ಸಂಸದ ಪ್ರತಾಪ್ ಸಿಂಹರನ್ನು ಕುನ್ನಿ ಎಂದು ಕುಟುಕಿದ ಪ್ರಿಯಾಂಕ ಖರ್ಗೇ ಅಭಿಮಾನಿಗಳು, ಕ್ಷಮೆ ಕೇಳದಿದ್ದರೆ ಉಗ್ರವಾದ ಹೋರಾಟದ ಎಚ್ಚರಿಕೆ.
ಹೌದು ಮಾನ್ಯ ಮೈಸೂರು ಸಂಸದರು ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾಂಕ ಖರ್ಗೇ ಅವರ ಹೆಸರು ಗಂಡೊ ಹೆಣ್ಣೊ ಎಂಬ ಗೊಂದಲವಿದೆ ಎಂದು ಹೇಳಿಕೆ ನೀಡಿದರು. ಅದರಿಂದ ತೀವ್ರ ಆಕ್ರೊಶಗೊಂಡ ಖರ್ಗೇ ಅಭಿಮಾನಿಗಳು ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕೆಲವರು ಪ್ರಕೃತಿ ದಹನ ಮಾಡಲು ಮುಂದಾದಾಗ ಪೊಲೀಸರು ತಡೆದರು.ಅದರಿಂದ ಆಕ್ರೋಶಗೊಂಡ ಅಭಿಮಾನಿಗಳು ಕೊನೆಗೆ ಬೆಂಕೆ ಹಚ್ಚಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಲಕ್ಷ್ಮಿಕಾಂತ ಮಾತನಾಡಿ ಸಂಸದರು ಮಾತಾಡಿರುವುದು ಅಕ್ಷರಶಃ ತಪ್ಪು ಖರ್ಗೇ ಅವರು ಮಾಡಿರು ಅಭಿವೃದ್ಧಿ ಕೆಲಸಗಳನ್ನು ಕಲಬುರಗಿ ಜನತೆ ಕಂಡಿದೆ.ತಾವು ಬಂದು ವೀಕ್ಷಿಸಬಹುದು ಎಂದರು.ನಂತರ ಮಾತನಾಡಿದ ಅಭಿಮಾನಿ ದಯಾನಂದ ದೊಡ್ಮನಿ ಸಂಸದ ಒಬ್ಬ ಕುನ್ನಿ ಎಂದು ಕುಟುಕಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ ನಾಯಕರು ಅಪಾರ ಅಭಿಮಾನಿಗಳು ಭಾಗಿಯಾಗಿದ್ದರು.