ಹಂದಿಗಳ ಮನೆಯಾದ ಮಾಣಿಕೇಶ್ವರಿ ಕಾಲೋನಿಯ ಸರಕಾರಿ ಆಸ್ಪತ್ರೆ : ಇದ್ದು ಸತ್ತಂತೆ ನಮ್ಮ ಜನಪ್ರತಿನಿಧಿಗಳೆಂದು ಶಾಪ ಹಾಕುತ್ತಿರುವ ಜನ
ಕಲಬುರಗಿ ನಗರ ಮಾಣಿಕೇಶ್ವರಿ ಕಾಲೂನಿ, ವಾರ್ಡ ನಂಬರ್ 22ರ ಆರೋಗ್ಯ ಕೇಂದ್ರ, ಇಲ್ಲಿಯ ಕಾರ್ಪೊರೇಟರ್ ಶಂಕರ ಸಿಂಗ ರವರಾಗಿದ್ದು ಈ ಬಡಾವಣೆಯ ಸರಕಾರಿ ಆಸ್ಪತ್ರೆಯನ್ನ ಹಂದಿಗಳಿಗಾಗಿ ಮೀಸಲಿಟ್ಟಿದ್ದಾರೆ,
ಕೋವಿಡ್ 19 ಗೋಸ್ಕರ ಮತ್ತು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಉಳವರಿಗೆ ಹಾಗೂ ಗರ್ಭಿಣಿಯರಿಗೆ ಇಲ್ಲಿ ತಪಾಸಣೆ ಮಾಡಲಾಗುತ್ತದೆ. ಆದರೆ ಇಲ್ಲಿ ಮನುಷ್ಯರಿಗಿಂತ ಹಂದಿಗಳೆ ಹೆಚ್ಚು ತಪಾಸಣೆ ಮಾಡಿಸಿಕೊಳ್ಳುತ್ತವೆ, ಇದರ ಬಗ್ಗೆ ಯಾವುದೆ ಅಧಿಕಾರಿ ತಲೆ ಕೆಡಸಿಕೊಂಡಿಲ್ಲ,
ಮತ್ತು ಇಲ್ಲಿಯ ಕಾರ್ಪೊರೇಟರ್ ಶಂಕರ್ ಸಿಂಗ್ ಇಲ್ಲಿಯ ಜನತೆಯ ಯಾವ ಸಂಕಷ್ಟಗಳಿಗೂ ಸರಿಯಾದ ಸ್ಪಂದನೆ ನೀಡುತ್ತಿಲ್ಲವೆಂದು ಕಷ್ಟದಲ್ಲಿರುವ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ. ಈಗಲಾದರೂ ಶಂಕರ್ ಸಿಂಗ್ ಅವ್ರು ಬಡಾವಣೆಯ ಸರಕಾರಿ ಆಸ್ಪತ್ರೆಯನ್ನ ಹಂದಿಗಳಿಂದ ಮುಕ್ತಿಗೊಳಿಸಿ ಜನತೆಗೆ ಕರುಣಿಸುತ್ತಾರೋ ಅಥವಾ ಜನತೆಯ ಶಾಪಕ್ಕೆ ಗುರಿಯಾಗುತ್ತಾರೋ ಕಾದು ನೋಡಬೇಕಿದೆ.
ವರದಿ : ಸಂಗಮೇಶ ಸರಡಗಿ ಕಲಬುರಗಿ