Bank Holidays in January 2022: ಜನವರಿ ತಿಂಗಳಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ, ಇಲ್ಲಿದೆ ನೋಡಿ ಲಿಸ್ಟ್..!
ಪ್ರತಿ ತಿಂಗಳು ಬ್ಯಾಂಕ್(Bank)ಗೆ ಇಂತಿಷ್ಟು ರಜಾ ದಿನಗಳೆಂದು(Holiday) ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 – 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್ ಗ್ರಾಹಕರಿಗೆ(Customers) ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲರಿಗೂ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಇನ್ನೂ ಹಲವರು ಬ್ಯಾಂಕ್‌ಗೆ ಹೋಗುತ್ತಾರೆ. ಈ ಹಿನ್ನೆಲೆ ಬ್ಯಾಂಕ್ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು(Banks) ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್ ಶಾಖೆಗಳಿಗೆ(Bank Branches) ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು. ಇದೇ ರೀತಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India)ದ ಹಾಲಿಡೇ ಕ್ಯಾಲೆಂಡರ್ ಪ್ರಕಾರ, 2022ರ ಜನವರಿ ತಿಂಗಳಿನಲ್ಲಿ ಬರೋಬ್ಬರಿ 16 ದಿನಗಳು ಬ್ಯಾಂಕ್ ಬಂದ್ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.
ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಈ 16 ದಿನಗಳ ರಜೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್ ರಜೆ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 16 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.
ಜನವರಿಯಲ್ಲಿ ಬ್ಯಾಂಕ್ ರಜೆ ಇರುವ ದಿನಗಳು ಇಂತಿವೆ
ಜನವರಿ 1- ಹೊಸ ವರ್ಷ (ದೇಶಾದ್ಯಂತ)
ಜನವರಿ 3- ಹೊಸ ವರ್ಷಾಚರಣೆ (ಸಿಕ್ಕಿಂ)
ಜನವರಿ 4-ಲೋಸೂಂಗ್ (ಮಿಜೋರಾಂ)
ಜನವರಿ 11-ಮಿಷನರಿ ದಿನ
ಜನವರಿ 12-ಸ್ವಾಮಿ ವಿವೇಕಾನಂದ ಜಯಂತಿ
ಜನವರಿ 14-ಮಕರ ಸಂಕ್ರಾಂತಿ(ಬಹುತೇಕ ರಾಜ್ಯಗಳಲ್ಲಿ)
ಜನವರಿ 15- ಪೊಂಗಲ್ (ಆಂಧ್ರ ಪ್ರದೇಶ, ಪಾಂಡಿಚೇರಿ, ತಮಿಳುನಾಡು)
ಜನವರಿ 18- ಥೈ ಪೋಸಮ್(ಚೆನ್ನೈ)
ಜನವರಿ 26- ಗಣರಾಜ್ಯೋತ್ಸವ(ದೇಶಾದ್ಯಂತ)
ಜನವರಿ-31-ಮೆ-ದಮ್-ಮೆ-ಫಿ(ಅಸ್ಸಾಂ)
ಈ ಮೇಲ್ಕಂಡ ರಜೆಗಳ ಹೊರತಾಗಿ ಜನವರಿ ತಿಂಗಳ ರಜೆ ಪಟ್ಟಿಯಲ್ಲಿ ಎರಡನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ.
ಜನವರಿ 2- ಭಾನುವಾರ
ಜನವರಿ 8- ಎರಡನೇ ಶನಿವಾರ
ಜನವರಿ 9- ಭಾನುವಾರ
ಜನವರಿ 16- ಭಾನುವಾರ
ಜನವರಿ 22- ನಾಲ್ಕನೇ ಶನಿವಾರ
ಜನವರಿ 23- ಭಾನುವಾರ
ಜನವರಿ 30-ಭಾನುವಾರ
ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್ ಕ್ಲೋಸಿಂಗ್. ಆದರೆ ಇದ್ಯಾವುದು ಸೆಪ್ಟೆಂಬರ್ ತಿಂಗಳಿಗೆ ಅನ್ವಯಿಸುವುದಿಲ್ಲ.
ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.