BANGALOREMOVIE-REVIEWMOVIES ಅಪ್ಪು ಅಗಲಿಕೆ ನೋವಲ್ಲಿ ಭಜರಂಗಿ-2 ಸಿನಿಮಾ ವೀಕ್ಷಣೆಗೆ ಆಗಮಿಸುತ್ತಿರುವ ಶಿವಣ್ಣ
ಬೆಂಗಳೂರು: ಅಪ್ಪು ಅಗಲಿಕೆ ನೋವಲ್ಲಿ ಶಿವರಾಜ್ ಕುಮಾರ್ ಇಂದು ಅಭಿಮಾನಿಗಳೊಂದಿಗೆ ಭಜರಂಗಿ-2 ಸಿನಿಮಾ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಇಂದು ಮಧ್ಯಾಹ್ನ 1.30ಕ್ಕೆ ಅನುಪಮ ಚಿತ್ರಮಂದಿರಕ್ಕೆ ಶಿವರಾಜ್ ಕುಮಾರ್ ಆಗಮಿಸುತ್ತಿದ್ದು, ಚಿತ್ರಮಂದಿರದ ಮುಂದೆ ಅಭಿಮಾನಿಗಳ ದಂಡು ಹರಿದುಬಂದಿದೆ. ಈ ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳು ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದ್ದಾರೆ.
ಇನ್ನೂ ಕೆಲವೇ ಕ್ಷಣಗಳಲ್ಲಿ ನಿರ್ದೇಶಕ ಹರ್ಷ ಹಾಗೂ ವಿಲನ್ ಚೆಲುವರಾಜ್ ಜೊತೆ ಶಿವಣ್ಣ ಅನುಪಮ ಚಿತ್ರಮಂದಿರ ಆಗಮಿಸಲಿದ್ದಾರೆ.