Kiccha Sudeep: ವಿಕ್ರಾಂತ್​ ರೋಣ ಬಳಿಕ `ನಮಸ್ತೆ ಗೋಷ್ಟ್​’​ ಅಂತಿದ್ದಾರೆ ಕಿಚ್ಚ: ಏನಿದು ಹಾರರ್​ ಪೋಸ್ಟರ್​ ಮರ್ಮ?

ಕಿಚ್ಚ ಸುದೀಪ್(Kiccha Sudeep)​.. ಅಭಿನಯ ಚಕ್ರವರ್ತಿ… ಯಾವುದೇ ಪಾತ್ರ ಕೊಟ್ಟರು ಸಲೀಸಾಗಿ ನಿಭಾಯಿಸುವ ಆರು ಅಡಿ ಕಟೌಟ್​.. ಕಿಚ್ಚ ಸುದೀಪ್​ ಅವರ ಬಗ್ಗೆ ಹೇಳಿ ಪರಿಚಯ ಮಾಡಿಸುವ ಅಗತ್ಯ ಇಲ್ಲ. ಸುದೀಪ್​ ಅವರ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಿದೆ. ಕನ್ನಡ(Kannada)ದ ಟಾಪ್​ ಹೀರೋ(Top Hero) ಕಿಚ್ಚ ಸುದೀಪ್​ ಅವರ ಮುಂದಿನ ಸಿನಿಮಾದ ಬಗ್ಗೆ ಅಪ್​ಡೇಟ್​ ಸಿಕ್ಕಿದೆ. ಸುದೀಪ್ ಅವರು ಅಭಿನಯದ ‘ವಿಕ್ರಾಂತ್ ರೋಣ'(Vikranth Rona) ಚಿತ್ರ ಇನ್ನು ರಿಲೀಸ್ ಆಗಿಲ್ಲ ಅದಾಗಲೇ, ಮುಂದಿನ ಎರಡು ಚಿತ್ರಗಳ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ವಿಕ್ರಾಂತ್​ ರೋಣ ಪ್ಯಾನ್​ ಇಂಡಿಯಾ(Pan India) ಸಿನಿಮಾ ಎಂದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೆ ಕಿಚ್ಚ ಸುದೀಪ್​ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿದ ಕಿಚ್ಚನ ಅಭಿಮಾನಿಗಳು ಸಖತ್​ ಖುಷಿ ಪಟ್ಟಿದ್ದಾರೆ. ಅಷ್ಟಕ್ಕೂ ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ ನಿಜನಾ?ಸುದೀಪ್​ ಅವರ ಮುಂದಿ ಸಿನಿಮಾದ ಟೈಟಲ್​(Title) ಏನು? ನಿರ್ದೇಶಕ ಯಾರು? ನಿರ್ಮಾಪಕ ಯಾರು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತೆ. ಅದಕ್ಕೆಲ್ಲ ಉತ್ತರ ನಾವು ಕೊಡುತ್ತೇವೆ ಮುಂದೆ ನೋಡಿ..

‘ನಮಸ್ತೆ ಗೋಷ್ಟ್​​’​ ಅಂತಿದ್ದಾರೆ ಕಿಚ್ಚ ಸುದೀಪ್!

ತಮಿಳು ನಿರ್ದೇಶಕನ‌ ಜೊತೆಗೆ ಜೊತೆಗೆ ಮುಂದಿನ ಚಿತ್ರ ಮಾಡುವುದಾಗಿ ನಟ ಸುದೀಪ್ ಅವರೇ ಈಗಾಗಲೇ ಖಚಿತ ಪಡಿಸಿದ್ದಾರೆ. ತಮಿಳು ನಿರ್ದೇಶಕ ನಿರ್ಮಾಪಕ ವೆಂಕಟ್ ಪ್ರಭು ಕಿಚ್ಚನಿಗೆ ಕಥೆ ರೆಡಿ ಮಾಡಿ ನಿರ್ದೇಶನಕ್ಕೆ ಮುಂದಾಗಿದ್ದಾರೆ.  ಈಗ ಮತ್ತೊಬ್ಬ ನಿರ್ದೇಶಕನ ಹೆಸರು ಕೇಳಿ ಬಂದಿದೆ. ಪ್ರಭಾಸ್‌ಗೆ ‘ಸಾಹೋ’ ಚಿತ್ರ ಮಾಡಿದ್ದ ನಿರ್ದೇಶಕ ಸುಜಿತ್, ಸುದೀಪ್‌ಗೆ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸುಜಿತ್ ಈ ಹಿಂದೆ ಕಿಚ್ಚನನ್ನು ಭೇಟಿ ಮಾಡಿದ್ದು, ಈಗ ಯಾಕೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಸುದ್ದಿ ಬಗ್ಗೆ ಸುದೀಪ್​, ಚಿತ್ರತಂಡ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಖತ್​ ವೈರಲ್​ ಆಗುತ್ತಿದೆ.

‘ನಮಸ್ತೆ ಗೋಷ್ಟ್​’ ಪೋಸ್ಟರ್​ ಸಖತ್​ ವೈರಲ್​!

ನಟ ಸುದೀಪ್ ಮತ್ತು ಸುಜಿತ್ ಕಾಂಬಿನೇಷನ್‌ನಲ್ಲಿ, ವಿಭಿನ್ನವಾದ ಕಥೆ ಬರಲಿದೆ. ಈ ಕುರಿತಾಗಿ ಹೊಸ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್ ಆಗಿದೆ. ಸುದೀಪ್ ಕೈಯಲ್ಲಿ ಮೇಣದ ಬತ್ತಿ ಹಿಡಿದಿದ್ದಾರೆ. ಚಿತ್ರಕ್ಕೆ ‘ನಮಸ್ತೆ ಗೋಷ್ಟ್’ ಎನ್ನುವ ಟೈಟಲ್ ಇದೆ. ‘ಡೋಂಟ್ ಸ್ಟಾಪ್ ದಿ ಗೇಮ್’ ಎನ್ನುವ ಟ್ಯಾಗ್ ಲೈನ್ ಇದೆ. ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಇದು ನಿಜಕ್ಕೂ ಸುದೀಪ್​ ಅವರ ಮುಂದಿನ ಸಿನಿಮಾ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ವೆಂಟಕ್ ಪ್ರಭು ನಿರ್ದೇಶನದ ಬಳಿಕ ಸುದೀಪ್ ಈ ಹಾರರ್ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆ ಎನ್ನುತ್ತಿವೆ ಮೂಲಗಳು.

ಇದೊಂದು ಫೇಕ್​ ಪೊಸ್ಟರ್​ ಅಂತಿದ್ದಾರೆ!

ಆದರೆ, ಈ ಪೋಸ್ಟರ್ ಅಧಿಕೃತ ಅಲ್ಲ. ಇದು ಅಭಿಮಾನಿಗಳು ತಯಾರಿಸಿದ ಪೋಸ್ಟರ್ ಎನ್ನಲಾಗಿದೆ. ಜೊತೆಗೆ ‘ನಮಸ್ತೆ ಗೋಷ್ಟ್’ ಎನ್ನುವ ಈ ಟೈಟಲ್ ಕೂಡಾ ಫೇಕ್ ಎನ್ನಲಾಗುತ್ತಿದೆ. ಇನ್ನು ಸುದೀಪ್ ಅವರ ‘ವಿಕ್ರಾಂತ್ ರೋಣ’ ಚಿತ್ರ ಕೂಡ ವಿಭಿನ್ನ ಎನಿಸುತ್ತದೆ. ಚಿತ್ರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಇರುವುದನ್ನು ಈಗಾಗಲೇ ಟೀಸರ್ ಮೂಲಕ ಚಿತ್ರ ತಂಡ ರಿವೀಲ್ ಮಾಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *