Health Tips: ಹಾವಿನ ವಿಷ ತೆಗೆಯಲು ಬಳಕೆ ಆಗುತ್ತೆ ದೇವರ ಪೂಜೆಗೆ ಬಳಸುವ ನಂದಿ ಬಟ್ಟಲ ಹೂ
ಆಯುರ್ವೇದವು(Ayurveda) ನಿನ್ನೆ ಮೊನ್ನೆ ಪದ್ದತಿ ಅಲ್ಲ ನಮ್ಮ ಪೂರ್ವಜರು ನಡೆಸುತ್ತಿದ್ದ ಒಂದು ವೈದ್ಯಕೀಯ(Medicine) ಪದ್ದತಿ ನಮ್ಮ ಸುತ್ತಮುತ್ತಲ ಪರಿಸರ ದಲ್ಲಿ ಒಂದೊಂದು ಸಸ್ಯದಲ್ಲಿ(Plant) ಕೂಡ ಒಂದೊಂದು ವೈದ್ಯಕೀಯ ಗುಣಗಳನ್ನು ಹೊಂದಿಕೊಂಡಿದೆ. ಹೀಗಾಗಿ ನಮ್ಮ ಮನೆಯಂಗಳದಲ್ಲಿ(Home) ಕಂಡು ಬರುವ ಒಂದೊಂದು ಗಿಡಗಳಿಗೂ, ಹೂ(Flower) ಅದರದೆಯಾದ ಮಹತ್ವವಿದೆ. ಅದರಲ್ಲೂ ಪ್ರತಿನಿತ್ಯ ಮನೆಯಂಗಳದಲ್ಲಿ ಕಂಡು ಬರುವ ನಂದಿ ಬಟ್ಟಲು ಹೂವು ನಿತ್ಯ ದೇವರ ಪೂಜೆಗೆ ಬಳಸುವ ಹೂವು. ಹಳ್ಳಿಗಳಲ್ಲಿ ಹಾಗೂ ಮನೆಯ ಸುತ್ತಮುತ್ತ ಮತ್ತು ದೇವಸ್ಥಾನದ ಹತ್ತಿರ ಹೆಚ್ಚಾಗಿ ಸಿಗುತ್ತದೆ. ಇನ್ನೂ ಈ ವಿಶೇಷ ಅಂದ್ರೆ ಹಿಮಾಲಯದ ತಪ್ಪಲಿನಲ್ಲಿ ಕಂಡು ಬರುವ ಈ ನಂದಿ ಬಟ್ಟಲಿನ ಹೂವನ್ನ ಈಶ್ವರನ ಪೂಜೆಗೆ ಸರ್ವಶ್ರೇಷ್ಠವಾದ ಹೂವು. ಇಂಥಹ ಹೂವಿನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ.
ದೇವರ ಹೂ ನಂದಿ ಬಟ್ಟಲಿನ ಹೂವಿನಲ್ಲಿದೆ ಔಷಧೀಯ ಗುಣ
ಕಡು ಹಸಿರು ಬಣ್ಣದ ಎಲೆಗಳನ್ನು ಹೊಂದಿರುವ ಬಿಳಿಯ ಬಣ್ಣದ ಹೂಗಳನ್ನು ಮೈ ತುಂಬ ಹೊತ್ತು ಕೊಂಡು ನಳನಳಿಸುವ ಹೂವು ತುಂಬಿದ ಗಿಡ ನಂದಿಬಟ್ಟಲು. ಐದು ಎಸಳಿನ ಮಲ್ಲಿಗೆ ಹೂವನ್ನು ಹೋಲುವ ನಂದಿಬಟ್ಟಲು ಹೆಚ್ಚು ಔಷದಿ ಗುಣ ಹೊಂದಿರುವಂತದ್ದು. ಈ ಗಿಡದ ಹೂವು, ಬೇರು, ಎಲೆ ಔಷಧೀಯ ಗುಣ ಹೊಂದಿದ್ದು, ಇದರಿಂದ ಹಲವಾರು ಪ್ರಯೋಜನಗಳಿವೆ.
ಹಾವಿನ ವಿಷ ತೆಗೆಯಲು: ಹಾವು ಕಚ್ಚಿದಾಗ ಪ್ರಾಥಮಿಕ ಚಿಕಿತ್ಸೆ ಅತ್ಯಗತ್ಯ.. ಒಂದು ವೇಳೆ ಪ್ರಾಥಮಿಕ ಚಿಕಿತ್ಸೆ ನೀಡಲಾಗದೆ ವಿಷ ಮೈಯೆಲ್ಲ ಏರಿ, ಪ್ರಜ್ಞೆ ತಪ್ಪಿದ್ರೆ ನಂದಿಬಟ್ಟಲು ಹೂವಿನಿಂದ ವಿಷ ತೆಗೆಯಬಹುದು.. ಹೌದು ನಂದಿ ಬಟ್ಟಲಿನ ಹೂವಿನ ಗಿಡದ ಬೇರನ್ನ ತಂದು ಚೆನ್ನಾಗಿ ತೊಳೆದು ನೀರಿನಲ್ಲಿ ತೇಯ್ದು ಮೂಗಿನ ಹೊಳ್ಳೆಗಳಿಗೆ ಬಿಡುವುದರಿಂದ ವಿಷ ಇಳಿಯಲಿದೆ.
ಕಣ್ಣಿನ ಆರೋಗ್ಯಕ್ಕೆ; ಕಣ್ಣಿನಲ್ಲಿ ಪೊರೆ ಆರಂಭವಾಗಿದ್ರೆ, ಆರಂಭದ ಹಂತದಲ್ಲಿಯೇ ಇದನ್ನ ಗುರುತಿಸುವುದು ಉತ್ತಮ. ಇದಕ್ಕೆ ನಂದಿಬಟ್ಟಲಿನ ಹೂವನ್ನ ಮದ್ದಾಗಿ ಬಳಸಬಹುದು.ಕಣ್ಣಿನಲ್ಲಿ ಪೊರೆ ಆರಂಭವಾದ ಹಂತದಲ್ಲಿರುವಾಗ ಹೂವಿನ ರಸವನ್ನು ಇಲ್ಲವೇ ಬೇರನ್ನು ತೇಯ್ದು ಲೇಪಿಸುವುದರಿಂದ ಉತ್ತಮ.ಆದರೆ ಈ ಚಿಕಿತ್ಸೆ ಆರಂಭಿಸುವ ಮುನ್ನ ಒಂದು ಸಲ ಆಯುರ್ವೇದ ವೈದ್ಯರ ಸಲಹೆ ಪಡೆಯಬೇಕಾದುದು ಅವಶ್ಯಕ
ಸ್ತ್ರೀಯರ ಋತುಸಮಸ್ಯೆಗಳಿಗೆ: ಸಾಮಾನ್ಯವಾಗಿ ಮಹಿಳೆಯರಲ್ಲಿ ಋತು ಸಂಬಂಧ ಸಮಸ್ಯೆಗಳು ಹೆಚ್ಚು. ಇದನ್ನ ನಿವಾರಣೆ ಮಾಡಲು ಮಹಿಳೆಯರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಅದ್ರಲ್ಲೂ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಸ್ಯೆ ಉಂಟಾಗುವ ಸಂದರ್ಭದಲ್ಲಿ ಅನೇಕ ಆರೋಗ್ಯ ಸಮಸ್ಯೆ ಉಂಟಾಗಬಹುದು. ಇಂಥಹ ಸಂದರ್ಭದಲ್ಲಿ ನಂದಿ ಬಟ್ಟಲಿನ ಹೂವು ಸಹಕಾರಿಯಾಗಲಿದೆ.
ಹಲ್ಲು ನೋವು ನಿವಾರಣೆ: ಹಲ್ಲು ನೋವು ಒಮ್ಮೆ ಕಾಣಿಸಿಕೊಂಡ್ರೆ ಅದರ ಕಷ್ಟ ಅನುಭವಿಸುವವರಿಗೆ ಗೊತ್ತು.ಹೀಗಾಗಿ ಹಲ್ಲು ನೋವು ನಿವಾರಣೆ ಮಾಡಿಕೊಳ್ಳಲು ಹಲವಾರು ಮನೆ ಮದ್ದುಗಳನ್ನ ಮಾಡುವ ಮುನ್ನ ನಂದಿ ಬಟ್ಟಲಿನ ತೊಗಟೆಯನ್ನ ಬಳಸುವುದು ಸೂಕ್ತ.ನಂದಿಬಟ್ಟಲು ಗಿಡದ ಬೇರು ಇಲ್ಲವೇ ಬೇರಿನ ತೊಗಟೆಯನ್ನು ಬಾಯಲ್ಲಿರಿಸಿಕೊಂಡು ಚಪ್ಪರಿಸುವುದರಿಂದ ನೋವು ಬಹಳ ಬೇಗ ಶಮನವಾಗುತ್ತದೆ.
ಗರ್ಭಕೋಶದ ಸಮಸ್ಯೆ ನಿವಾರಣೆ: ಕೆಲವು ಸ್ತ್ರೀಯರಲ್ಲಿ ಗರ್ಭ ಕೋಶದ ತೊಂದರೆಗಳಿಂದ ಪದೇ ಪದೇ ಗರ್ಭಪಾತವಾಗುವುದು ಇಲ್ಲವೇ ಗರ್ಭದಾರಣೆ ತಡವಾಗುತ್ತಿದ್ದಲ್ಲಿ ಅಂತವರು ಋತುಸ್ರಾವದ ನಾಲ್ಕನೇ ದಿನದಿಂದ ಏಳನೇ ದಿನಗಳವರೆಗೆ ಐದು ತಾಜಾ ನಂದಿಬಟ್ಟಲು ಎಲೆಗಳನ್ನು ಎರಡು ಚಮಚೆ ಕೆಂಪು ಅಕ್ಕಿಯೊಂದಿಗೆ ನುಣ್ಣಗೆ ಅರೆದು ತುಪ್ಪ ಮತ್ತು ಜೇನು ತುಪ್ಪ ಬೆರೆಸಿ ಸೇವಿಸಬೇಕು. ಇದೆ ರೀತಿ ಮೂರು ತಿಂಗಳು ಮುಟ್ಟಾದ ನಾಲ್ಕನೇ ದಿನದಿಂದ ಏಳನೇ ದಿನಗಳವರೆಗೆ ಸೇವಿಸಬೇಕು. ಹೀಗೆ ಮಾಡಿದ್ರೆ ಗರ್ಭಕೋಶದ ಸಮಸ್ಯೆ ನಿವಾರಣೆ ಆಗಲಿದೆ
ಜಂತುಹುಳು ಸಮಸ್ಯೆ ನಿವಾರಣೆ: ಮಕ್ಕಳಿರಲೀ ದೊಡ್ಡವರಿರಲೀ, ಜಂತು ಹುಳುಗಳು ಸಾಮಾನ್ಯ. ಆದರೆ ಅವುಗಳ ಪರಿಹಾರಕ್ಕೆ ಔಷಧಿಯೇ ಆಗಬೇಕೆಂದೇನಿಲ್ಲ. ಮನೆಮದ್ದುಗಳೂ ತುಂಬಾ ಪರಿಣಾಮಕಾರಿ.ಹೀಗಾಗಿ ಜಂತುಗಳಾಗಿದ್ದಲ್ಲಿ ನಂದಿಬಟ್ಟಲು ಎಲೆಗಳ ರಸಕ್ಕೆ ಸ್ವಲ್ಪ ಹಿಂಗುವಿನ ಪುಡಿ ಬೆರೆಸಿ ಸೇವಿಸಬೇಕು. ಇದರಿಂದ ಜಂತುಹುಳಿವಿನ ಸಮಸ್ಯೆ ನಿವಾರಣೆ ಆಗಲಿದೆ