ಮೇಕೆದಾಟು ಹೋರಾಟ ಹತ್ತಿಕ್ಕಲು ಮುಂದಾಯಿತೇ ಸರ್ಕಾರ?; ಕನಕಪುರಕ್ಕೆ ಪ್ರತ್ಯೇಕ ಆದೇಶ ಪ್ರಕಟ!

ಕನಕಪುರ: ಯಾರು ಏನೇ ಅಂದರೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಿಗದಿಯಂತೆ ಕಾರ್ಯಕ್ರಮ ನಡೆಯೋದು ಖಂಡಿತಾ ಅಂತಾನೂ ಹೇಳಿದ್ದಾರೆ. ಈ ಮಧ್ಯೆ ಕನಕಪುರ ಕ್ಷೇತ್ರಕ್ಕೆ ಮಾತ್ರ ಪ್ರತ್ಯೇಕ ಕೋವಿಡ್‌ ನಿಯಮ ಆದೇಶ ಹೊರಡಿಸಿರುವ ಸರ್ಕಾರದ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯ ಕಾಂಗ್ರೆಸ್ ಘಟಕ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮ ಜನವರಿ 9ರಂದು ರಾಮನಗರ ಜಿಲ್ಲೆಯಲ್ಲಿ ಆರಂಭಗೊಂಡು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 19ರಂದು ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದ ಮೊದಲ ಆರು ದಿನ ರಾಮನಗರ ಜಿಲ್ಲೆಯ ವಿವಿಧೆಡೆಗಳಲ್ಲಿ ಪಾದಯಾತ್ರೆ ನಡೆಯಲಿದ್ದು, ಬಳಿಕ ಕೆಂಗೇರಿ ದಾಟಿ 19ರಂದು ಬಸವನಗುಡಿಯಲ್ಲಿ ಸಮಾರೋಪಗೊಳ್ಳಲಿದೆ. ಕಾಂಗ್ರೆಸ್‌ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಹತ್ತಿಕ್ಕಲೆಂದೇ ಸರ್ಕಾರ ಕೋವಿಡ್‌ ನಿಯಮಗಳನ್ನು ಬಿಗಿಗೊಳಿಸಿದೆ ಎಂಬ ಆರೋಪವೂ ಇದ್ದು, ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತವರು ಕ್ಷೇತ್ರವಾಗಿರುವ ಕನಕಪುರದಲ್ಲಿ ಪ್ರತ್ಯೇಕ ಕೋವಿಡ್‌ ನಿಯಮಗಳನ್ನು ಅಳವಡಿಸಿರೋದು ಈ ಆರೋಪಕ್ಕೆ ಮತ್ತಷ್ಟು ಇಂಬು ನೀಡಿದೆ.

ಕನಕಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಮೇಕೆದಾಟು ಬರುವ ಕಾರಣ ಅಲ್ಲಿಂದಲೇ ಕಾಂಗ್ರೆಸ್‌ ಪಾದಯಾತ್ರೆಗೆ ಮುಂದಾಗಿದ್ದು, ಈ ಹಿನ್ನೆಲೆ ಕನಕಪುರಕ್ಕೆ ಹೊರಡಿಸಿರುವ ಪ್ರತ್ಯೇಕ ಆದೇಶದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ಗಂಟೆ ವರೆಗೆ ಬಾರ್, ಪಬ್, ಹೋಟೆಲ್, ರೆಸ್ಟೋರೆಂಟ್, ಹಾಗೂ ರೆಸಾರ್ಟ್‌ಗಳನ್ನು ಮುಚ್ಚಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಅಲ್ಲದೇ ಈ ಬಗ್ಗೆ ನಿರ್ಲಕ್ಷ್ಯತನ ಮತ್ತು ಬೇಜವಬ್ದಾರಿತನ ತೋರಿಸಬಾರದು. ಈ ಬಗ್ಗೆ ನಿಯಮ ಪಾಲನೆ ಆಗದಿದ್ದರೆ ಅಲ್ಲಿನ ಪೊಲೀಸ್ ಸಿಬ್ಬಂದಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಹೀಗಾಗಿ ಅಲ್ಲಿನ ಎಸ್‌ಐ ಖುದ್ದು ಎಲ್ಲವನ್ನೂ ಮುಚ್ಚಿಸುವಂತೆ ಆದೇಶದಲ್ಲಿ ಹೇಳಲಾಗಿದೆ..

ಕನಕಪುರ ಪಿಎಸ್ಐಗೆ ನೀಡಿರುವ ಮತ್ತೊಂದು ನೋಟಿಸ್!

ಕನಕಪುರ ಪಿಎಸ್ಐಗೆ ನೀಡಿರುವ ಮತ್ತೊಂದು ನೋಟಿಸ್!

ಕನಕಪುರ ಪಿಎಸ್ಐಗೆ ಮತ್ತೊಂದು ನೋಟಿಸ್!
ಈ ಮಧ್ಯೆ ಕನಕಪುರ ಪಿಎಸ್‌ಐಗೆ ಮತ್ತೊಂದು ನೋಟಿಸ್‌ ಜಾರಿ ಮಾಡಲಾಗಿದ್ದು, ವೀಕೆಂಡ್ ಕರ್ಫ್ಯೂ ಪಾಲನೆ ಮಾಡದೆ ಇದ್ರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ಗಂಟೆವರೆಗೆ ಖುದ್ದು ಪಿಎಸ್‌ಐ ಅವರೇ ಮುಂದೆ ನಿಂತು ಎಲ್ಲವನ್ನೂ ಬಂದ್ ಮಾಡಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿ ಬಂದ್ ಮಾಡದೇ ಇದ್ದರೆ ನಿಮ್ಮನ್ನೇ ಹೊಣೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಅಲ್ಲದೇ ‘ವಿಷಯ ಅತಿ ಜರೂರು ಮತ್ತು ಗಂಭೀರ’ ಎಂದೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ ಈ ನೋಟಿಸ್‌ನಿಂದ ಕನಕಪುರ ಟೌನ್ ಪಿಎಸ್ಐ ಇಕ್ಕಟ್ಟಿಗೆ ಸಿಲುಕಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *