ಹೊಸ ಅವತಾರದಲ್ಲಿ ಕಾಶಿ ವಿಶ್ವನಾಥ ದೇಗುಲ; ಉದ್ಘಾಟನೆಗೆ ಸಜ್ಜಾದ ಪ್ರಧಾನಿ ಕನಸಿನ ಯೋಜನೆ
ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದಲ್ಲಿ (uttar Pradesh) ಈ ಬಾರಿ ಕಾಶಿ ವಿಶ್ವನಾಥ ಮಂದಿರ (Kashi Vishwanath Temple ಎಲ್ಲರ ಗಮನಸೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ್ ಕಾರಿಡಾರ್ (Kashi Vishwanath Corridor) ಉದ್ಘಾಟನೆಗೆ ಸಿದ್ದತೆ ನಡೆಯುತ್ತಿದೆ. ಈ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಅಡಿ ವಿಶ್ವನಾಥ ಮಂದಿರ ಹೊಸ ಅವತಾರ ಭಕ್ತರ ಗಮನ ಸೆಳೆದಿದೆ.

ಕಾಶಿ ವಿಶ್ವನಾಥ ಮಂದಿರದ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ ಇದಕ್ಕಾಗಿ ಶ್ರೀ ಕಾಶಿ ವಿಶ್ವನಾಥ ವಿಶೇಷ ಪ್ರದೇಶಾಭಿವೃದ್ಧಿ ಮಂಡಳಿಯನ್ನು ನಿರ್ಮಿಸಿತ್ತು. ಈ ಮೂಲಕ ದೇಗುಲದ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು.

ಪೌರಣಿಕ ಐತಿಹಾಸಿಕ ಮಹತ್ವ ಹೊಂದಿರುವ ಕಾಶಿ ವಿಶ್ವನಾಥ ಮಂದಿರ ಇದೀಗೆ ಹೊಸ ರೂಪದಲ್ಲಿ ಭಕ್ತರ ಸೆಳೆಯಲಿದೆ. ದೇಗುಲದ ಕಟ್ಟಡಗಳಿಗೆ ಪುನರ್ಜ್ಜೀವನ ಕಾರ್ಯ ನಡೆಸಲಾಗಿದೆ.

ಕಾಶಿ ವಿಶ್ವನಾಥ ಧಾಮವು ಕಲಾತ್ಮಕ ಅದ್ಭುತಗಳ 40 ಕ್ಕೂ ಹೆಚ್ಚು ಪುರಾತನ ದೇವಾಲಯಗಳ ಧಾರ್ಮಿಕ ಸಂಯೋಜನೆಯಾಗಿದ್ದು. ವಿಶ್ವನಾಥ ದೇಗುಲ ಪ್ರಮುಖ ಆಕರ್ಷಣೆಯಾಗಿದೆ.

ಕಾಶಿ ದೇವಾಲಯವನ್ನು ಅನೇಕ ಆಕ್ರಮಣಕಾರರು ಹೊಡೆದುರುಳಿಸಿದ್ದು, ಅನೇಕ ಬಾರಿ ಈ ದೇಗುಲವನ್ನು ಮರು ನಿರ್ಮಾಣ ಮಾಡಲಾಗಿದೆ, 1194ರಿಂದ 1777ರವರೆಗೆ ಹಲವಾರು ಬಾರಿ ದೇಗುಲವನ್ನು ಪುನರ್ ನಿರ್ಮಿಸಲಾಗಿದೆ

ಇಂದೋರ್ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು 1777 ರಲ್ಲಿ ದೇವಾಲಯವನ್ನು ಪುನರ್ನಿರ್ಮಿಸಿದರು. ನಂತರ ಮಹಾರಾಜ ರಂಜಿತ್ ಸಿಂಗ್ 1835 ರಲ್ಲಿ ದೇಗುಲದ ಗುಮ್ಮಟಕ್ಕೆ ಚಿನ್ನದ ಲೇಪನ ಮಾಡಿದರು. ಇದಕ್ಕಾಗಿ 1,000 ಕೆಜಿ ಚಿನ್ನವನ್ನು ನೀಡಿದರು.

1490 ರಲ್ಲಿ, ಸಿಕಂದರ್ ಲೋಧಿ ಬನಾರಸ್ನ ಪ್ರಮುಖ ದೇವಾಲಯಗಳನ್ನು ಕೆಡವಿದನು. ಇದರಿಂದ ಇಲ್ಲಿನ ಅವಿಮುಕ್ತೇಶ್ವರನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.

ಬನಾರಸ್ನ ರಘುನಾಥ ಪಂಡಿತ್ ನೆರವಿನಿಂದಾಗಿ 1585 ರಲ್ಲಿ ಹೊಸ ದೇಗುಲ ನಿರ್ಮಿಸಲಾಯಿತು. ಇದನ್ನು 1669 ರಲ್ಲಿ ಔರಂಗಜೇಬ ಕೆಡವಿ ಮಸೀದಿಯಾಗಿ ಪರಿವರ್ತಿಸಿದ್ದ

ಇಂದಿಗೂ ಕೂಡ ಇಲ್ಲಿ ಎರಡು ಹಳೆಯ ವಿಶ್ವನಾಥ ದೇವಾಲಯಗಳ ಅವಶೇಷಗಳ ಮೇಲೆ ಎರಡು ಮಸೀದಿಗಳಿವೆ, ಒಂದನ್ನು ರಜಿಯಾ ಮತ್ತು ಇನ್ನೊಂದು ಔರಂಗಜೇಬ್ ನಿರ್ಮಿಸಿದ. ನಂತರ 1776-77 ರಲ್ಲಿ ಅಹಲ್ಯಾಬಾಯಿ ಹೋಳ್ಕರ್ ಈ ದೇಗುಲಗಳ ಜೀರ್ಣೋದ್ಧರ ನಡೆಸಿದ್ದರು. ಇದೇ ದೇಗುಲ ಪ್ರಸ್ತುತ ಅಸ್ತಿತ್ವದಲ್ಲಿದೆ.

ಇನ್ನು ಈ ಕಾಶಿ ವಿಶ್ವನಾಥ ಆಗಮಿಸುವ ಭಕ್ತರು ಮತ್ತು ಯಾತ್ರಾರ್ಥಿಗಳಿಗೆ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ವಿಸ್ತರಣೆ ಮತ್ತು ದೇಗುಲವನ್ನು ಸುಂದರೀಕರಣಗೊಳಿಸಲು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದ್ದರು.

ಈಗಾಗಲೇ ಪ್ರಧಾನಿ ಕನಸಿನಂತೆ ಕಾಶಿ ವಿಶ್ವನಾಥ ಕಾರಿಡಾರ್ ರೂಪುಗೊಂಡಿದ್ದು, ಈ ವರ್ಷಾಂತ್ಯದೊಳಗೆ ಪ್ರಧಾನಿಗಳು ಈ ನವೀಕರಿಸಿದ ದೇವಾಲಯದ ಆವರಣವನ್ನು ಉದ್ಘಾಟಿಸಲಿದ್ದಾರೆ