Gold And Silver Price: ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ; ಮತ್ತೆ ಇಳಿಕೆಯಾಯ್ತು ನೋಡಿ ಚಿನ್ನ, ಬೆಳ್ಳಿ ಬೆಲೆ
Gold Rate on Dec 21, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,680 ರೂ. ಇತ್ತು. ಇಂದು 40 ರೂ. ಇಳಿಕೆಯಾಗಿದ್ದು 47,640 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,680 ರೂ. ಇತ್ತು. ಇಂದು 40 ರೂ. ಇಳಿಕೆಯಾಗಿದ್ದು, 48,640 ರೂ. ಆಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?
ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 49,850 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 45,700 ರೂ. ಇದೆ. ಹಾಗೆಯೇ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.
ಭಾರತದಲ್ಲಿ ಹೆಚ್ಚು ಜನಸಂಖ್ಯೆ ಇರುವ ಹಾಗೆ ಆಭರಣ ಪ್ರಿಯರ ಜನಸಂಖ್ಯೆಯೂ ಕಡಿಮೆ ಏನಿಲ್ಲ. ಈ ಹಿನ್ನೆಲೆ ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲೇ ಇದೆ. ಚೆನ್ನೈನಲ್ಲಿ 50,100 ರೂ. ಇದ್ದರೆ, ಮುಂಬೈನಲ್ಲಿ 48,640 ರೂ., ದೆಹಲಿಯಲ್ಲಿ 52,200 ರೂ. ಹಾಗೂ ಕೋಲ್ಕತ್ತದಲ್ಲಿ 50,650 ರೂ. ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಶಿಕ್ನಲ್ಲೂ ಹೆಚ್ಚೂ ಕಡಿಮೆ 50 ಸಾವಿರದ ಆಸುಪಾಸಿನಲ್ಲೇ ಇದೆ.
ಚಿನ್ನದ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸ
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.
ಇಂದಿನ ಬೆಳ್ಳಿ ದರ:
ಬಂಗಾರದ ಬೆಲೆ ದೇಶದಲ್ಲಿ ಇಳಿಕೆಯಾದಂತೆ, ಬೆಳ್ಳಿ ದರ (Silver Rate) ಸಹ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 62,200 ರೂ. ಇತ್ತು. ಇಂದು 300 ರೂ. ಬೆಲೆ ಇಳಿಕೆಯಾಗಿ 61,900 ರೂ. ಆಗಿದೆ. ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 61,900 ರೂ. ಇದ್ದರೆ ಮೈಸೂರು ಹಾಗೂ ಮಂಗಳೂರಿನಲ್ಲಿ 66,000 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 65,960 ರೂ. ಆಗಿದೆ. ಇನ್ನು, ಮುಂಬೈ, ದೆಹಲಿ ಹಾಗೂ ಕೋಲ್ಕತ್ತದಲ್ಲಿ 61,900 ರೂ. ದರ ಇದೆ.
ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಖರೀದಿಸಲು ಯೋಜಿಸುವಾಗ, ಬ್ರ್ಯಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.
ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ
ಕೊರೋನಾ ವೈರಸ್ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.
ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.