ಈ ನಂಬರ್ ನಿಮ್ಮದಾದರೆ ಪೊಲೀಸರು ತಡೆಯುವುದಿಲ್ಲ ನಿಮ್ಮ ವಾಹನ, ಪಡೆಯುವುದು ಹೇಗೆ ತಿಳಿಯಿರಿ

ನವದೆಹಲಿ : ಭಾರತ ಸರ್ಕಾರವು ಈ ಹಿಂದೆ BH ನೋಂದಣಿ ಸಂಖ್ಯೆ ಅಥವಾ ಭಾರತ್ ಸರಣಿಯ (Bharat Series) ಪೈಲೆಟ್ ಪ್ರಾಜೆಕ್ಸ್ ಆರಂಭಿಸಿತ್ತು. ಇದೀಗ ಹೊಸ ವಾಹನಗಳಿಗಾಗಿ ಈ ನಂಬರ್ ಅನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ. ಸಂಸತ್ತಿನಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರ ಈ ಮಾಹಿತಿಯನ್ನು ನೀಡಿದೆ. ಈ ನಂಬರ್ ಪ್ಲೇಟ್‌ನ (Number plate) ಪ್ರಯೋಜನವೆಂದರೆ, ಅದು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿರುವುದಿಲ್ಲ. ಅಂದರೆ ಈ ನಂಬರ್  BH ನೊಂದಿಗೆ ಪ್ರಾರಂಭವಾಗುತ್ತದೆ. ಇದರೊಂದಿಗೆ, ನೀವು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಶಿಫ್ಟ್ ಆಗುವುದಾದರೆ ಗಾಡಿ ನಂಬರ್ ಬದಲಾಯಿಸುವ ಅಗತ್ಯವೂ ಇರುವುದಿಲ್ಲ. ಹೊಸ ವಾಹನಗಳಿಗಾಗಿ ಭಾರತ್ ಸರಣಿಯನ್ನು ಪರಿಚಯಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin gadkari) ಸಂಸತ್ತಿನಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ.

ಇನ್ನು ಮುಂದೆ ನೋಂದಣಿ ಸಂಖ್ಯೆಯನ್ನು ಬದಲಾಯಿಸುವ ಅಗತ್ಯವಿಲ್ಲ:
ಕಳೆದ ವರ್ಷ ಆಗಸ್ಟ್ ನಲ್ಲಿ ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯಡಿಯಲ್ಲಿ, ಸರ್ಕಾರವು ಈ ಬದಲಾವಣೆಯ ಕುರಿತು ಅಧಿಸೂಚನೆಯನ್ನು ಕಳುಹಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin gadkari) ಹೇಳಿದ್ದಾರೆ. BH ಸರಣಿ ನೋಂದಣಿ ಫಲಕದೊಂದಿಗೆ, ದೇಶದಾದ್ಯಂತ ಯಾವುದೇ ರಾಜ್ಯಕ್ಕೆ ಸ್ಥಳಾಂತರಗೊಂಡರೂ,  ನೋಂದಣಿ ಸಂಖ್ಯೆಯನ್ನು ಬದಲಾಯಿಸಬೇಕಾಗಿಲ್ಲ. ವರ್ಗಾವಣೆ ನಿರಂತರವಾಗಿ ನಡೆಯುತ್ತಿರುವ ಜನರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಈ ಸರಣಿಯ ಬಿಡುಗಡೆಯ ನಂತರ, ಯಾವುದೇ ತೊಂದರೆಯಿಲ್ಲದೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರವಾಗುವುದು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ರಕ್ಷಣಾ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರು ಸ್ವಯಂಪ್ರೇರಣೆಯಿಂದ ಬಿಎಚ್ ಸಿರೀಸ್ (BH Series) ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ ಎಂಬುದು ಸಚಿವರ ಹೇಳಿಕೆಯಿಂದ ತಿಳಿದು ಬಂದಿದೆ.

 

ಖಾಸಗಿ ವಲಯಕ್ಕೂ BH ಸರಣಿಯ ನೋಂದಣಿ :
ಸರ್ಕಾರಿ ನೌಕರರನ್ನು ಹೊರತುಪಡಿಸಿ, ಕೇಂದ್ರ ಮತ್ತು ರಾಜ್ಯಗಳ PUCs ಹೊರತುಪಡಿಸಿ, 4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ವಲಯದ ಕಂಪನಿಗಳು, ಆ ಕಂಪನಿಗಳ ಉದ್ಯೋಗಿಗಳಿಗೆ ಅವರ ಖಾಸಗಿ ವಾಹನಗಳಿಗೆ ಬಿಎಚ್ ಸರಣಿ ನೋಂದಣಿಯನ್ನು ನೀಡಲಾಗುತ್ತದೆ. BH ಸರಣಿಯ ಸಂಖ್ಯೆಯನ್ನು ಆಯ್ಕೆಮಾಡುವಾಗ, ನೀವು ಎರಡು ವರ್ಷಗಳವರೆಗೆ ವಾಹನ ತೆರಿಗೆಯನ್ನು (Vehicle tax) ಅಥವಾ ಎರಡು ವರ್ಷಗಳವರೆಗೆ ಪಾವತಿಸಬೇಕಾಗುತ್ತದೆ. 14 ವರ್ಷಗಳು ಪೂರ್ಣಗೊಂಡ ನಂತರ, ಮೋಟಾರು ವಾಹನದ ಮೇಲಿನ ತೆರಿಗೆಯನ್ನು ವಾರ್ಷಿಕವಾಗಿ ವಿಧಿಸಲಾಗುತ್ತದೆ ಮತ್ತು ಅದರ ಮೊತ್ತವನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಕರ್ನಾಟಕ ಸೇರಿದಂತೆ ಇತರ ಹಲವು ರಾಜ್ಯಗಳು ಈಗಾಗಲೇ ಆಯ್ದ ಗುಂಪುಗಳ ವಾಹನ ಮಾಲೀಕರಿಗೆ BH ಸರಣಿಯ ನೋಂದಣಿ ಸಂಖ್ಯೆಗಳನ್ನು ನೀಡುತ್ತಿವೆ. ಆದರೆ, ಪ್ರಸ್ತುತ ಬಿಎಚ್ ಸಿರೀಸ್ ಸಂಖ್ಯೆಗಳನ್ನು ರಾಜ್ಯ ಸರ್ಕಾರಗಳು (state government) ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ನೀಡುತ್ತಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *