ಬೆಂಗಳೂರು: ಅರ್ಕಾವತಿ ಬಡಾವಣೆ ನಿವಾಸಿಗಳಿಗೆ ಹಾವುಗಳ ಕಾಟ

ಬೆಂಗಳೂರು: ಸುಮಾರು 1 ಸಾವಿರ ನಿವೇಶನಗಳನ್ನು ಒಳಗೊಂಡಿರುವ ಚಳಗೆರೆ ಪ್ರದೇಶದ 19ನೇ ಬ್ಲಾಕ್  ವ್ಯಾಜ್ಯದಿಂದ ಮುಕ್ತವಾಗಿದ್ದು, ಅರ್ಕಾವತಿ ಲೇಔಟ್ ನ ಇತರ ಭಾಗಗಳಿಗಿಂತ ಭಿನ್ನವಾಗಿದೆ.  ಆದಾಗ್ಯೂ, ಈ ಲೇಔಟ್ ನಲ್ಲಿ ಸಂಪೂರ್ಣ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ತುಂಬಿ ಹರಿಯುವ ಚರಂಡಿಗಳು ಹಾಗೂ ರಾಶಿ ರಾಶಿ ಕಸದಿಂದಾಗಿ ಹಾವುಗಳು ನಿತ್ಯ ಬರುವಂತಾಗಿದೆ.

ಇತ್ತೀಚಿನ ಮಳೆಯ ಸಮಯದಲ್ಲಿ ಸರೀಸೃಪಗಳ ಕಾಟ ವಿಪರೀತವಾಗಿದ್ದು,  ಹಾವುಗಳು ತಮ್ಮ ಮನೆಗಳಿಗೆ ಪ್ರವೇಶಿಸುತ್ತವೆ ಎಂಬ ಭಯದಿಂದ ನೆಲ ಮಹಡಿಯಲ್ಲಿರುವ ಕೆಲವು ಕುಟುಂಬಗಳು ರಾತ್ರಿಯಿಡೀ ತಾರಸಿಯ ಮೇಲೆ ಕಾಲ ಕಳೆಯುವಂತಾಗಿದೆ ಎಂದು ನಿವಾಸಿ ವಿಮಲೇಶ್ ಚಿನ್ನಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಚರಂಡಿಯಿಂದ ರಾಜಕಾಲುವೆವರೆಗೆ ವಿನ್ಯಾಸ ತಪ್ಪಿರುವುದು ಮುಖ್ಯ ಸಮಸ್ಯೆಯಾಗಿದೆ. ಎರಡನೆಯದು ಎತ್ತರದ ಸ್ಥಳದಲ್ಲಿದ್ದು, ಮಳೆಯಾದಾಗ ನೀರು ಹಿಮ್ಮುಖ ದಿಕ್ಕಿನಲ್ಲಿ ಹರಿದು, ಸಂಪೂರ್ಣವಾಗಿ ಮಳೆ ನೀರು ತುಂಬಿಕೊಳ್ಳುತ್ತದೆ ಎಂದು 19ನೇ ಬ್ಲಾಕ್ ಅರ್ಕಾವತಿ ಲೇಔಟ್ ಭೂಮಾಲೀಕರು ಮತ್ತು ಹಂಚಿಕೆದಾರರ ಸಂಘದ ಜಂಟಿ ಕಾರ್ಯದರ್ಶಿ ಆರ್. ಕಿಶೋರ್ ಹೇಳುತ್ತಾರೆ. ಇಲ್ಲಿನ ಜನರು ತಿಂಗಳಿಗೆ 6 ಸಾವಿರದಿಂದ ಏಳು ಸಾವಿರ ರೂ. ಶುಲ್ಕ ಪಾವತಿಸಿದರೂ ನೂತನ ಕಟ್ಟಡಗಳಿಗೆ ದಿನ ನಿತ್ಯ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ ಎಂದು ಅವರು ತಿಳಿಸಿದರು.

ಮಳೆ ಬಂದಾಗ ರಸ್ತೆ ಮೇಲೆ ಎರಡು ಅಡಿ ನೀರು ತುಂಬಿ, ಜನರು ಓಡಾದಂತಾಗುತ್ತದೆ ಎಂದು ಶಿಕ್ಷಕ ಕೆ. ಅಮರ್ ಸಮಸ್ಯೆಗಳನ್ನು ತೋಡಿಕೊಂಡರು. ಅರ್ಕಾವತಿ ಲೇಔಟ್ ಗೆ  ಮೂಲಸೌಕರ್ಯವನ್ನು ಕಲ್ಪಿಸಲು ಎರಡು ವರ್ಷಗಳ ಹಿಂದೆಯೇ  ಬಿಡಬ್ಲ್ಯೂಎಸ್ ಎಸ್ ಬಿಗೆ   75 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಬಿಡಿಎ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಿ. ಕುಮಾರ್ ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *