Bitcoin Scam: ಯಾರನ್ನೂ ಬಿಡಲ್ಲ, ಎಲ್ಲರನ್ನ ಬಲಿ ಹಾಕ್ತೀವಿ: ಸುರ್ಜೆವಾಲಾಗೆ ಸಿಎಂ ಬೊಮ್ಮಾಯಿ 4 ಪ್ರಶ್ನೆ

ಬೆಂಗಳೂರು: 2016 ರಿಂದ ಬಿಟ್ ಕಾಯಿನ್ (BitCoin Scam)  ಪ್ರಕರಣ ಇದೆ ಅಂತಾರೆ ಆಗಿನಿಂದಲೂ ಇದ್ದ ಮೇಲೆ ಕಾಂಗ್ರೆಸ್ (Congress) ಯಾಕೆ ಅದರ ಮೇಲೆ ಗಮನ ಹರಿಸಲಿಲ್ಲ? 2018 ರಲ್ಲಿ ಶ್ರೀಕಿ (Hacker Sriki) ಬಂಧಿಸಿ, ನಂತರ ಬಿಡಲಾಗಿತ್ತು. ಆತನ ಹಿನ್ನೆಲೆ ಬಗ್ಗೆ ಯಾಕೆ ಆಗಲೇ ವಿಚಾರಣೆ ಮಾಡಲಿಲ್ಲ. 2018 ರಲ್ಲಿ ಕಾಂಗ್ರೆಸ್ ಶ್ರೀಕಿಯನ್ನು ವಿಚಾರಣೆ ಮಾಡಿದ್ದಿದ್ರೆ ಎಲ್ಲವೂ ಬಹಿರಂಗ ಆಗುತ್ತಿತ್ತು. ಆತನ ವಿಚಾರಣೆಯನ್ನೇ ಕಾಂಗ್ರೆಸ್ ಮಾಡಲಿಲ್ಲ. ನಾವು ಆತನನ್ನು ಹಿಡಿದಿದ್ದು ಡ್ರಗ್ ಕೇಸ್ (Drug Case) ನಲ್ಲಿ. ನೀವು ಎಲ್ಲವನ್ನೂ ಮುಕ್ತವಾಗಿ ಬಿಟ್ಟು ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣರಾಗಿದ್ದೀರಿ. ನಾವು ಆತನನ್ನು ಡ್ರಗ್ ಕೇಸ್ ನಲ್ಲಿ ಹಿಡಿದು ವಿಚಾರಣೆ ಮಾಡಿ ಎಲ್ಲ ಬಹಿರಂಗಗೊಳಿಸಿದ್ರೆ, ನಮಗೆ ಪ್ರಶ್ನೆ ಮಾಡ್ತೀರಿ ಎಂದು ಕಾಂಗ್ರೆಸ್ ಆರೋಪಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavararaj Bommai) ತಿರುಗೇಟು ನೀಡಿದರು.

ಒಂದು ಟ್ವಿಟರ್ (Twitter) ಆಧಾರದಲ್ಲಿ ಐದು ಸಾವಿರ ಬಿಟ್ ಕಾಯಿನ್ ವರ್ಗಾಯಿಸಲಾಗಿದೆ ಎಂಬ ಆರೋಪ ಮಾಡಿದ್ದಾರೆ. ಒಂದು ಟ್ವಿಟರ್ ಇಟ್ಕೊಂಡು ಕಾಂಗ್ರೆಸ್ ಆರೋಪ ಮಾಡ್ತಾರೆ ಅಂದ್ರೆ, ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ. ಆ ಟ್ವಿಟರ್ ಗೆ ದಾಖಲೆ, ಸಾಕ್ಷಿ ಇಟ್ಟು ಮಾತಾಡಿ ಎಂದು ಮುಖ್ಯಮಂತ್ರಿಗಳು ಸವಾಲು ಹಾಕಿದರು. ಟ್ವಿಟರ್ ಮೇಲೆ ಆರೋಪ ಮಾಡುವುದು ರಾಷ್ಟ್ರೀಯ ಪಕ್ಷದ ವಕ್ತಾರರಿಗೆ ಶೋಭೆ ತರಲ್ಲ ಎಂದು ಕಿಡಿಕಾರಿದರು.

ರಣದೀಪ್ ಸುರ್ಜೆವಾಲಗೆ (Randeep Surjewala) ಸಿಎಂ ನಾಲ್ಕು ಪ್ರಶ್ನೆ

    1. 2016ರಿಂದಲೂ ಈ‌ ವಿಚಾರ ಇತ್ತು, ಅವಾಗ ನಿಮ್ದೆ ಸರ್ಕಾರ ತಾನೇ, ಅವಾಗ ನಿಮ್ಮ ಸಿಎಂ ಮತ್ತೆ ಮಂತ್ರಿ ಗಳು ತಾನೇ ಇದ್ರು, ನಿಮ್ಮವರನ್ನು ಯಾಕೆ ಬಗ್ಗೆ ನೀವು ಕೇಳಿಲ್ಲ..?

 

    1. 2018ರಲ್ಲಿ ಅವನನ್ನು ಹಿಡಿದಿದ್ರಿ.. ಆಮೇಲೆ ಬಿಟ್ರಿ.. ಯಾಕೆ ಅವಾಗ ನೀವು ಅವನನ್ನು ವಿಚಾರಣೆ ಮಾಡಲಿಲ್ಲ..?

 

    1. ಟ್ವಿಟರ್ ಆಧಾರದ ಮೇಲೆ ಹಣ ವರ್ಗಾವಣೆ ಬಗ್ಗೆ ಕೇಳಿದ್ದೀರಿ..? ಟ್ವಿಟರ್ ದು ಒಂದು ವಿಷಯವಾ..? ಅದರ ಬಗ್ಗೆ ಸೂಕ್ತ ದಾಖಲೆ ಇಟ್ಟು ಚರ್ಚೆ ಮಾಡಿ…

 

    1. ಯಾರೋ ಇಬ್ರು ಪ್ರಭಾವಿಗಳು ಅಂತೀರಲ್ಲ. ಹೆಸರೇಳಿ..? ಶ್ರೀಕಿಯನ್ನು ಬಿಟ್ಟುಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಆಕ್ರೋಶಭರಿತರಾಗಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ಯಾರೇ ಶಾಮೀಲಾಗಿದ್ರೂ ಬಿಡಲ್ಲ

ನಾವೇ ಬಿಟ್ ಕಾಯಿನ್ ಪ್ರಕರಣ (Bitcoin Case) ಬಯಲಿಗೆ ತಂದಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದ ತನಿಖೆ ಇಡಿ (ಜಾರಿ ನಿರ್ದೇಶನಾಲಯ- enforcement directorate) ನಡೆಸುತ್ತಿದೆ. ಇಡಿ ಕೇಳಿದ ಎಲ್ಲ ಮಾಹಿತಿಗಳನ್ನು ಸಹ ನೀಡಲಾಗಿದೆ. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ರೂ ಬಿಡಲ್ಲ, ಬಲಿ ಹಾಕ್ತೀವಿ ಎಂದು ಸಿಎಂ ಗುಡುಗಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *