ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅಪಾಯಕಾರಿ ವೈರಸ್ ಇರಬಹುದು!: ಹೀಗೆ ಮಾಡಿದರೆ ಅಪಾಯವಿಲ್ಲ

ನವದೆಹಲಿ: ಇಂದು ನಾವೆಲ್ಲರೂ ಮಲಗುವವರೆಗೂ ಸ್ಮಾರ್ಟ್‌ಫೋನ್‌(Smartphone)ಗಳನ್ನು ಬಳಸುತ್ತಿರುತ್ತೇವೆ. ನಾವು ಹೊರಗಡೆ ಎಲ್ಲಿಗೆ ಹೋದರೂ ನಮ್ಮ ಜೊತೆ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ನಾವು ಸ್ಮಾರ್ಟ್‌ಫೋನ್ ಅನ್ನು ಅತಿಯಾಗಿ ಬಳಸುವುದಕ್ಕೆ ಅಡಿಕ್ಟ್ ಆಗಿದ್ದೇವೆ. ಸ್ಮಾರ್ಟ್‌ಫೋನ್ ಇಲ್ಲದೆ ನಮ್ಮ ಜೀವನವೇ ನಡೆಯುದಿಲ್ಲವೆನ್ನುವಷ್ಟರ ಮಟ್ಟಿಗೆ ನಾವು ಬದುಕುತ್ತಿದ್ದೇವೆ. ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವುದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಇದು ಗೊತ್ತಿದ್ದರೂ ನಾವು ಸ್ಮಾರ್ಟ್‌ಫೋನ್ ಬಳಕೆಯ ದಾಸರಾಗಿದ್ದೇವೆ.

ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವುದು ಅಪಾಯವನ್ನು ನಾವೇ ತಂದುಕೊಂಡಂತೆ. ಏಕೆಂದರೆ ಈ ಸಾಧನಗಳಲ್ಲಿ ಸಾವಿರಾರು ಸೂಕ್ಷ್ಮಜೀವಿಗಳು(Bacteria On Smartphone) ಇರುತ್ತವಂತೆ. ಹೀಗಾಗಿ ನೀವು ನಿಮ್ಮ ಫೋನ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸ್ಮಾರ್ಟ್‌ಫೋನ್ ನಲ್ಲಿರುವ ವೈರಸ್ ನಿಮಗೆ ಅನಾರೋಗ್ಯವನ್ನುಂಟು ಮಾಡಬಹುದು. ಸ್ಮಾರ್ಟ್‌ಫೋನ್  ಒಂದು ರೀತಿ ನಾವೇ ರೋಗಗಳನ್ನು ಆಹ್ವಾನಿಸಿದಂತೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಸಂಭಾವ್ಯ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಇದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.

 

ಸ್ಮಾರ್ಟ್‌ಫೋನ್ ನಿಂದ ಅಪಾಯಕಾರಿ ಕಾಯಿಲೆ

ನಮ್ಮ ಸ್ಮಾರ್ಟ್‌ಫೋನ್ ನಮಗೆ ಅಪಾಯಕಾರಿ ಕಾಯಿಲೆ(Illness By Bacteria)ಗಳನ್ನು ತರುತ್ತದೆ. ನಾವು ಎಲ್ಲಿಗೆ ಹೋದರೂ ಜೊತೆಗೆ ಸ್ಮಾರ್ಟ್‌ಫೋನ್ ಕೊಂಡೊಯ್ಯುತ್ತೇವೆ. ಅನೇಕ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ನಾವು ಕೈ ತೊಳೆಯದೆ ಸ್ಮಾರ್ಟ್‌ಫೋನ್ ಬಳಸುತ್ತೇವೆ. ಈ ರೀತಿ ಮಾಡುವುದರಿಂದ ಸ್ಮಾರ್ಟ್‌ಫೋನ್ ನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳು ನಮ್ಮ ದೇಹವನ್ನು ಸೇರಿಕೊಂಡು ಅನಾರೋಗ್ಯವನ್ನುಂಟು ಮಾಡುತ್ತವೆ. ಕೋವಿಡ್-19 ನಂತರಹ ಮಾರಕ ರೋಗಕ್ಕೂ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅತಿಮುಖ್ಯ.

 

ಮಾರಕ ವೈರಸ್ ನಿಂದ ಪಾರಾಗುವುದು ಹೇಗೆ?  

ನೀವು ಹೊರಗಡೆ ಸುತ್ತಾಡಿಕೊಂಡು ಮನೆಗೆ ಬಂದಿದ್ದರೆ ನಿಮ್ಮ ಕೈ, ಮುಖ ಮತ್ತು ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು. ಇದರ ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್(Smartphone) ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಸಚ್ಛಗೊಳಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್ ಸೋಂಕುರಹಿತವಾಗಿರುವುದನ್ನು ಖಚಿತಪಡಿಸಿಕೊಂಡು ಬಳಕೆ ಮಾಡಬೇಕು. ಇದನ್ನು ಪ್ರತಿದಿನವೂ ಪಾಲಿಸಬೇಕು. ಆದರೆ ಬಹುತೇಕರು ಹೀಗೆ ಮಾಡದೆ ನಿರ್ಲಕ್ಷ್ಯವಹಿಸುತ್ತಾರೆ. ಹೀಗಾಗಿ ಅವರಿಗೆ ಗೊತ್ತಾಗದೆ ಎಷ್ಟೋಸಲ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *