ಕನ್ನಡಾಭಿಮಾನ ಮೆರೆದ ಬಿಜೆಪಿ ನಾಯಕರು
ವಿಜಯಪುರ, ಅ.29-ಸಿಂದಗಿ ಉಪಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಾಯಕರು ಕನ್ನಡಕ್ಕಾಗಿ ನಾವು ಅಭಿಯಾನದ ಹಿನ್ನೆಲೆಯಲ್ಲಿ ಕನ್ನಡ ಗೀತೆಗಳಿಗೆ ಧ್ವನಿಗೂಡಿಸಿದರು.
ಖ್ಯಾತ ಚಲನಚಿತ್ರ ನಟಿ ಹಾಗೂ ವಿ.ಪ.ಮಾಜಿ ಸದಸ್ಯೆ ಶೃತಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…ಸೇರಿದಂತೆ ಅನೇಕ ಕನ್ನಡಾಭಿಮಾನ ಗೀತೆಗಳನ್ನು ಸುಲಲಿತವಾಗಿ ಗಾಯನ ಮಾಡಿದರು
ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ ಸೋಮಣ್ಣ, ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ ಸೇರಿದಂತೆ ಬಿಜೆಪಿ ನಾಯಕರು ಈ ಹಾಡುಗಳಿಗೆ ದನಿಗೂಡಿಸಿದರು.
ಈ ಸಂದರ್ಬದಲ್ಲಿ ಮಾತನಾಡಿದ ಚಿತ್ರನಟಿ ಶೃತಿ, ಕನ್ನಡ ಜೀವದ ಭಾಷೆ, ಕನ್ನಡಾಭಿಮಾನ ನಮ್ಮ ಜೀವನದ ಉಸಿರಾಗಬೇಕು, ನಾವು ಎಲ್ಲೆ ಇದ್ರೂ ಹೇಗೆ ಇದ್ದರೂ ಕನ್ನಡಕ್ಕಾಗಿ ದುಡಿಯಬೇಕು, ಕನ್ನಡಮ್ಮನ ಸೇವೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಷರಿಷತ್ ಸದಸ್ಯರಾದ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಚಂದ್ರಶೇಕರ ಕವಟಗಿ, ಬೀಜ ನಿಗಮ ಮಂಡಳಿ ಅಧ್ಯಕ್ಷರಾದ ವಿಜಯ ಕುಮಾರ ಪಾಟೀಲ, ವಿಜಯ ಜೋಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.