ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟ, ಗೆದ್ದವರ್ಯಾರು? ಇಲ್ಲಿದೆ ಅಂತಿಮ ಪಟ್ಟಿ

ಬೆಂಗಳೂರು(ಡಿ.16): ರಾಜ್ಯ ಒಕ್ಕಲಿಗರ ಸಹಕಾರ ಸಂಘ(Karnataka State Vokkaliga Sangha)ದ ಚುನಾವಣೆಯ ಫಲಿತಾಂಶ(Election Result) ಬುಧವಾರ ತಡರಾತ್ರಿ ಹೊರಬಿದ್ದಿದೆ. ಸುಮಾರು 35 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ತಡರಾತ್ರಿವರೆಗೆ ಮತ ಎಣಿಕೆ(Vote Counting) ಮಾಡಲಾಗಿತ್ತು. ಹಲವು ಗೊಂದಲಗಳ ನಡುವೆ ಕೊನೆಗೂ ಫಲಿತಾಂಶ ಪ್ರಕಟವಾಗಿದೆ. ಅರಮನೆ ಮೈದಾನ(Palace Ground)ದಲ್ಲಿ ನಿನ್ನೆ ಬೆಳಗ್ಗೆ 9 ಗಂಟೆಯಿಂದ ಮತ ಎಣಿಕೆ ಆರಂಭವಾಗಿ, ತಡರಾತ್ರಿ 12 ಗಂಟೆವರೆಗೆ ನಡೆದಿತ್ತು. ಬಳಿಕ ಮತ ಎಣಿಕೆ ಮುಕ್ತಾಯಗೊಂಡಿದ್ದು, ಚುನಾವಣಾಧಿಕಾರಿಗಳು ವಿಜೇತರ ಹೆಸರು ಘೋಷಣೆ ಮಾಡಿದ್ದಾರೆ.

ತುಮಕೂರಿನ ಮಾಜಿ ಶಾಸಕ ನಾಗರಾಜಯ್ಯ ಅವರ ಪುತ್ರ ಲೋಕೇಶ್ ಡಿ.ನಾಗರಾಜಯ್ಯ ಸೇರಿ ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ, ಬಿ.ಪಿ.ಮಂಜೇಗೌಡ ಸೇರಿ ಅನೇಕರು ಜಯ ಗಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಕೆಲ ಜಿಲ್ಲೆಗಳ ಫಲಿತಾಂಶ ಹೊರ ಬಿದ್ದಿತು.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ

1.ಡಾ.ಟಿ ಹೆಚ್ ಆಂಜನಪ್ಪ- 68938
2.ಅಶೋಕ್ ಹೆಚ್ ಎನ್. (ತಮ್ಮಜಿ)-61829.
3.ಕೆಂಚಪ್ಪಗೌಡ- 58066.
4.ಆರ್ ಪ್ರಕಾಶ್- 56694.
5.ಹೆಚ್ ಸಿ ಜಯಮುತ್ತು- 56254.
6.ಸಿ ದೇವರಾಜ್ (ಹಾಪ್ ಕಾಮ್ಸ್)-55903
7.ಎಲ್ ಶ್ರೀನಿವಾಸ್ -49217.
8.ಸಿಎಂ ಮಾರೇಗೌಡ-48492.
9.ಬಿ.ವಿ.ರಾಜಶೇಖರ್ ಗೌಡ-96180.
10.ಕೆ ಎಸ್ ಸುರೇಶ್- 45601.
11.ಎಂ ಎಸ್ ಉಮಾಪತಿ-44709.
12.ವೆಂಕಟರಾಮೇಗೌಡ -43022.
13.ಡಿ. ಹನುಮಂತಯ್ಯ -41687.
14. ಎಂ ಪುಟ್ಟ ಸ್ವಾಮಿ- 41165.
15. ಡಾ.ವಿ.ನಾರಾಯಣ ಸ್ವಾಮಿ -40782.

ಕೆಂಚಪ್ಪ ಗೌಡ ತಂಡ – ಗೆದ್ದ ಅಭ್ಯರ್ಥಿಗಳು 10

ಅಶೋಕ್ ಹೆಚ್ ಎನ್. (ತಮ್ಮಾಜಿ‌)
ಆರ್. ಪ್ರಕಾಶ್
ಸಿ.ದೇವರಾಜ್ (ಹಾಪ್ ಕಾಮ್ಸ್).
ಎಲ್. ಶ್ರೀನಿವಾಸ್
ಸಿಎಂ ಮಾರೇಗೌಡ.
ಬಿ.ವಿ.ರಾಜಶೇಖರ್ ಗೌಡ.
ಕೆ .ಎಸ್. ಸುರೇಶ್
ವೆಂಕಟರಾಮೇಗೌಡ
ಡಾ.ವಿ.ನಾರಾಯಣಸ್ವಾಮಿ

ಹೆಚ್ .ಸಿ .ಜಯಮುತ್ತು ತಂಡ – ಗೆದ್ದ ಅಭ್ಯರ್ಥಿಗಳು 3
ಎಂ ಪುಟ್ಟ ಸ್ವಾಮಿ
ಡಿ. ಹನುಮಂತಯ್ಯ

ಡಾ.ಟಿ ಹೆಚ್ ಆಂಜನಪ್ಪ ತಂಡ – ಗೆದ್ದ ಅಭ್ಯರ್ಥಿಗಳು 2
ಡಾ ಟಿ ಹೆಚ್ ಅಂಜನಪ್ಪ
ಎಂ ಎಸ್ ಉಮಾಪತಿ

ಪಾರದರ್ಶಕ ಫಲಿತಾಂಶ ನೀಡಿದ್ದೇವೆ

ಚುನಾವಣಾಧಿಕಾರಿ ರವೀಂದ್ರ ಗೆದ್ದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಮೊದಲ‌ ಬಾರಿಗೆ ಒಕ್ಕಲಿಗ ಸಂಘದ ಚುನಾವಣಾ ಫಲಿತಾಂಶ ಒಂದೇ ದಿನದಲ್ಲಿ‌ ಮುಗಿದಿದೆ. ಮತ ಎಣಿಕೆ ವೇಳೆ ಕೆಲ ಗೊಂದಲಗಳಿತ್ತು . ಅದನ್ನೆಲ್ಲಾ ಬಗೆಹರಿಸಿ ಪಾರದರ್ಶಕ ಫಲಿತಾಂಶ ನೀಡಿದ್ದೇವೆ. ಜಿಲ್ಲಾದ್ಯಂತ ಅಭ್ಯರ್ಥಿಗಳ‌ ಫಲಿತಾಂಶ ಕೈ ಸೇರಿದೆ. ರಾಜ್ಯಾದ್ಯಂತ 35 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆ ಆಗಿದ್ದಾರೆ. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಿದ್ದೇವೆ. ಅಧ್ಯಕ್ಷ ಸ್ಥಾನ ಆಯ್ಕೆ ದಿನಾಂಕವನ್ನ ಸಭೆ ಕರೆದು ನಿರ್ಧಾರ ಮಾಡುತ್ತೇವೆ ಎಂದರು.

ಡಿಸೆಂಬರ್ 12ರಂದು ನಡೆದಿದ್ದ ಚುನಾವಣೆ

ಡಿ.12ರಂದು ನಡೆದ ಚುನಾವಣೆಯಲ್ಲಿ 5,20,721 ಮತದಾರರ ಪೈಕಿ ಒಟ್ಟು 3,71,679 ಮಂದಿ ಮತದಾನ ಮಾಡಿದ್ದರು. ಒಟ್ಟು ಶೇ.71 ಮತದಾನವಾಗಿತ್ತು. 13 ಜಿಲ್ಲೆಗಳಿಂದ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ ಒಟ್ಟು 141 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *