ಕೊಪ್ಪಳದಲ್ಲಿ ವಿಶೇಷ ಜಾತ್ರೆ: ಮುಳ್ಳು ಕಂಟಿಗಳ ಮೇಲೆ ಜಿಗಿದು ಹರಕೆ ತೀರಿಸುವ ಭಕ್ತರು
Koppal Thorn Festival: ಇಲ್ಲೊಂದು ಆಚರಣೆಯಿದೆ, ಇಲ್ಲಿ ಮುಳ್ಳು(Thorn)ಗಳ ಮೇಲೆ ಯುವಕರು (Youths) ಜಿಗಿಯುತ್ತಾರೆ, ಮುಳ್ಳಿನ ಮೇಲೆ ಕುಣಿದಾಡುತ್ತಾರೆ, ಮುಳ್ಳನ್ನು ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಮುಳ್ಳಿನ ಮೇಲೆ ಜಿಗಿದಾಡಿದರೂ ಯುವಕರಿಗೆ ನೋವು ಆಗುವುದಿಲ್ಲವಂತೆ. ಎಲ್ಲವೂ ಆಂಜನೇಯ (Lord Anjaneya) ಮಹಿಮೆ ಎಂಬ ನಂಬಿಕೆ ಇದೆ. ಮುಳ್ಳಿನ ಮೇಲೆ ಜಿಗಿದಾಡಿ ದೇಹ ದಂಡಿಸಿ ಹರಕೆ ತೀರಿಸುವುದು ಒಂದು ಸಂಪ್ರಾದಾಯವಿದೆ. ಸಾಮಾನ್ಯವಾಗಿ ಒಂದು ಮುಳ್ಳು ಚುಚ್ಚಿದರೆ ಒದ್ದಾಡುವ ನಾವುಗಳು, ಇಲ್ಲಿ ಮುಳ್ಳುಗಳ ಮೇಲೆಯೇ ಯುವಕರು ಮಲಗುತ್ತಾರೆ, ಕುಣಿಯುತ್ತಾರೆ, ನಲಿಯುತ್ತಾರೆ, ಸಂಭ್ರಮಿಸುತ್ತಾರೆ. ಸಂಭ್ರಮದ ಆಚರಣೆಯಲ್ಲಿ ದೇಹ ದಂಡನೆ ಮಾಡಿಕೊಳ್ಳುವುದು ಸಹ ಒಂದು ಆಚರಣೆ, ಕೊಪ್ಪಳ ತಾಲೂಕಿನಲ್ಲಿ (Koppal Taluk Villages) ಬಹುತೇಕ ಗ್ರಾಮಗಳಲ್ಲಿ ಈ ಆಚರಣೆ ಇದೆ.
ನೋಡಲು ರೋಮಾಂಚನಕಾರಿಯಾಗಿದ್ದರೂ, ಈ ಭಾಗದಲ್ಲಿ ಒಂದು ಸಾಮಾನ್ಯವಾಗಿರುವ ದೇವರಿಗೆ ಹರಕೆ ಸಲ್ಲಿಸುವ ಆಚರಣೆಯಾಗಿದೆ.ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಆಂಜನೇಯನಿಗೆ ಮುಳ್ಳು ಹರಕೆ ಸಲ್ಲಿಸುವ ಆಚರಣೆ ಆರಂಭವಾಗುತ್ತದೆ, ಮುಳ್ಳು ಹರಕೆಯು ಯುಗಾದಿ ಪಾಡ್ಯದವರೆಗೂ ನಡೆಯುತ್ತಿದೆ.
ಹರಕೆ ತೀರಿಸಲು ಭಕ್ತರ ಆಚರಣೆ
ಕೊಪ್ಪಳ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮುಳ್ಳು ಹರಕೆ ಕಾರ್ಯಕ್ರಮ ನಡೆಯುತ್ತದೆ. ಮುಳ್ಳು ಹರಕೆಯನ್ನು ಆಂಜನೇಯನಿಗೆ ಸಲ್ಲಿಸುವುದು ವಾಡಿಕೆ. ಇದು ವಿಶೇಷವಾದ ಹರಕೆಯಾಗಿದ್ದು, ಈ ಆಚರಣೆಯನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸುತ್ತಾರೆ
ದೀರ್ಘ ದಂಡ ನಮಸ್ಕಾರ ಮತ್ತು ಮುಳ್ಳುಗಳ ಸಂಗ್ರಹ
ಕೊಪ್ಪಳ ತಾಲೂಕಿನ ಲೇಬಗೆರಿಯಲ್ಲಿ ಶ್ರೀ ಮಾರುತೇಶ್ವರನಿಗೆ ಮುಳ್ಳು ಹರಕೆ ಕಾರ್ಯಕ್ರಮ ನಡೆಯಿತು. ಲೇಬಗೆರಿಯ ಮದ್ದಾನಸಂಸ್ಥಾನ ಮಠದ ಆಡಳಿತವಿರುವ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಆರಂಭದಲ್ಲಿ ನಿತ್ಯ ದೀಪ ಬೆಳಗಿಸಿ ಕಾರ್ತಿಕ ಮಾಸ ಆಚರಿಸುವ ಗ್ರಾಮಸ್ಥರು, 41 ದಿನ ಗ್ರಾಮದಲ್ಲಿ ಮಾರುತೇಶ್ವರನ ಕಾರ್ತಿಕೋತ್ಸವ ನಡೆಯುತ್ತದೆ. ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಭಕ್ತರು ಬೆಳಗ್ಗೆಯಿಂದ ದೀರ್ಘ ದಂಡ ನಮಸ್ಕಾರ ಹಾಕುತ್ತಾರೆ .
