Kireeti Reddy: ಬಣ್ಣದ ಲೋಕಕ್ಕೆ ಜನಾರ್ದನ ರೆಡ್ಡಿ ಮಗನ ಎಂಟ್ರಿ: ಶೀಘ್ರವೇ ಹೀರೋ ಆಗಿ ಬರ್ತಾರೆ ಕಿರೀಟಿ ರೆಡ್ಡಿ!
ರಾಜಕೀಯ(Politics)ಕ್ಕೂ, ಸಿನಿಮಾರಂಗ(Cinema Industry)ಕ್ಕೂ ದೋಸ್ತಿ ನಂಟು. ಚಿತ್ರರಂಗದ ಅನೇಕರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ರಾಜಕಾರಣಿಗಳ ಮಕ್ಕಳು(Politicians son) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ರೂಲ್ ಮಾಡಿರವುದನ್ನು ನೋಡಿದ್ದೇವೆ. ಅನೇಕ ರಾಜಕಾರಣಿಗಳ ಮಕ್ಕಳು ಸಿನಿಮಾರಂಗದಲ್ಲಿ ಇದ್ದಾರೆ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ(Nikhil Kumarswamy), ಚೆಲುವರಾಯ ಸ್ವಾಮಿ ಮಗ ಸಚಿನ್, ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಸೇರಿದಂತೆ ಸಾಕಷ್ಟು ರಾಜಕಾರಣಿಗಳ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅನೇಕ ರಾಜಕಾರಣಿಗಳ ಮಕ್ಕಳು ಸ್ಯಾಂಡಲ್ವುಡ್(Sandalwood)ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇದೀಗ ಇವರ ಸಾಲಿಗೆ ಮತ್ತೊಬ್ಬ ರಾಜಕಾರಣಿ ಮಗ ಸೇಪರ್ಡೆಯಾಗಿದ್ದಾರೆ. ಹೌದು, ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy)ಮಗ ಕಿರೀಟಿ ರೆಡ್ಡಿ(Kireeti Reddy) ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಹೀರೋ ಆಗಿ ಚಿತ್ರರಂಗದಲ್ಲಿ ನಿಲ್ಲುವ ಕಾತುರದಲ್ಲಿದ್ದಾರೆ. ಇದೀಗಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಶೀಘ್ರವೇ ಅವರು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಮಗಳ ಮದುವೆಯನ್ನೇ ಬಹಳ ವಿಜೃಂಭಣೆಯಿಂದ ಜನಾರ್ಧನ ರೆಡ್ಡಿ ಮಾಡಿದ್ದರು. ಇನ್ನೂ ಮಗನನ್ನು ಹೇಗೆ ಲಾಂಚ್(Launch) ಮಾಡಬೇಡ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಯಾರು? ನಿರ್ಮಾಣ ಯಾರದ್ದು? ಇಲ್ಲಿದೆ ನೋಡಿ..
ಸಖತ್ ಗ್ರ್ಯಾಂಡ್ ಆಗಿ ಲಾಂಚ್ ಆಗ್ತಾರೆ ಕಿರೀಟಿ ರೆಡ್ಡಿ!
ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಹಿಂದಿನಿಂದಲೂ ಕೇಳಿಬರುತ್ತಿತ್ತು. ಆದರೆ, ಯಾವ ವಿಚಾರವೂ ಅಧಿಕೃತ ಆಗಿರಲಿಲ್ಲ. ಆದರೆ, ಈಗ ಕಿರೀಟಿ ರೆಡ್ಡಿ ಲಾಂಚ್ ಮಾಡೋಕೆ ವೇದಿಕೆ ರೆಡಿ ಆಗಿದೆ ಎನ್ನಲಾಗಿದೆ. ಎಲ್ಲವೂ ಅಂತಿಮ ಹಂತದಲ್ಲಿದ್ದು, ಅಧಿಕೃತ ಘೋಷಣೆ ಒಂದೇ ಬಾಕಿ ಇದೆ. ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿದ್ಧವಾದ ‘ಮಾಯಾ ಬಜಾರ್ 2016’ ಚಿತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದರು. ಈಗ ಇದೇ ರಾಧಾಕೃಷ್ಣ ಅವರು ಕಿರೀಟಿ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಈಗ’ ಸಿನಿಮಾ ನಿರ್ಮಾಣ ಮಾಡಿದ್ದ ಸಾಯಿ ಕೋರ್ರಾಪಾಟಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಹೌದು, ಜನಾರ್ಧನ ರೆಡ್ಡಿ
ಸಕಲ ಸಿದ್ಧತೆ ಮಾಡಿಕೊಂಡಿರುವ ಕಿರೀಟಿ ರೆಡ್ಡಿ!
ಜನಾರ್ದನ ರೆಡ್ಡಿ ಚಿತ್ರರಂಗದ ಹಲವಾರು ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಇದೀಗ ಮಗನಿಗೆ ಸಕಲ ತಯಾರಿಗಳನ್ನು ನೀಡಿ, ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಯುಕೆಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ನಟನೆಗೆ ಸಂಬಂಧಿಸಿದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸಾಹಸಕ್ಕೆ ಸಂಬಂಧಪಟ್ಟಂತೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ಕಿರೀಟಿ ರೆಡ್ಡಿ ಪಡೆದುಕೊಂಡಿದ್ದಾರೆ. ಸ್ವಂತವಾಗಿ ಸ್ಟಂಟ್ಸ್‌ಗಳನ್ನು ಮಾಡುವಷ್ಟರ ಮಟ್ಟಿಗೆ ಸಿದ್ಧಗೊಂಡಿದ್ದಾರಂತೆ ಕಿರೀಟಿ. ಪ್ರತಿದಿನ ಜಿಮ್‌ಗೆ ಹೋಗಿ ಬೆವರಿಳಿಸುವ ಅವರು, ಡ್ಯಾನ್ಸ್ ಅಭ್ಯಾಸ ಕೂಡ ಮಾಡುತ್ತಿದ್ದಾರೆ.
ಕನ್ನಡ, ತೆಲುಗು ಭಾಷೆಯಲ್ಲಿ ಬರಲಿದೆ ಸಿನಿಮಾ!
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಕಿರೀಟಿ ರೆಡ್ಡಿ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯದಲ್ಲೇ ಕಿರೀಟಿ ರೆಡ್ಡಿ ಫೋಟೋಶೂಟ್ ಮಾಡಿಸಿ, ಅದ್ಧೂರಿಯಾಗಿ ಲಾಂಚ್ ಮಾಡುಲು ನಿರ್ದೇಶಕ ರಾಧಕೃಷ್ಣ ಮತ್ತು ತಂಡ ಸಜ್ಜಾಗಿದೆ. ಸದ್ಯದಲ್ಲೇ ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಸಿನಿಮಾದ ಮತ್ತಷ್ಟು ಹೊಸ ಅಪ್ಡೇಟ್ಸ್ ಕೊಡ್ತಿನಿ ಅಂತಾ ನಿರ್ದೇಶಕ ರಾಧಕೃಷ್ಣ ತಿಳಿಸಿದ್ದಾರೆ.