ಮೊಟ್ಟೆಯ ಹಳದಿ ಭಾಗ ಆರೋಗ್ಯಕ್ಕೆ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ.? ಇಲ್ಲಿದೆ ನೋಡಿ ಉತ್ತರ
ನವದೆಹಲಿ: ಮೊಟ್ಟೆ ಪ್ರೋಟೀನ್‌ನ(Protein in Egg) ಅತ್ಯುತ್ತಮ ಮೂಲವಾಗಿದೆ ಮತ್ತು ಇದನ್ನು ಪೋಷಕಾಂಶಗಳ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ನೀವು ತೂಕವನ್ನು ಕಳೆದುಕೊಳ್ಳಲು ಅಥವಾ ಸ್ನಾಯುಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದರೆ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಮೊಟ್ಟೆಯ ಹಳದಿ ಭಾಗ(Egg Yolk)ವು ಎಷ್ಟು ಪ್ರಯೋಜನಕಾರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೊಟ್ಟೆಯ ಹಳದಿ ಭಾಗವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಎಂಬುದನ್ನು ನೀವು ತಿಳಿದುಕೊಳ್ಳಬೇಕು.
ಮೊಟ್ಟೆಯ ಹಳದಿ ಭಾಗವು ಪೋಷಕಾಂಶಗಳಿಂದ ಕೂಡಿದೆ
ಮೊಟ್ಟೆಯ ಹಳದಿ ಭಾಗವನ್ನು ಸೇವಿಸುವುದರ ಬಗ್ಗೆ ಬಹುತೇಕ ಜನರು ಗೊಂದಲಕ್ಕೊಳಗಾಗಿರುತ್ತಾರೆ. ವಾಸ್ತವವಾಗಿ ಮೊಟ್ಟೆಯ ಹಳದಿ ಭಾಗವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕೆಲವು ಪೌಷ್ಟಿಕಾಂಶದ ಅಂಶಗಳು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ಇದು ಹಾನಿಕಾರಕ
ಮೊಟ್ಟೆಯ ಹಳದಿ ಭಾಗವು ಹೃದಯದ ಸಮಸ್ಯೆ ಇರುವವರಿಗೆ ಅಥವಾ ಅಧಿಕ ಕೊಲೆಸ್ಟ್ರಾಲ್(Cholesterol) ಇರುವವರಿಗೆ ಯೋಗ್ಯವಲ್ಲ. ಏಕೆಂದರೆ ಕೊಲೆಸ್ಟ್ರಾಲ್ ಹೃದಯದ ಸಮಸ್ಯೆಗಳಿಗೆ ಸಂಬಂಧಿಸಿದೆ. ವಾಸ್ತವವಾಗಿ ಮೊಟ್ಟೆಯ ಹಳದಿ ಭಾಗವು 1.6 ಗ್ರಾಂ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ತೂಕ ಕಳೆದುಕೊಳ್ಳಲು ಇದು ನೆರವಾಗುವುದಿಲ್ಲ
ನೀವು ತೂಕ ಇಳಿಸಿಕೊಳ್ಳಲು(Weight Loss) ಬಯಸಿದರೆ ಅಥವಾ ಸಿಕ್ಸ್ ಪ್ಯಾಕ್ ಹೊಂದಲು ಬಯಸಿದರೆ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನಬೇಕು. ಮೊಟ್ಟೆಯ ಹಳದಿ ಭಾಗವನ್ನು ಇಂತವರು ಸೇವಿಸಬಾರದು. ತೂಕ ಹೆಚ್ಚಿಸಿಕೊಳ್ಳಬಯಸುವವರು ಮೊಟ್ಟೆಯ ಹಳದಿ ಭಾಗವನ್ನು ಸೇವಿಸಬಹುದು. ವಾಸ್ತವವಾಗಿ 1 ಮೊಟ್ಟೆಯಲ್ಲಿ 17 ಕ್ಯಾಲೊರಿಗಳಿದ್ದರೆ, ಮೊಟ್ಟೆಯ ಹಳದಿ ಭಾಗದಲ್ಲಿ 55 ಕ್ಯಾಲೊರಿಗಳಿರುತ್ತದೆ.
ಸಂಶೋಧನೆ ಏನು ಹೇಳುತ್ತದೆ?
ಸಂಶೋಧಕರ ಪ್ರಕಾರ ನಿಮ್ಮ ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ ಮತ್ತು ನೀವು ಹಳದಿ ಭಾಗದೊಂದಿಗೆ ಮೊಟ್ಟೆಯನ್ನು ಸೇವಿಸಿದರೆ, ಜಂಕ್ ಫುಡ್ ಅನ್ನು ಸೇವಿಸಿದರೆ ಅದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಆದರೆ ನೀವು ಹಳದಿ ಭಾಗದೊಂದಿಗೆ ವಾರದಲ್ಲಿ ಕೇವಲ 3 ಮೊಟ್ಟೆಗಳನ್ನು ತಿನ್ನುತ್ತಿದ್ದರೆ ಮತ್ತು ಜಂಕ್ ಫುಡ್ ಸಹವಾಸಕ್ಕೆ ಹೋಗದಿದ್ದರೆ ಅದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಸೀಮಿತ ಪ್ರಮಾಣದಲ್ಲಿ ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದು ಪ್ರಯೋಜನಕಾರಿ, ಆದರೆ ಅತಿಯಾದ ಪ್ರಮಾಣವು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಸಂಶೋಧನೆಯ ಫಲಿತಾಂಶಗಳಿಂದ ತಿಳಿದುಬಂದಿದೆ.