Morning Digest: ಕಡಿಮೆಯಾದ ಚಿನ್ನದ ಬೆಲೆ, 16 ಜಿಲ್ಲೆಗಳಲ್ಲಿ ಪೆಟ್ರೋಲ್ ದರವೂ ಇಳಿಕೆ; ಬೆಳಗಿನ ಟಾಪ್ ನ್ಯೂಸ್ಗಳು
1.Gold Price Today: ಬೆಂಗಳೂರಿನಲ್ಲಿ ಇಳಿಕೆಯಾದ ಚಿನ್ನದ ಬೆಲೆ, ಆಭರಣ ಕೊಳ್ಳಲು ಇದೇ ಬೆಸ್ಟ್ ಟೈಂ
Gold Rate on Jan 4, 2022: ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಇಳಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,160 ರೂ. ಇತ್ತು. ಇಂದು 90 ರೂ. ಏರಿಕೆಯಾಗಿದ್ದು 47,250 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,160 ರೂ. ಇತ್ತು. ಇಂದು 90 ರೂ. ಹೆಚ್ಚಳವಾಗಿದ್ದು, 49,250 ರೂ. ಆಗಿದೆ.
2.Petrol And Diesel Price Today: ಇಂದು 16 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ: ಟ್ಯಾಂಕ್ ಫುಲ್ ಮಾಡಿಸಬೇಕಾ? ಇಲ್ಲಿದೆ ಇವತ್ತಿನ ದರ
Petrol And Diesel Price Today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
3.Karnataka Weather Report: ಚಳಿ ಜೊತೆ ದಟ್ಟವಾದ ಮಂಜು: ಉ.ಕರ್ನಾಟಕದಲ್ಲಿ ಮಲೆನಾಡಿನ ದೃಶ್ಯ
Karnataka Weather Today: ಉತ್ತರ ಭಾರತದಲ್ಲಿ (North India)ವಿಪರೀತ ಚಳಿಗೆ (Winter) ಜನರು ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣಬಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಚಳಿಯ ಪ್ರಮಾಣ ಮತ್ತೆ ಏರಿಕೆಯಾಗತೊಡಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru Weather) ದಟ್ಟವಾದ ಮಂಜು ಜೊತೆ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗುತ್ತಿದೆ. ಮತ್ತೊಂದು ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗುವ ಸಾಧ್ಯತೆಗಳಿವೆ. ಇನ್ನು ಉತ್ತರ ಕರ್ನಾಟಕದ ಬಿಸಿಲು ನಾಡು ಜಿಲ್ಲೆಗಳಲ್ಲಿ ಮಲೆನಾಡಿನ ದೃಶ್ಯಗಳು ಕಾಣ ಸಿಗುತ್ತಿವೆ, ಮತ್ತೊಂದಡೆ ದಟ್ಟವಾದ ಮಂಜು ಬೆಳೆಗೆ (Crop) ಹಾನಿ ಮಾಡುವ ಆತಂಕ ರೈತರನ್ನು ಕಾಡುತ್ತಿದೆ.ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
4.Belagavi To Dharwad ನೇರ ರೈಲ್ವೆ ಮಾರ್ಗ: ಭೂ ಸ್ವಾಧೀನಕ್ಕೆ ರೈತರ ವಿರೋಧ
ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆ ರೈಲು ಯೋಜನೆಗೆ (North Karnataka Raliway Project) ವಿರೋಧ ವ್ಯಕ್ತವಾಗಿದೆ. ಬೆಳಗಾವಿ To ಧಾರವಾಡ (Belagavi To Dharwad) ನೇರ ರೈಲು ಯೋಜನೆ ಮಾರ್ಗ ಬದಲಾವಣೆ ರೈತರು (Farmers) ಆಗ್ರಹಿಸುತ್ತಿದ್ದಾರೆ. ಅಭಿವೃದ್ಧಿ ಗೆ ನಮ್ಮ ವಿರೋಧವಿಲ್ಲ ಹಾಗಂತ ಫಲವತ್ತಾದ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ದಿವಂಗತ ಸುರೇಶ್ ಅಂಗಡಿ (Suresh Angadi) ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದಾಗ ಉತ್ತರ ಕರ್ನಾಟಕ ಜನತೆಯ ಮಹತ್ವಾಕಾಂಕ್ಷೆಯ ಬೆಳಗಾವಿಯಿಂದ ಧಾರವಾಡ ನೇರ ರೈಲು ಮಾರ್ಗ ಯೋಜನೆಗೆ ಮಂಜೂರು ಮಾಡಿದ್ದರು. ಈಗ ಈ ನೇರ ರೈಲು ಯೋಜನೆ ಮಾರ್ಗಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ.