ಮೋದಿಗೆ ಭೂತಾನ್‌ ಅತ್ಯುನ್ನತ ನಾಗರಿಕ ಗೌರವ : ಪ್ರಧಾನಿಯನ್ನು ಹಾಡಿಹೊಗಳಿದ ನೆರೆ ರಾಷ್ಟ್ರ

ಹೈಲೈಟ್ಸ್‌:

  • ಪ್ರಧಾನಿ ಮೋದಿಗೆ ಭೂತಾನ್‌ ಅತ್ಯುನ್ನತ ನಾಗರಿಕ ಗೌರವ
  • ರಾಷ್ಟ್ರೀಯ ದಿನಾಚರಣೆ ವೇಳೆ ಘೋಷಿಸಿದ ನೆರೆ ರಾಷ್ಟ್ರ
  • ಕೋವಿಡ್‌ ನೆರವು ಸ್ಮರಿಸಿದ ಭೂತಾನ್‌ ಪ್ರಧಾನಿ

ಥಿಂಪು: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್‌ ಸರಕಾರವು ಅತ್ಯುನ್ನತ ‘ನ್ಗಡಗ್‌ ಪೆಲ್‌ ಗಿ ಖೋರ್ಲೊ’ (ಆರ್ಡರ್‌ ಆಫ್‌ ದಿ ಡ್ರಕ್‌ ಗ್ಯಾಲ್ಪೊ) ನಾಗರಿಕ ಪುರಸ್ಕಾರವನ್ನು ಘೋಷಿಸಿದೆ. ದೇಶದ 114ನೇ ರಾಷ್ಟ್ರೀಯ ದಿನಾಚರಣೆ ವೇಳೆ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಲಾಗಿದೆ.

ಈ ಕುರಿತು ಭೂತಾನ್‌ ಪ್ರಧಾನಿ ಲೋಟೆ ತ್ಸೆರಿಂಗ್‌ ಅವರು ಟ್ವೀಟ್‌ ಮಾಡಿದ್ದು, ”ಭಾರತದ ಪ್ರಧಾನಿ ಅವರಿಗೆ ನಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುತ್ತಿರುವುದು ಖುಷಿಯ ಸಂಗತಿಯಾಗಿದೆ. ಖಂಡಿತವಾಗಿಯೂ ನೀವು ಪ್ರಶಸ್ತಿಗೆ ಅರ್ಹರಾಗಿದ್ದೀರಿ. ಇತ್ತೀಚಿನ ಹಲವು ವರ್ಷಗಳಲ್ಲಿ ನೀವು ಭೂತಾನ್‌ಗೆ ನೀಡಿದ ಸಹಕಾರ, ಅದರಲ್ಲೂ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಒದಗಿಸಿದ ನೆರವು ಅತ್ಯಮೂಲ್ಯವಾದುದು,” ಎಂದು ತಿಳಿಸಿದ್ದಾರೆ.

”ಭೂತಾನ್‌ನ ಸಮಸ್ತ ನಾಗರಿಕರ ಪರವಾಗಿ ನಿಮಗೆ ಅಭಿನಂದನೆಗಳು. ಪ್ರತಿ ಬಾರಿ ನಿಮ್ಮ ಜತೆ ಮಾತನಾಡುವಾಗ ನೀವು ತೋರುವ ಔದಾರ್ಯ, ನಿಮ್ಮಲ್ಲಿರುವ ಮಾನವೀಯತೆಯು ನಮ್ಮ ಮನ ಮುಟ್ಟಿದೆ. ನಿಮ್ಮನ್ನು ಗೌರವಿಸಲು ನಾವು ಕಾತುರರಾಗಿದ್ದೇವೆ,” ಎಂದೂ ಹೇಳಿದ್ದಾರೆ. ತ್ಸೆರಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಧನ್ಯವಾದ ತಿಳಿಸಿದ್ದು, ”ನಿಮ್ಮ ಪ್ರೀತಿ, ಮಮಕಾರಕ್ಕೆ ನನ್ನ ಹೃದಯ ತುಂಬಿ ಬಂದಿದೆ,” ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಸಿಕ್ಕ ವಿದೇಶಗಳ ಅತ್ಯುನ್ನತ ಗೌರವಗಳು

ದೇಶ ಪ್ರಶಸ್ತಿ ವರ್ಷ

ಸೌದಿ ಅರೇಬಿಯಾ ಆರ್ಡರ್‌ ಆಫ್‌ ಅಬ್ದುಲಜಿಜ್‌ ಅಲ್‌ ಸೌದ್‌ 2016

ಅಫಘಾನಿಸ್ತಾನ ಸ್ಟೇಟ್‌ ಆರ್ಡರ್‌ ಆಫ್‌ ಘಾಜಿ ಆಮೀರ್‌ ಅಮಾನುಲ್ಲಾಖಾನ್‌ 2016

ಪ್ಯಾಲೆಸ್ತೀನ್‌ ಗ್ರ್ಯಾಂಡ್‌ ಕಾಲರ್‌ ಆಫ್‌ ದಿ ಸ್ಟೇಟ್‌ ಆಫ್‌ ಪ್ಯಾಲೆಸ್ತೀನ್‌ ಅರ್ವಾರ್ಡ್‌ 2018

ಯುಎಇ ಆರ್ಡರ್‌ ಆಫ್‌ ಜಯೇದ್‌ ಅವಾರ್ಡ್‌ 2019

ರಷ್ಯಾ ಆರ್ಡರ್‌ ಆಫ್‌ ಸೇಂಟ್‌ ಆಂಡ್ರ್ಯೂ 2019

ಮಾಲ್ಡೀವ್‌್ಸ ಆರ್ಡರ್‌ ಆಫ್‌ ದಿ ಡಿಸ್ಟಿಂಗ್ವಿಷ್‌್ಡ ರೂಲ್‌ ಆಫ್‌ ನಿಶಾನ್‌ ಇಜುದ್ದೀನ್‌ 2019

ಅಮೆರಿಕ ಲಿಜನ್‌ ಆಫ್‌ ಮೆರಿಟ್‌, ಡಿಗ್ರಿ ಚೀಫ್‌ ಕಮಾಂಡರ್‌ 2020

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *