ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಸೈನಿಕರಂತೆ ಹೋರಾಡಿದ ಕೊರೊನಾ ವಾರಿಯರ್ಸ್ ಅವರಿಗೆ ಸಚಿವರಿಂದ ಸನ್ಮಾನ.
ಬೀದರ:- ಜಿಲ್ಲೆ ಜನತೆಯ ದೇಶ ಪ್ರೇಮದ ಮುಂದೆ ಕರಗಿ ಹೋದ ಮಾನವ ಕುಲಕ್ಕೆ ಮಹಾಮಾರಿ ಎಂದೆ ಕರೆಸಿಕೊಂಡ ಕರೋನಾ ವೈರಸ್ ಮಹಾಮಾರಿ.
ದಿನೆ ದಿನೆ ಹೆಚ್ಚು ತಿರುವ ಕರೋನಾ ಸೊಂಕಿತರ ಸಂಖ್ಯೆ ಯನ್ನು ಲೆಕ್ಕಿಸದೆ ಬೀದರ ಜಿಲ್ಲಾದ್ಯಂತ್ಯ ಇಂದು 74 ನೇ ಸ್ವಾತಂತ್ರ್ಯೋತ್ಸವ ವನ್ನು ಆಚರಿಸಲಾಯಿತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ನಗರದ ಪೋಲಿಸ್ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆಯನ್ನು ಸ್ವೀಕರಿಸಿ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಸೈನಿಕರಂತೆ ಹೋರಾಡಿದ ಆರೋಗ್ಯ ಇಲಾಖೆಯ
ಔರಾದ ತಾಲೂಕಾ ವೈದ್ಯಾಧಿಕಾರಿಗಳಾದ ಡಾ:ಶರಣಯ್ಯಾ ಸ್ವಾಮಿ, ವರವಟ್ಟಿ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದ ಉಚ್ಚಾ ಗ್ರಾಮದ ಆಶಾಕಾರ್ಯಕರ್ತೆ ಮೀನಾಕ್ಷಿ ಧರ್ಮಣ್ಣಾ, ಬಸವಕಲ್ಯಾಣ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಸ್ಟರ್ ಜಯಶ್ರೀ ಸಿಸ್ಟರ್ ಮತ್ತು ಪೊಲೀಸ್ ಇಲಾಖೆ ಹಾಗೂ ನಗರ ಸಭೆ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಜಿಲ್ಲೆಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸರ್ಕಾರದ ನಿಯಮದಂತೆ ವಿದ್ಯಾರ್ಥಿಗಳಿಗೆ ಕರೆಯದೆ ಕೇವಲ ಶಾಲೆಯ ಆಡಳಿತ ಸಿಬ್ಬಂದಿ ಹಾಗೂ ಶಿಕ್ಷಕರ ಸಮುಖದಲ್ಲಿ ಶಾಲೆಯ ಮುಖ್ಯಸ್ಥರು ಧ್ವಜಾರೋಹಣ ಮಾಡಿದರು
ಅಲ್ಲದೇ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ವಿವಿಧ ಸಘ ಸಂಸ್ಥೆಗಳ ಕಚೇರಿಗಳಲ್ಲಿ ಆಯಾ ಕಚೇರಿ ಮುಖ್ಯಸ್ಥರು ತಮ್ಮ ಸಿಬ್ಬಂದಿಗಳ ಸಮುಖದಲ್ಲಿ ಧ್ವಜಾರೋಹಣ ನೇರವೆರಿಸಿದರು ಒಟ್ಟಿನಲ್ಲಿ ಹೇಳುವುದಾದರೆ ಜಿಲ್ಲೆಯಲ್ಲಿ ಮಕ್ಕಳ ಸಂಸ್ಕೃತ ಕಾರ್ಯಗಳನ್ನು ಹೊರತು ಪಡಿಸಿ ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಕರೋನಾ ವೈರಸ್ ಭಯದ ವಾತಾವರಣ ದಲ್ಲಿಯೂ 74ನೇಯ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಿದರು.
ವರದಿ:-ಮಹೇಶ ಸಜ್ಜನ ಬೀದರ