A.R. Rahman​ ಪುತ್ರಿ ನಿಶ್ಚಿತಾರ್ಥ, ಶೀಘ್ರದಲ್ಲೇ ರಿಯಾಸ್ದೀನ್​ ಶೇಖ್​ ಮೊಹಮ್ಮದ್​​ ​ಜೊತೆ ಖತೀಜಾ ಶಾದಿ!

ಹೊಸ ವರ್ಷ(New Year)ದಲ್ಲಿ ಸಿನಿರಂಗದಿಂದ ಗುಡ್​​ ನ್ಯೂಸ್​ಗಳೇ ಕೇಳಿ ಬರುತ್ತಿದೆ. ಮದುವೆ(Marriage), ನಿಶ್ಚಿತಾರ್ಥ(Engagement) ಸುದ್ದಿಗಳು ಬ್ಯಾಕ್​ ಟು ಬ್ಯಾಕ್​ ಕೇಳಿಬರುತ್ತಿದೆ. ಕಿರುತೆರೆಯ ಖ್ಯಾತ ನಟ ಮೋಹಿತ್​ ರೈನಾ ಅವರು ಗೆಳತಿ ಅದಿತಿ ಜೊತೆ ಹೊಸ ವರ್ಷಕ್ಕೆ ಮದುವೆಯಾಗಿದ್ದರು. ಇದೀಗ ಮತ್ತೊಬ್ಬ ಸೆಲೆಬ್ರಿಟಿಯ ಮಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಎ.ಆರ್​,ರೆಹಮಾನ್​(A.R. Rahman​) ಪುತ್ರಿ ಖತೀಜಾ ರೆಹಮಾನ್​(Khatija Rahman) ಅವರನ್ನು ರಿಯಾಸ್ತೀನ್​ ಶೇಖ್​ ಮೊಹಮ್ಮದ್​ ಅವರು ಮದುವೆ ಆಗಲಿದ್ದಾರೆ. ಎ.ಆರ್​.ರೆಹಮಾನ್​ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳ ಪೈಕಿ ಹಿರಿಯ ಪುತ್ರಿ ಖತೀಜಾ ರೆಹಮಾನ್​. ಡಿ.29ರಂದು ಖತೀಜಾ ರೆಹಮಾನ್​ ಮತ್ತು ಯಾಸ್ದೀನ್​ ಶೇಖ್​ ಮೊಹಮ್ಮದ್​ ನಿಶ್ಚಿತಾರ್ಥ ನಡೆದಿದೆ. ಎಂಗೇಜ್​ಮೆಂಟ್​ (Engagement) ಬಳಿಕ ಈ ವಿಷಯವನ್ನು ಸೋಶಿಯಲ್​ ಮೀಡಿಯಾ ಮೂಲಕ ಖತೀಜಾ ಅವರು ಹಂಚಿಕೊಂಡಿದ್ದಾರೆ.ಸಿನಿಮಾರಂಗದ ಸ್ನೇಹಿತರು, ಹಿತೈಷಿಗಳು ಭಾವಿ ಜೋಡಿಗೆ ಶುಭ ಕೋರಿದ್ದಾರೆ. ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರು ಓರ್ವ ಉದ್ಯಮಿ ಮತ್ತು ಆಡಿಯೋ ಇಂಜಿನಿಯರ್​ ಆಗಿದ್ದಾರೆ.

ಖತೀಜಾ ಹುಟ್ಟುಹಬ್ಬದಂದೇ  ನಿಶ್ಚಿತಾರ್ಥ!

ಡಿ.29ರಂದು ಖತೀಜಾ ರೆಹಮಾನ್​ ಮತ್ತು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ನಿಶ್ಚಿತಾರ್ಥ ನಡೆದಿದೆ. ‘ದೇವರ ಆಶೀರ್ವಾದದಿಂದ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಜೊತೆ ನನ್ನ ನಿಶ್ಚಿತಾರ್ಥ ನೆರವೇರಿತು ಅಂತ ತಿಳಿಸಲು ಖುಷಿ ಆಗುತ್ತಿದೆ. ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರು ಓರ್ವ ಉದ್ಯಮಿ ಮತ್ತು ಆಡಿಯೋ ಇಂಜಿನಿಯರ್​ ಆಗಿದ್ದಾರೆ. ನನ್ನ ಹುಟ್ಟುಹಬ್ಬದ ದಿನವೇ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು’ ಎಂದು ಖತೀಜಾ ರೆಹಮಾನ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಸಮೇತ ಪೋಸ್ಟ್​ ಮಾಡಿದ್ದಾರೆ.

ತಂದೆಯ ಹಾದಿಯಲ್ಲಿ ಸಾಗುತ್ತಿರುವ ಖತೀಜಾ!

ಎ.ಆರ್​. ರೆಹಮಾನ್ ಅವರ​ ಅಭಿಮಾನಿಗಳು ಕೂಡ ಖತೀಯಾ ಮತ್ತು ರಿಯಾಸ್ದೀನ್​ ಶೇಖ್​ ಮೊಹಮ್ಮದ್ ಜೋಡಿಗೆ ಶುಭ ಹಾರೈಸುತ್ತಿದ್ದಾರೆತಂದೆ ಎ.ಆರ್​​.ರೆಹಮಾನ್​ ದಾರಿಯಲ್ಲೇ ಖತೀಜಾ ಸಾಗುತ್ತಿದ್ದಾರೆ. ತಂದೆಯಂತೆ ಖತೀಜಾ ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಗಾಯಕಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ‘ಮಿಮಿ’ ಸಿನಿಮಾದಲ್ಲಿ ಅವರೊಂದು ಗೀತೆ ಹಾಡಿದ್ದರು. ತಮಿಳು ಸಿನಿಮಾಗಳ ಅನೇಕ ಗೀತೆಗಳಿಗೆ ಖತೀಜಾ ಧ್ವನಿ ನೀಡಿದ್ದಾರೆ. ಭವಿಷ್ಯದಲ್ಲಿ ಅಪ್ಪನ ಹಾಗೇ ಒಳ್ಳೆಯ ಸಿಂಗರ್​ ಆಗಬೇಕು ಎಂದು ಯಾವಾಗಲು ಖತೀಜಾ ಹೇಳುತ್ತಿರುತ್ತಾರೆ.

ರೋಜಾದಿಂದ ಪಯಣ ಆರಂಭಿಸಿದ್ದ ರೆಹಮಾನ್​!

ಎ.ಆರ್.ರೆಹಮಾನ್ ಎಂದೇ ಖ್ಯಾತಿಯಾಗಿರುವ ಅಲ್ಲಾರಕ್ಕ ರೆಹಮಾನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ,ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ರೆಹಮಾನ್ ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ. 1992 ರಲ್ಲಿ ತಮಿಳಿನ `ರೋಜಾ’ ಚಿತ್ರದಿಂದ ಸಂಗೀತ ಪಯಣ ಆರಂಭಿಸಿದರು.

ಜನವರಿ 6ಕ್ಕೆ ರೆಹಮಾನ್​ ಹುಟ್ಟಹಬ್ಬ!

ಜನವರಿ 3ರಂದು ಸಂಗೀತ ಮಾಂತ್ರಿಕ ಎ.ಆರ್​.ರೆಹಮಾನ್​ ಅವರ ಹುಟ್ಟಹಬ್ಬ. ಪ್ರತಿವರ್ಷ ಸರಳವಾಗಿ ತಮ್ಮ ಜನ್ಮ ದಿನವನ್ನು ಎ.ಆರ್​.ರೆಹಮಾನ್​ ಆಚರಿಸುತ್ತಾರೆ. ಈ ಬಾರಿಯೂ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *