ಕರ್ನಾಟಕದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸರ ಗಣನೀಯ ಸೇವೆ ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 19 ಪೊಲೀಸ್​ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.

ಕೇಂದ್ರ ಗೃಹ ಇಲಾಖೆಯು ರಾಷ್ಟ್ರ ಪದಕಕ್ಕೆ ಆಯ್ಕೆಯಾದವರನ್ನು ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ಯಾದು, ಸ್ವಾತಂತ್ರ್ಯ ದಿನಾಚರಣೆ ದಿನದಂದು ಈ ಪದಕ ಪ್ರದಾನ ಮಾಡಲಾಗುತ್ತದೆ. ಲೋಕಾಯುಕ್ತ ಸಂಸ್ಥೆ ಅಕ್ರಮ ಪ್ರಕರಣದ ತನಿಖೆ ನಡೆಸಿದ ಎಸ್​ಐಟಿ ತಂಡದಲ್ಲಿ ಸೇವೆ ಸಲ್ಲಿಸಿದ ಸಿಐಡಿ ಸಹಾಯಕ ಸಬ್​ಇನ್​ಸ್ಪೆಕ್ಟರ್​ ವಿ.ಎಲ್​.ಎನ್​. ಪ್ರಸನ್ನಕುಮಾರ್​ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪದಕ ಲಭಿಸಿದೆ. ಶ್ಲಾಘನೀಯ ಸೇವಾ ಪದಕ 18 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಭಿಸಿದೆ. ಆ ಮೂಲಕ ರಾಜ್ಯದ ಒಟ್ಟು 19 ಪೊಲೀಸರಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ.

ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದವರ ಪಟ್ಟಿ ಹೀಗಿದೆ.
1. ಹೇಮಂತ್​ ಕುಮಾರ್​- ಡಿವೈಎಸ್​ಪಿ, ಲೋಕಾಯುಕ್ತ, ಬೆಂಗಳೂರು.
2. ಪರಮೇಶ್ವರ ಹೆಗ್ಡೆ- ಡಿವೈಎಸ್​ಪಿ, ಆಥಿರ್ಕ ಅಪರಾಧ ವಿಭಾಗ, ಸಿಐಡಿ, ಬೆಂಗಳೂರು.
3. ಆರ್​.ಮಂಜುನಾಥ್​- ಡಿವೈಎಸ್​ಪಿ, ಎಸಿಬಿ, ಮಂಡ್ಯ.
4. ಎಚ್​.ಎಂ.ಶೈಲೇಂದ್ರ- ಡಿವೈಎಸ್​ಪಿ, ಸೋಮವಾರಪೇಟೆ ವಿಭಾಗ, ಕೊಡಗು.
5. ಅರುಣ್​ ನಾಗೇಗೌಡ- ಡಿವೈಎಸ್​ಪಿ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ.
6. ಎಚ್​.ಎಂ. ಸತೀಶ್​- ಎಸಿಪಿ, ಈಶಾನ್ಯ ಸಂಚಾರ ವಿಭಾಗ, ಬೆಂಗಳೂರು.
7. ಎಚ್​.ಬಿ. ರಮೇಶ್​ ಕುಮಾರ್​- ಡಿವೈಎಸ್​ಪಿ, ರಾಜ್ಯ ಗುಪ್ತಚರ, ತುಮಕೂರು.
8. ಪಿ. ಉಮೇಶ್​- ಡಿವೈಎಸ್​ಪಿ, ಪೊಲೀಸ್​ ತರಬೇತಿ ಶಾಲೆ, ಜ್ಯೋತಿನಗರ, ಮೈಸೂರು.
9. ಸಿ.ಎನ್​. ದಿವಾಕರ- ಇನ್​ಸ್ಪೆಕ್ಟರ್​, ಮಡಿಕೇರಿ ಗ್ರಾಮೀಣ ವೃತ್ತ, ಕೊಡಗು.
10. ಜಿ.ಎನ್​. ರುದ್ರೇಶ್​- ಇನ್​ಸ್ಪೆಕ್ಟರ್​, ಕೆಎಸ್​ಆರ್​ಪಿ, ಬೆಂಗಳೂರು.
11. ಬಿ.ಎ. ಲಕ್ಷ್ಮೀನಾರಾಯಣ್​- ಪಿಎಸ್​ಐ, ನಗರ ವಿಶೇಷ ವಿಭಾಗ, ಬೆಂಗಳೂರು.
12. ಎಚ್​.ಎಂ.ಚಂದ್ರಶೇಖರ್​- ಪಿಎಸ್​ಐ, ಕೆಎಸ್​ಆರ್​ಪಿ, ಬೆಂಗಳೂರು.
13. ಕೆ. ಜಯಪ್ರಕಾಶ್​- ಪಿಎಸ್​ಐ, ಮಂಗಳೂರು ನಗರ, ನಿಯಂತ್ರಣ ಕೊಠಡಿ.
14.ಎಚ್​. ನಂಜುಂಡಯ್ಯ- ಎಎಸ್​ಐ, ಡಿಸಿಆರ್​ಬಿ, ಎಸ್​ಪಿ ಕಚೇರಿ, ಚಿಕ್ಕಬಳ್ಳಾಪುರ.
15. ಹತೀಕ್​ ಯು.ಆರ್​. ರೆಹಮಾನ್​- ಎಎಸ್​ಐ, ಬೆರಳಚ್ಚು ವಿಭಾಗ, ಶಿವಮೊಗ್ಗ.
16. ರಾಮಾಂಜನೇಯ- ಎಎಸ್​ಐ, ಕೆ.ಬಿ.ಕ್ರಾಸ್​ ಪೊಲೀಸ್​ ಠಾಣೆ, ತುಮಕೂರು.
17. ಆರ್​.ಎನ್​. ಬಾಳೆಕಾಯಿ- ಎಎಸ್​ಐ, ರಾಣೇಬೆನ್ನೂರು ಗ್ರಾಮೀಣ ಠಾಣೆ, ಹಾವೇರಿ ಜಿಲ್ಲೆ.
18. ಕೆ. ಹೊನ್ನಪ್ಪ- ಮುಖ್ಯಪೇದೆ, ಬೆಂಗಳೂರು ಜಿಲ್ಲೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *