ಮೋದಿ ಸರ್ಕಾರದಿಂದ Free Laptop ! WhatsAppನಲ್ಲಿ ಹರಿದಾಡುತ್ತಿರುವ ಈ ಮೆಸೇಜ್ ಎಷ್ಟು ಸತ್ಯ ?
ನವದೆಹಲಿ : WhatsApp Viral Message : ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತದಲ್ಲಿ ಕರೋನಾ ಸಾಂಕ್ರಾಮಿಕ (Coronavirus) ರೋಗ ಹರಡಿದ ನಂತರ, ಫೇಸ್‌ಬುಕ್, ವಾಟ್ಸಾಪ್ (Whatsapp) ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ (Social media) ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪು ಮಾಹಿತಿಯ ಹರಡುವಿಕೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫಾರ್ವರ್ಡ್ ವೈರಲ್ ಆಗುತ್ತಿದ್ದು, ಅದರಲ್ಲಿ ಪ್ರಧಾನ ಮಂತ್ರಿಯವರ ಉಚಿತ ಲ್ಯಾಪ್‌ಟಾಪ್ ವಿತರಣಾ (Free laptop Distribution) ಯೋಜನೆಯಡಿ ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಮೆಸೇಜ್ ವೈರಲ್ (Viral message) ಆಗುತ್ತಿದ್ದಂತೆ, ಪಿಐಬಿ ಫ್ಯಾಕ್ಟ್ ಚೆಕ್ ಇದರ ಸತ್ಯಾಂಶವನ್ನು ಪರೀಕ್ಷಿಸಿದೆ.
‘ಪ್ರಧಾನಿ ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆಯಡಿ (Free laptop Distribution) ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ. ಆದರೆ ಇಂತಹ ನಕಲಿ ಸಂದೇಶಗಳ (fake message) ಬಗ್ಗೆ ಎಚ್ಚರಿಕೆ ವಹಿಸುವಂತೆ ಸರ್ಕಾರ ಜನರಿಗೆ ಮನವಿ ಮಾಡಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಟ್ವೀಟ್ ಮಾಡಿದೆ. ಇಂಥಹ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡದಂತೆ ಮತ್ತು ಇರರ್ರೊಂದಿಗೆ ಶೇರ್ ಮಾಡದಂತೆ PIB, ಮನವಿ ಮಾಡಿದೆ. ಅಲ್ಲದೆ, ಅಂತಹ ಲಿಂಕ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಹ ಹಂಚಿಕೊಳ್ಳದಂತೆ ಸೂಚಿಸಿದೆ.
ವೈ-ಫೈ ಟವರ್ ಸರಿಪಡಿಸಲು ಸರ್ಕಾರ ಬಾಡಿಗೆ, ಕೆಲಸ ನೀಡುತ್ತಿದೆಯೇ?
ಡಿಜಿಟಲ್ ಇಂಡಿಯಾ (Digital India) ವೈ-ಫೈ ನೆಟ್‌ವರ್ಕ್ ಯೋಜನೆಯಡಿಯಲ್ಲಿ ಮೊಬೈಲ್ ಟವರ್‌ನ ನಿರ್ವಹಣೆಗೆ ಉದ್ಯೋಗ ಮತ್ತು ಜಾಗಕ್ಕಾಗಿ ಭಾರಿ ಸರ್ಕಾರ ಭಾರೀ ಬಾಡಿಗೆಯನ್ನು ನೀಡುತ್ತದೆ ಎಂಬ ಸಂದೇಶ ಕಳೆದ ವಾರ, ಹರಿದಾಡುತ್ತಿತ್ತು. ಅಗ್ರಿಮೆಂಟ್ ಪತ್ರದಲ್ಲಿ ನೋಂದಣಿ ಶುಲ್ಕದ ನೆಪದಲ್ಲಿ 730 ರೂಪಾಯಿ ನೀಡುವಂತೆಯೂ ಬೇಡಿಕೆ ಇಡಲಾಗಿತ್ತು. ಆದರೆ ಇದು ಕೂಡಾ ಸುಳು ಎನ್ನುವುದು ಫ್ಯಾಕ್ಟ್ ಚೆಕ್ (Fact check) ಮೂಲಕ ತಿಳಿದುಬಂದಿದೆ. ಮೊಬೈಲ್ ಟವರ್ ಸ್ಥಾಪನೆಗೆ 25 ಸಾವಿರ, ಮತ್ತು 30 ಲಕ್ಷ ರೂ. ಬಾಡಿಗೆ ನೀಡುವುದಾಗಿ ಈ ಮೆಸೇಜ್ ನಲ್ಲಿ ತಿಳಿಸಲಾಗಿತ್ತು. ಆದರೆ, ಪಿಐಬಿ ಫ್ಯಾಕ್ಟ್ ಚೆಕ್ ಇದೊಂದು ನಕಲಿ ಸಂದೇಶ ಎನ್ನುವುದನ್ನು ಸ್ಪಷ್ಟ ಪಡಿಸಿದೆ.