Madagaja ತಂಡದಿಂದ ಗುಡ್‌ ನ್ಯೂಸ್‌; ಕುಣಿದು ಕುಪ್ಪಳಿಸುತ್ತಿರುವ ಶ್ರೀಮುರಳಿ ಫ್ಯಾನ್ಸ್!

ನಟ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮದಗಜ’ ಚಿತ್ರ ಡಿ.3ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅಯೋಗ್ಯ ಮಹೇಶ್‌ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಉಮಾಪತಿ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ಟೈಟಲ್‌ ಹಾಡು ಈಗಾಗಲೇ ಆನಂದ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಹೀರೋ ಇಂಟ್ರಡಕ್ಷನ್‌ ಹಾಡು ಆಗಿರುವ ಕಾರಣ ಇಲ್ಲಿ ನಾಯಕನ ಗುಣಗಾನಕ್ಕೆ ಮಹತ್ವ ಕೊಡಲಾಗಿದೆ. ‘ಯುದ್ಧ ಸಾರಿದ.. ಚಂಡ ಮಾರುತ…’ ಎನ್ನುವ ಹಾಡಿನ ಸಾಲುಗಳ ಮೂಲಕ ಶ್ರೀಮುರಳಿ ಪಾತ್ರ ಚಿತ್ರದಲ್ಲಿ ಹೇಗಿರಲಿದೆ ಎನ್ನುವ ಸೂಚನೆ ಕೊಡಲಾಗಿದೆ.

 

ಪಟಾಕಿ ಪೋರಿ ಆಶಿಕಾ ರಂಗನಾಥ್‌ ಅವರ ಹ್ಯಾಪಿ ಬತ್‌ರ್‍ಡೇಗೆ ‘ಮದಗಜ’ ಟೀಮ್‌ ಬೋಲ್ಡ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಬಿಂದಾಸ್‌ ಆಗಿ ಸಿಗರೇಟ್‌ ಹೊಡೀತಿರೋ ಆಶಿಕಾ ಲುಕ್‌ ‘ಮದಗಜ’ದ ಆಕೆಯ ಪಾತ್ರದ ಬಗ್ಗೆ ಕುತೂಹಲ ಮೂಡಿಸುವಂತಿದೆ.ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟ್ರಿಯಲ್ಲಿ ಒಂದು ಹಾಡು, ನಂತರ ಮೈಸೂರಿನಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಿದ್ದಾರೆ.ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಮೂರು ವಿಶೇಷವಾದ ಸೆಟ್ ಗಳನ್ನು ನಿರ್ಮಿಸಿ ಒಂದೊಂದು ಸೆಟ್‌ಗೂ ರು.1 ಕೋಟಿ ವೆಚ್ಚವಾಗಿದೆ ಎನ್ನಲಾಗಿದೆ. 15 ಮಂದಿ ಮುಖ್ಯ ಕಲಾವಿದರು, 500 ಮಂದಿ ಜೂನಿಯರ್ ಆರ್ಟಿಸ್‌ಟ್ಗಳು ಹಾಗೂ ಜಗಪತಿ ಬಾಬು ಕೂಡ ಈ ಹಾಡಿನಲ್ಲಿ ಇರಲಿದ್ದಾರೆ. ಹೀಗಾಗಿ ಇದು ಸಖತ್ ಕಲರ್‌ಫುಲ್ ಹಾಡು ಆಗಲಿದೆ’ ಎನ್ನುತ್ತಾರೆ ನಿರ್ದೇಶಕ ಮಹೇಶ್.

 

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಜಗಪತಿ ಬಾಬು, ಆಶಿಕಾ ರಂಗನಾಥ್‌, ದೇವಯಾನಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಮದಗಜ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಫೈಟಿಂಗ್‌ ಮತ್ತು ಹಾಡುಗಳ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದೆ. ಆ್ಯಕ್ಷನ್‌ ಸೀಕ್ವೆನ್ಸ್‌ ಚಿತ್ರೀಕರಣ ನಡೆಯಬೇಕಿದ್ದ ಕಾರಣ ಚಿತ್ರತಂಡ ಅದ್ದೂರಿ ಸೆಟ್‌ಗಳನ್ನು ಹಾಕಿತ್ತು. 40 ಸೆಕೆಂಡ್‌ ಸ್ಟೆ್ರಚ್‌ನ ಆ್ಯಕ್ಷನ್‌ ಸೀಕ್ವೆನ್ಸ್‌ ಅನ್ನು ಫೈಟ್‌ ಮಾಸ್ಟರ್‌ ಅರ್ಜುನ್‌ ರೂಪಿಸಿದ್ದರು. ಹತ್ತು ಜನ ಒಮ್ಮೆಲೇ ಅಟ್ಯಾಕ್‌ ಮಾಡುತ್ತಾರೆ. ಶ್ರೀಮುರಳಿ ನಾಲ್ಕು ಮಂದಿಯನ್ನು ಹೊಡೆದು ಐದನೇಯವನತ್ತ ನುಗ್ಗಿದಾಗ ಆಕಸ್ಮಿಕವಾಗಿ ಕಾಲು ಟ್ವಿಸ್ಟ್‌ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. ‘ತನ್ನ ಕಾಲಿಗೆ ಏಟಾಗಿದ್ದರೂ ಈಗ ಆಸ್ಪತ್ರೆಗೆ ಹೋಗುವುದು ಬೇಡ. ಶೂಟಿಂಗ್‌ ಮುಗಿಸಿ ಹೋಗೋಣ. ನಿರ್ಮಾಪಕರಿಗೆ ಲಾಸ್‌ ಆಗುತ್ತದೆ ಎಂದು ಶ್ರೀಮುರಳಿ ಹೇಳಿದರು’ ಎಂದು ನಿರ್ದೇಶಕ ಮಹೇಶ್‌ ಹೇಳುತ್ತಾರೆ. ಆ ಮೂಲಕ ಶ್ರೀಮುರಳಿ ಬದ್ಧತೆಯನ್ನು ಮೆಚ್ಚಿಕೊಂಡರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *