನ್ ಟ್ರೇಡರ್ ರಾಬಿನ್ ಖಂಡೇಲ್ ವಾಲ್ ಸೇರಿದಂತೆ ಇತರ ಬಿಟ್ ಕಾಯಿನ್ ಟ್ರೇಡರ್ ಗಳಿಗೆ ನೀಡಿ ಅವರಿಂದ ತನ್ನ ಸಹಚರರ ಬ್ಯಾಂಕ್ ಖಾತೆಗೆ ಹಾಗೂ ಹವಾಲ ಮುಖಾಂತರ ಹಣವನ್ನು ಸಂಗ್ರಹಿಸಿಕೊಂಡು ಐಶಾರಾಮಿ ಜೀವನ ನಡೆಸಿಕೊಂಡಿದ್ದಾನೆ.

ಮಾತ್ರವಲ್ಲ ಡಾರ್ಕ್ ವೆಬ್ ಸೈಟ್ ಗಳನ್ನು ಉಪಯೋಗಿಸಿ ಬೇರೆ ಬೇರೆ ದೇಶಗಳಿಂದ ಡ್ರಗ್ಸ್ ಗಳನ್ನು ಖರೀದಿಸಿ ಕದ್ದಿರುವ ಬಿಟ್ ಕಾಯಿನ್ ಗಳನ್ನು ಉಪಯೋಗಿಸುತ್ತಿದ್ದರು.

ಬಿಟ್ ಕಾಯಿನ್ ಖಾತೆ ಹ್ಯಾಂಕಿಂಗ್ ಗಾಗಿ ಬಿಟ್ ಕಾಯಿನ್ ಖಾತೆಗಳ ಮಾಹಿತಿ ಪಡೆಯಲು, ಪ್ರೈವೇಟ್ ಕೀಗಳನ್ನು ಕಳವು ಮಾಡಲು, ವರ್ಗಾವಣೆ ಮಾಡಿಕೊಳ್ಳಲು ಕೆಲವು ಹ್ಯಾಕಿಂಗ್ ಟೂಲ್ ಗಳನ್ನು ಹಾಗೂ ವೆಬ್ ಸೈಟ್ ಗಳನ್ನು ಉಪಯೋಗಿಸಿಕೊಂಡಿರುತ್ತಾನೆ.

2019ನೇ ಸಾಲಿನಲ್ಲಿ ಆರೋಪಿಯು ಅಕ್ರಮವಾಗಿ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕರ್ನಾಟಕ ಸರ್ಕಾರದ ಇ=ಪ್ರಕ್ಯೂರ್ ಮೆಂಟ್ ಸೈಟ್ ಅನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ತನ್ನ ಸಹಚರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡಿದ್ದಾನೆ.

ಇದುವರೆಗೆ ಈತನಿಂದ ಅಕ್ರಮವಾಗಿ ಹ್ಯಾಕ್ ಮಾಡಿ ಸಂಪಾದಿಸಿದ್ದ 9 ಕೋಟಿ ರೂ.ಮೌಲ್ಯದ 31 ಬಿಟ್ ಕಾಯಿನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಬಿ.ಎಸ್. ಅಂಗಡಿ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಗಳಾದ ಶ್ರೀಧರ ಪೂಜಾರ, ಲಕ್ಷ್ಮೀಕಾಂತಯ್ಯ, ಚಂದ್ರಧರ ಮತ್ತು ಪ್ರಶಾಂತ್ ಬಾಬು, ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *