ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆ ಹ್ಯಾಕ್; ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ ಎಂದು ನಕಲಿ ಟ್ವೀಟ್!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಶನಿವಾರ ರಾತ್ರಿ ಹ್ಯಾಕ್ (Hacking) ಮಾಡಿರುವ ಹ್ಯಾಕರ್ಗಳು ಬಿಟ್ ಕಾಯಿನ್ ಸಂಬಂಧ ಟ್ವೀಟ್ ಮಾಡಿದ್ದಾರೆ. ಆದರೆ ಪ್ರಧಾನಿ ಖಾತೆಯಿಂದ ಕೂಡಲೇ ಟ್ವಿಟರ್ ಸಂಸ್ಥೆಗೆ ಮಾಹಿತಿ ನೀಡಲಾಗಿ, ಟ್ವಿಟರ್ ಸಂಸ್ಥೆ ತಕ್ಷಣವೇ ಎಚ್ಚೆತ್ತು ಪ್ರಧಾನಿ ಮೋದಿ ಟ್ವಿಟರ್ ಖಾತೆಯನ್ನು (Restored) ಸರಿಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆ (PM Narendra Modi Twitter Account) ಸರಿಪಡಿಸಲಾಗಿದೆ. ಈ ಹಿಂದೆ ಮಾಡಿರುವ ಟ್ವೀಟ್ ಪರಿಗಣಿಸದಂತೆ ಸ್ಪಷ್ಟನೆ ನೀಡಲಾಗಿದೆ. ಪ್ರಧಾನಿ ಖಾತೆಯಿಂದ ಲಿಂಕ್ ಶೇರ್ ಆದ್ರೆ ಪರಿಗಣಿಸಬೇಡಿ. ಬಿಟ್ ಕಾಯಿನ್ ಸಂಬಂಧ ಲಿಂಕ್ ಬಂದರೆ ಪರಿಗಣಿಸಬೇಡಿ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವಿಟರ್ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ.
ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ ಎಂದು ನಕಲಿ ಟ್ವೀಟ್!
ರಾತ್ರಿ ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಪ್ರಧಾನಿ ಟ್ವಿಟರ್ ಖಾತೆಯಿಂದ ಬಿಟ್ ಕಾಯಿನ್ (Bitcoin) ಬಗ್ಗೆ ಟ್ವೀಟ್ ಮಾಡಲಾಗಿತ್ತು. ‘ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ, ಸರ್ಕಾರ ಅಧಿಕೃತವಾಗಿ 500 ಬಿಟ್ ಕಾಯಿನ್ ಖರೀದಿಸಿದೆ, ಅವುಗಳನ್ನು ದೇಶದ ಪ್ರಜೆಗಳಿಗೆ ಹಂಚುವುದಾಗಿ ಪ್ರಧಾನಿ ಮೋದಿ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಹ್ಯಾಕ್ ಆಗಿದ್ದ ಖಾತೆ ಸರಿಪಡಿಸಿದ ಹಿನ್ನೆಲೆ ಟ್ವೀಟ್ ಡಿಲೀಟ್ ಮಾಡಲಾಗಿದೆ.
ಪ್ರಧಾನ ಮಂತ್ರಿ ಕಚೇರಿ (PMO India) ಟ್ವಿಟರ್ ಖಾತೆಯಿಂದ ನರೇಂದ್ರ ಮೋದಿ ಟ್ವಿಟರ್ ಖಾತೆ ಹ್ಯಾಕ್ ಬಗ್ಗೆ ಮಾಹಿತಿ:
ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ ಎಂದು ನಕಲಿ ಟ್ವೀಟ್!