ಕೃಷಿ ಭೂಮಿ ಮಾರಾಟ ಮಾಡಬೇಕು ಎಂದುಕೊಂಡವರಿಗೆ ಸರ್ಕಾರದ ಶಾಕ್! 5 ಗುಂಟೆಗಿಂತ ಕಡಿಮೆ ಜಮೀನು ಮಾರಾಟ ಮಾಡುವಂತಿಲ್ಲ
ಕೃಷಿ ಉದ್ದೇಶಕ್ಕೆ(Agriculture) ಭೂಮಿ(Land) ಪಡೆದು ಆ ಭೂಮಿಯನ್ನ ಮನೆ ಕಟ್ಟಲು ಬಳಕೆ ಮಾಡಿಕೊಂಡರೆ ಸರ್ಕಾರ(Government) ನಡೆಯಲಿದೆ ಎಂದು ಸಚಿವ ಮಾಧುಸ್ವಾಮಿ(Madhuswamy) ಅಧಿವೇಶನದಲ್ಲಿ ಹೇಳಿದ ಬೆನ್ನಲ್ಲೇ, ಕೃಷಿ ಜಮೀನು ಹೊಂದಿರುವವರಿಗೆ ಸರ್ಕಾರ ಶಾಕ್ ನೀಡಿದೆ.. 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ. ಮಾರಾಟ(Sale) ಮಾಡಿದರೆ ಫೋಡಿ ಅಥವಾ 11ಇ ನಕ್ಷೆ ದೊರೆಯುವುದಿಲ್ಲ ಎಂಬ ತುಂಬಾ ಆದೇಶವನ್ನು ಸರಕಾರ ಅಧಿಕೃತವಾಗಿ ಹೊರಡಿಸಿದೆ.. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮನಿಶ್ ಮೌದ್ಗಿಲ್ ನಡೆಸಿರುವ ಆದೇಶದ ಪ್ರಕಾರ ಕೃಷಿ ಭೂಮಿಯನ್ನು ಕೃಷಿಗಾಗಿ ಪಡೆದು ಅದರಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಹೋದವರಿಗೆ ಶಾಕ್ ಸಿಕ್ಕಂತಾಗಿದೆ..
ನಾಲ್ಕು ಜಿಲ್ಲೆಗಳಿಗೆ ವಿನಾಯಿತಿ..
ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಿಲ್ಲ. ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೆ ನಂಬರ್ಗಳನ್ನು ಸೃಷ್ಟಿಸುವುದು ಕಷ್ಟವಾಗಿದೆ. ಅದಕ್ಕಾಗಿ ಇದನ್ನು ತಡೆಯುವ ಉದ್ದೇಶಕ್ಕೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ತಡೆ ನೀಡಿದೆ. ಅಲ್ಲದೆ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ 108 ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡ ಸರ್ವೆ ನಂ. ನ ಕನಿಷ್ಠ ವಿಸ್ತೀರ್ಣವನ್ನು ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆದೇಶದಲ್ಲಿ ವಿನಾಯಿತಿ ನೀಡಲಾಗಿದ್ದು, ಈ ನಾಲ್ಕು ಜಿಲ್ಲೆಗಳಲ್ಲಿ 3 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶವಿಲ್ಲ.
ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 5 ಗುಂಟೆಯನ್ನು ಸರ್ಕಾರ ನಿಗದಿ ಮಾಡಿದೆ. ಕೃಷಿ ಉದ್ದೇಶಕ್ಕೆ ಉಪಯೋಗಿಸುವ ಭೂಮಿಯ ಸರ್ವೆ ನಂಬರ್ಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ತುಂಡು-ತುಂಡು ಭೂಮಿ ಮಾರಾಟ ಅಥವಾ ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ..
ಕೃಷಿಯೇತರ ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಕೃಷಿ ಭೂಮಿ..
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ರೈತರಿಂದ ಕೃಷಿ ಮಾಡುವ ಉದ್ದೇಶದಿಂದ ಜಮೀನು ಖರೀದಿ ಮಾಡಿ, ನಗರಾಭಿವೃದ್ಧಿ ಕಾಯ್ದೆಯಡಿ ನಿಯಮಬದ್ಧವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಗಳನ್ನು ವಾಣಿಜ್ಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.. ಬಹುತೇಕರು ಕೃಷಿ ಭೂಮಿಗಳನ್ನು ಸೈಟು ಅಥವಾ ಕಟ್ಟಡಗಳಾಗಿ ಪರಿವರ್ತನೆ ಮಾಡಿ, ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ..ಅಲ್ಲದೆ ಕೃಷಿ ಭೂಮಿಗಳನ್ನು ಇತರರಿಗೆ ತುಂಡು ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ರಸ್ತೆ ಒಳಚರಂಡಿ ನೀರು ಜಾತಿ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಕಷ್ಟ ವಾಗುತ್ತಿರುವುದುರಿಂದ ಸರ್ಕಾರ 5 ಗುಂಟೆಗಿಂತ ಕಡಿಮೆ ಇರುವ ಜಮೀನು ಮಾರಾಟಕ್ಕೆ ನಿಷೇಧ ವಿಧಿಸಲು ಮುಂದಾಗಿದೆ.
ರೈತರಿಗೆ ಸಮಸ್ಯೆ ತಂದ ಸರ್ಕಾರದ ಆದೇಶ..
ಇನ್ನು 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ ಎಂಬ ಸರ್ಕಾರದ ಆದೇಶ ಈಗ ಸಣ್ಣ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಬೇಕು ಎಂದರು ಸಹ ಸಮಸ್ಯೆಯ ಸುಳಿಯಲ್ಲಿ ಸಿಲುಕಲಿದ್ದಾರೆ.. ರೆವಿನ್ಯೂ ಬಡಾವಣೆಗಳಲ್ಲಿ 1 ಗುಂಟೆಗಿಂತ ಕಡಿಮೆ ವಿಸ್ತೀರ್ಣವನ್ನು ಒಂದು ಸೈಟ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. 1 ಗುಂಟೆ ಅಥವಾ ಕಂದಾಯ ಲೇಔಟ್ಗೆ ಕಡಿವಾಣ ಹಾಕಬಹುದಾಗಿತ್ತು. ಈ ಆದೇಶದಿಂದ ಸಣ್ಣ ರೈತರಿಗೆ 5 ಗುಂಟೆಗಿಂತ ಕಡಿಮೆ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಅನಿವಾರ್ಯ ಕಾರಣಗಳಿಂದ ತಮ್ಮ ಕೃಷಿ ಜಮೀನು ಮಾರಾಟ ಮಾಡಲು ಮುಂದಾಗುವ ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಲಿದ್ದಾರೆ..
ಇಂಥವರಿಗೆ ವಿನಾಯಿತಿ ಇದೆ: 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ ತುಂಬಾ ಆದೇಶದಿಂದ ಕೆಲವರಿಗೆ ವಿನಾಯಿತಿಯನ್ನು ನೀಡಲಾಗಿದೆ.. ಯಾರು ಈ ಹೊಸ ಆದೇಶಕ್ಕೂ ಮುನ್ನ ಸರ್ವೆ ನಂಬರ್ ಅಥವಾ ಪಹಣಿಗಳಲ್ಲಿ ಕನಿಷ್ಠ ವಿಸ್ತೀರ್ಣಗಿಂತ ಕಡಿಮೆ ವಿಸ್ತೀರ್ಣ ಇದ್ದರೆ ಮುಂದುವರಿಯಲಿದೆ. ಅಂತಹ ಸರ್ವೆ ನಂಬರ್ ಮತ್ತು ಪಹಣಿಗಳು ಮಾನ್ಯವಾಗಿರುತ್ತವೆ. ಒಂದು ವೇಳೆ ಪಿತ್ರಾರ್ಜಿತವಾಗಿ/ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ನಿಗದಿತ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಹೊಸ ಪಹಣಿ ಮತ್ತು ಫೋಡಿ ರಚಿಸಬಹುದು. ಜತೆಗೆ ಈಗಾಗಲೇ ಪಹಣಿಗಳಲ್ಲಿ ದಾಖಲಾದ ಮತ್ತು ಅಸ್ತಿತ್ವದಲ್ಲಿ ಇರುವ ಮಾಲೀಕರ ಹಕ್ಕುಗಳ ಪ್ರಕಾರ ಫೋಡಿಯನ್ನು ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇದ್ದರೂ ಅನುಮತಿಸಲಾಗಿದೆ.
ಅಧಿವೇಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಸಚಿವ ಮಾಧುಸ್ವಾಮಿ
ರಾಜ್ಯಾದ್ಯಂತ ಕೃಷಿ ಭೂಮಿಯನ್ನು ತುಂಡು ತುಂಡು ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ರೀತಿ ಮಾರಾಟ ಮಾಡಲಾದ ಭೂಮಿಗಳನ್ನು ಕೃಷಿ ಉದ್ದೇಶಕ್ಕೆ ಬಳಸುವ ಬದಲು ನಿವೇಶನಗಳನ್ನಾಗಿ ಬಳಸಲಾಗುತ್ತಿದೆ.ಹೀಗಾಗಿ ಈ ಹಿನ್ನೆಲೆಯಲ್ಲಿ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 108 ರಡಿ ಕೃಷಿ ಉದ್ದೇಶಕ್ಕಾಗಿ ಬಳಸುವ ಜಮೀನು 5ಗುಂಟೆಗಿಂತ ಕಡಿಮೆ ವಿಸ್ತೀರ್ಣ ಇದ್ರೆ ಅದನ್ನ ಮಾರಾಟ ಮಾಡುವಂತಿಲ್ಲ ಎಂದು ಅಧಿವೇಶನದಲ್ಲಿ ಮಾಹಿತಿ ನೀಡಿದರು.