Financial Investment Tips: ಈ ರೀತಿ ಹೂಡಿಕೆ ಮಾಡಿದರೆ ಕೇವಲ 12 ವರ್ಷಗಳಲ್ಲಿ ನೀವೂ ಕೂಡ ಕೋಟ್ಯಾಧಿಪತಿಯಾಗಬಹುದು
Investment Ideas – ಇತ್ತೀಚಿನ ದಿನಗಳಲ್ಲಿ ಅನೇಕ ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳ (Mutual Fund) ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ ಏಕೆಂದರೆ ಮ್ಯೂಚುವಲ್ ಫಂಡ್ಗಳು ಉತ್ತಮ ನಿವೃತ್ತಿ ನಿಧಿಯನ್ನು ನಿರ್ಮಿಸಲು ಸಹಾಯ ಮಾಡುತ್ತವೆ. AMFI ಪ್ರಕಟಿಸಿದ ಜುಲೈ ತಿಂಗಳ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ (AUM) ಡೇಟಾದಿಂದ ಇದು ಇತ್ತೀಚೆಗೆ ಸ್ಪಷ್ಟವಾಗುತ್ತದೆ. ಮ್ಯೂಚುವಲ್ ಫಂಡ್ಗಳ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಖಾತೆಗಳ AUSM (ಅಸೆಟ್ ಅಂಡರ್ ಮ್ಯಾನೇಜ್ಮೆಂಟ್) 5.25 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇಲ್ಲಿ ಹೂಡಿಕೆದಾರರು ತಮ್ಮ ಗುರಿಗೆ ಅನುಗುಣವಾಗಿ SIP ಅನ್ನು ನಿರ್ಧರಿಸಬಹುದು. ಈ SIP ನಿಮ್ಮನ್ನು ಮಿಲಿಯನೇರ್ ಅನ್ನಾಗಿ ಮಾಡಬಹುದು. ನೀವು ಕೇವಲ 12 ವರ್ಷಗಳಲ್ಲಿ 1 ಕೋಟಿಗಿಂತ ಹೆಚ್ಚಿನ ಕಾರ್ಪಸ್ ಅನ್ನು ಇದ್ರಿಂದ ರಚಿಸಬಹುದು. ಇಲ್ಲಿದೆ ಆ ಕುರಿತು ಹೆಚ್ಚಿನ ವಿವರ.
1. ಈ ರೀತಿ ಹೂಡಿಕೆ ಮಾಡಬೇಕು – ಈ ಮೊದಲು ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದವರು ಇದೀಗ ಆರಂಭಿಕ ನಿವೃತ್ತಿ ನಿಧಿಯನ್ನು ನಿರ್ಮಿಸಲು SIP ಮೂಲಕ ಮ್ಯೂಚುವಲ್ ಫಂಡ್ಗಳಲ್ಲಿ ತೀವ್ರವಾಗಿ ಹೂಡಿಕೆ ಮಾಡುತ್ತಿದ್ದಾರೆ. ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಇತರ ಆಸ್ತಿ ವರ್ಗಗಳಿಗಿಂತ ವೇಗವಾಗಿ ಹಣವನ್ನು ದ್ವಿಗುಣಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಹಣಕಾಸು ಯೋಜಕರು ಹೇಳುವ ಪ್ರಕಾರ, 40 ವರ್ಷಕ್ಕೆ ಹತ್ತಿರವಿರುವ ಮತ್ತು ಇನ್ನೂ ತಮ್ಮ ನಿವೃತ್ತಿಗಾಗಿ ಹೂಡಿಕೆ ಮಾಡದ ಜನರು SIP ಮಾರ್ಗದ ಮೂಲಕ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದರೆ ಮುಂದಿನ 10-12 ವರ್ಷಗಳಲ್ಲಿ ದೊಡ್ಡ ಕಾರ್ಪಸ್ ಅನ್ನು ಅವರು ರಚಿಸಬಹುದು ಎನ್ನುತ್ತಾರೆ.

2. ಇದಕ್ಕಾಗಿ ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು? – 12 ವರ್ಷಗಳಲ್ಲಿ, ಒಬ್ಬರು ನಿಯಮಿತವಾಗಿ SIP ಬಳಸಿ ಹೂಡಿಕೆ ಮಾಡಿದರೆ, ಮ್ಯೂಚುವಲ್ ಫಂಡ್ಗಳಿಂದ ಕನಿಷ್ಠ 12% ನಷ್ಟು ಆದಾಯವನ್ನು ನಿರೀಕ್ಷಿಸಬಹುದು. ನಿರೀಕ್ಷಿತ ಶೇಕಡಾ 12 ರಷ್ಟು ಆದಾಯವನ್ನು ಆಧರಿಸಿ, ಮುಂದಿನ 12 ವರ್ಷಗಳಲ್ಲಿ 1 ಕೋಟಿ ರೂಪಾಯಿಗಳ ಕಾರ್ಪಸ್ ರಚಿಸಲು SIP ಮೂಲಕ ಪ್ರತಿ ತಿಂಗಳು 31342 ರೂ. ಹೂಡಿಕೆ ಮಾಡಬೇಕಾಗುತ್ತದೆ.

3. ಸ್ಟೆಪ್ ಅಪ್ SIP ಮೂಲಕ ಕೂಡ ಹೂಡಿಕೆ ಮಾಡಬಹುದು – ನಿಮಗೆ ಅಷ್ಟೊಂದು ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ಈ ನಿಧಿಯನ್ನು ರಚಿಸಲು ನಿಮ್ಮ ಬಳಿ ಇನ್ನೊಂದು ಮಾರ್ಗವಿದೆ. ಅದೇನೆಂದರೆ, ಸ್ಟೆಪ್-ಅಪ್ SIP, ಇದರಲ್ಲಿ ನೀವು ಸಣ್ಣ ಮೂತ್ತದ ಹೂಡಿಕೆ ಆರಂಭಿಸಿ, ನಂತರ ನೀವು ಪ್ರತಿ ವರ್ಷ ನಿಮ್ಮ SIP ಹೂಡಿಕೆಯನ್ನು ನಿಗದಿತ ಶೇಕಡಾವಾರು ಹೆಚ್ಚಿಸಬೇಕು.

4. ಪ್ರತಿ ವರ್ಷ ಶೇ.10 ರಷ್ಟು ಹೆಚ್ಚಿಸಿ – 12 ವರ್ಷಗಳವರೆಗೆ SIP ಹೂಡಿಕೆ ಮಾಡಿ, ಪ್ರತಿ ವರ್ಷ ನೀವು ಶೇ.10ರಷ್ಟು ಹೆಚ್ಚಿಸಿ 1 ಕೋಟಿ ರೂ ಕಾರ್ಪಸ್ ರಚಿಸಲು ನೀವು ನಿಮ್ಮ SIPಯನ್ನು ತಿಂಗಳಿಗೆ 20, 680ರಿಂದ ಆರಂಭಿಸಬೇಕು. ಬಳಿಕ ಪ್ರತಿ ವರ್ಷ ನೀವು ನಿಮ್ಮ SIP ಮೊತ್ತದಲ್ಲಿ ಶೇ.10ರಷ್ಟು ಹೆಚ್ಚಿಸಬೇಕು.

5. ಈ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಿ- ಸಂಪೂರ್ಣ ಮೊತ್ತವನ್ನು ಒಂದೇ ಫಂಡ್ನಲ್ಲಿ ಹೂಡಿಕೆ ಮಾಡುವ ಬದಲು ನೀವು ನಿಮ್ಮ ಹಣವನ್ನು ಇಂಡೆಕ್ಸ್ ಫಂಡ್ ಗಳು ಸೇರಿದಂತೆ 3-4 ವಿವಿಧ ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿ ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ. ನೀವು 12 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಮಿಡ್-ಸ್ಮಾಲ್-ಕ್ಯಾಪ್ ಫಂಡ್ಗಳು ಮತ್ತು ಸೆಕ್ಟರ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಆದರೆ ನೀವು ILSS ನಿಧಿಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು, ಇದು 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ. ಇದರ ಹೊರತಾಗಿ ನೀವು ಕೆನರಾ ರೊಬೆಕೊ ಎಮರ್ಜಿಂಗ್ ಇಕ್ವಿಟಿ ಫಂಡ್, ಆಕ್ಸಿಸ್ ಲಾಂಗ್ ಟರ್ಮ್ ಇಕ್ವಿಟಿ ಫಂಡ್, ಮಿರೇ ಅಸೆಟ್ ಲಾರ್ಜ್ ಕ್ಯಾಪ್ ಫಂಡ್, ಪರಾಗ್ ಪಾರಿಖ್ ಫ್ಲೆಕ್ಸಿಕ್ಯಾಪ್ ಫಂಡ್ ಮತ್ತು ಎಚ್ಡಿಎಫ್ಸಿ/ಐಸಿಐಸಿಐ/ಎಸ್ಬಿಐ ನಿಫ್ಟಿ ಇಂಡೆಕ್ಸ್ನಲ್ಲಿ ಹೂಡಿಕೆ ಮಾಡಬಹುದು.