ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಕುಟುಂಬದವರಿಗೆ 51 ಸಾವಿರ ನಗದು ಪರಿಹಾರ ನೀಡಿದ:- ಸಚಿವ ಪ್ರಭು ಚವ್ಹಾಣ್
ಬೀದರ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಕುಟುಂಬದವರಿಗೆ ಭೇಟಿ ಮಾಡಿ ಸಾಂತ್ವನ ಜೋತೆಗೆ ವೈಯಕ್ತಿಕವಾಗಿ 51 ಸಾವಿರ ನಗದು ಪರಿಹಾರ ನೀಡಿದ:- ಸಚಿವ ಪ್ರಭು ಚವ್ಹಾಣ್
ಕಳೆದ ಕೆಲ ದಿನಗಳ ಹಿಂದೆ ಭಾಲ್ಕಿ ತಾಲೂಕಿನ ಚಳಕಾಪುರವಾಡಿ ಗ್ರಾಮದಲ್ಲಿ ಕೃಷಿ ಹುಂಡದಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟಿದ್ದರು.. ಬೀದರ್ ಹಾಗೂ ಯಾದಗಿರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚೌಹಾಣ್ ಮೃತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು..
ಮೂವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಆಘಾತದಲ್ಲಿದ್ದ ರೈತನ ಕುಟುಂಬದ ಸದಸ್ಯರಿಗೆ ಸಚಿವರು ಇದೆ ವೇಳೆಯಲ್ಲಿ ಸಾಂತ್ವನ ಹೇಳಿದರು. ಘಟನೆಯ ಕುರಿತು ಕುಟುಂಬದವರಿಂದ ಮಾಹಿತಿ ಪಡೆದುಕೊಂಡ ಸಚಿವರು, ಇಡೀ ಕುಟುಂಬಕ್ಕೆ ಆಧಾರಸ್ಥಂಬದಂತಿದ್ದ, ಹೆತ್ತ ಮಕ್ಕಳನ್ನು ಕಳೆದುಕೊಂಡು ತಾವು ದುಃಖದಲ್ಲಿದ್ದೀರಿ. ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದ ಸಚಿವರು, ರೈತ ಧೂಳಪ್ಪ ಬನ್ನಾಳೆ ಮತ್ತು ಕುಟುಂಬದ ಪರಿವಾರದವರಿಗೆ ಧೈರ್ಯ ತುಂಬಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೂವರು ಮಕ್ಕಳು ನೀರಿನಲ್ಲಿ ಸಮಾಧಿಯಾಗಿ, ಅವರನ್ನು ಕಳೆದುಕೊಂಡದ್ದಕ್ಕಾಗಿ ಕುಟುಂಬದ ಎಲ್ಲ ಸದಸ್ಯರು ದುಃಖದಲ್ಲಿದ್ದಾರೆ. ಅವರಿಗೆ ಸಾಕಷ್ಟು ಆಘಾತವಾಗಿದೆ. ಈ ಸುದ್ದಿ ಕೇಳಿ ತಮ್ಮ ಮನಸಿಗೆ ಕೂಡ ಬಹಳಷ್ಟು ನೋವಾಯಿತು. ಈ ಘಟನೆಯಿಂದ ಈ ಗ್ರಾಮಸ್ಥರಷ್ಟೇ ಅಲ್ಲ, ಇಡೀ ಜಿಲ್ಲೆಯ ಜನರು ದುಃಖದಲ್ಲಿದ್ದಾರೆ. ಕುಟುಂಬದ ಪರಿವಾರಕ್ಕೆ ಧೈರ್ಯ ತುಂಬಲಿ ಎಂದು ತಾವು ಭಗವಂತನಲ್ಲಿ ಪ್ರಾರ್ಥಿಸಿದ್ದಾಗಿ ಹೇಳಿದರು. ಮಕ್ಕಳನ್ನು ಕಳೆದುಕೊಂಡ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ತಾವು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವುದಾಗಿ ಇದೆ ವೇಳೆ ಸಚಿವರು ಹೇಳಿದರು.
*ವ್ಯವಸಾಯಕ್ಕಾಗಿ ಆಕಳು:* ಕುಟುಂಬದವರಿಗೆ ಭೇಟಿ ಮಾಡಿದ ವೇಳೆಯಲ್ಲಿ ಸಚಿವರು ತಮ್ಮ ಕಡೆಯಿಂದ ಕುಟುಂಬದವರಿಗೆ ವೈಯಕ್ತಿಕವಾಗಿ 51,000 ರೂ.ಗಳನ್ನು ನೀಡಿದರು. ಬಡ ರೈತ ಕುಟುಂಬಕ್ಕೆ ಆಸರೆಯಾಗಲೆಂದು, ಕುಟುಂಬದವರು ವ್ಯವಸಾಯ ಮಾಡಲು ಸಹಕಾರಿಯಾಗಲೆಂದು ತಮ್ಮ ಕಡೆಯಿಂದ ಎರಡು ಆಕಳುಗಳನ್ನು ಶೀಘ್ರ ಕೊಡುವುದಾಗಿ ಸಚಿವರು ತಿಳಿಸಿದರು. ನಿಮ್ಮ ಮಗಳ ಮದುವೆಗೆ ಕೂಡ ಸಹಾಯ ಮಾಡುತ್ತೇನೆ ಎಂದು ತಿಳಿಸಿ ಸಚಿವರು ಕುಟುಂಬದವರಿಗೆ ಧೈರ್ಯ ತುಂಬಿದರು.
ಈ ವೇಳೆ ಭಾಲ್ಕಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಹಾಗೂ ಇತರರು ಇದ್ದರು.
ವರದಿ:-ಮಹೇಶ ಸಜ್ಜನ ಬೀದರ