ಇದೊಂದು ಹರಕೆಯ ಕ್ರಮವಾಗಿದ್ದರೆ, ಮದ್ಯಾಹ್ನದ ವೇಳೆಗೆ ಮುಳ್ಳು ಹರಕೆ ನಡೆಯುತ್ತದೆ. ಬೆಳಗ್ಗೆ ಹತ್ತು ಗಂಟೆಯ ವೇಳೆಗೆ ಯುವಕರ ತಂಡವು ಗುಡ್ಡಕ್ಕೆ ಹೋಗಿ ಮುಳ್ಳು ಕಂಟಿಯನ್ನು ತರುತ್ತಾರೆ. ಮುಳ್ಳನ್ನು ಕೊಡಲಿಯಿಂದ ಕಡಿಯುವುದಿಲ್ಲ, ಕಲ್ಲುಗಳಿಂದ ಕಡಿದು ತರುತ್ತಾರೆ,.ಒಬ್ಬೊಬ್ಬ ಯುವಕ ತಾನು ಹೊರವಷ್ಟು ಮುಳ್ಳು ಕಂಟಿಗಳನ್ನು ತಂದು ಒಂದು ಕಡೆ ಗುಂಪು ಅಥವಾ ಗುಡ್ಡೆ ಹಾಕುತ್ತಾರೆ.
ಮುಳ್ಳುಗಳ ಮೇಲೆ ಕುಣಿದಾಡುವ ಭಕ್ತ ವೃಂದ
ಗುಡ್ಡದಿಂದ ಗ್ರಾಮಕ್ಕೆ ಮುಳ್ಳನ್ನು ತರುವ ಯುವಕರು ಗ್ರಾಮ ಬೀದಿಯಲ್ಲಿ ಗುಂಪು ಹಾಕಿ ಅದರ ಮೇಲೆ ಜೀಗಿದಾಡುತ್ತಾರೆ, ಈ ಸಂದರ್ಭದಲ್ಲಿ ಸಾವಿರಾರು ಜನ ಸೇರಿ ಯುವಕರ ಈ ಆಚರಣೆಯನ್ನು ನೋಡಿ ನಲಿಯುತ್ತಾರೆ.
ರಾತ್ರಿ ಕಂಬಳಿ ಮೇಲೆಯೇ ಮಲಗೋದು ಕಡ್ಡಾಯ
ಇಲ್ಲಿ ಜಿಗಿದಾಡಿದಾಗ ಮುಳ್ಳುಗಳು ದೇಹದಲ್ಲಿ ಚುಚ್ಚಿಕೊಳ್ಳುತ್ತವೆ. ಮುಳ್ಳು ಹರಕೆ ಸಲ್ಲಿಸಿದವರು ರಾತ್ರಿ ಕಂಬಳಿಯ ಮೇಲೆ ಮಲಗುತ್ತಾರೆ. ಆಗ ದೇಹದಲ್ಲಿ ಚುಚ್ಚಿಕೊಂಡಿರುವ ಮುಳ್ಳುಗಳು ಕಂಬಳಿಯ ಮೇಲೆ ಉದುರುತ್ತವೆ ಅನ್ನೋ ನಂಬಿಕೆ ಇದೆ.
ಇಷ್ಟಾರ್ಥ ಸಿದ್ದಿಗಾಗಿ ಈ ಆಚರಣೆ
ಮುಳ್ಳು ಚುಚ್ಚುದವರಿಂದ ದೇಹದ ಮೇಲೆ ಆಗಿರುವ ಗಾಯಗಳು ಹರಕೆಯ ಹುರುಪಿನಲ್ಲಿ ಗಾಯದ ನೋವು ಮರೆತು ಬಿಡುತ್ತಾರೆ. ಗಾಯ ಒಂದೆರೆಡು ದಿನ ಮಾತ್ರ ಇದ್ದು ವಾಸಿಯಾಗುತ್ತಿದ., ಈ ಗಾಯವನ್ನು ಹರಕೆ ತೀರಿಸುವವರು ನಿರ್ಲಕ್ಷ್ಯ ಮಾಡುತ್ತಾರೆ. ಈ ರೀತಿ ಹರಕೆ ಸಲ್ಲಿಸುವದರಿಂದ ತಮ್ಮ ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ಕಲ್ಪನೆ ಇದೆ, ವಿಶಿಷ್ಠ ಹಾಗು ವಿಶೇಷವಾಗಿರುವ ಆಚರಣೆ ರೋಮಾಂಚನವಾಗಿರುತ್ತದೆ.