ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ : ಸಚಿವ ಮುನಿರತ್ನ

ಹೈಲೈಟ್ಸ್‌:

  • ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಬಿಜೆಪಿ ಸಚಿವರ ವಾಗ್ಧಾಳಿ
  • ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ
  • ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವ ಮುನಿರತ್ನ

ಕೋಲಾರ : ಕೊರೊನಾ ಹೆಚ್ಚಾಗುತ್ತಿರುವುದರಿಂದ ಅನಿವಾರ್ಯವಾಗಿ ಕೆಲ ಕಠಿಣ ನಿಯಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಇದೆ , ಕೊರೊನಾವನ್ನು ನಿಯಂತ್ರಣ ತರುವ ಸಲುವಾಗಿ ಸೆಮಿ ಲಾಕ್ ಡೌನ್ ನ್ನು ಜಾರಿಗೆ ತರಲಾಗಿದೆ. ಜನರ ಉಳಿವಿಕೆಗಾಗಿ ಇದು ಅನಿವಾರ್ಯವಾಗಿದೆ, ಕಳೆದ ಎರಡು ಅಲೆಗಳನ್ನು ಸರ್ಕಾರ ಯಶಸ್ವಿಯಾಗಿ ಎದುರಿಸಿದ ಹಾಗೆ ಮೂರನೆ ಅಲೆಯನ್ನು ಎದರಿಸಲು ನಮ್ಮ ಸರ್ಕಾರ ಸಮರ್ಥವಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮುನಿರತ್ನ, ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೆಚ್ಚುತ್ತಿರುವುದರಿಂದ ಲಾಕ್ ಡೌನ್ , ಕರ್ಪ್ಯೂ ಅಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೊರೊನಾ ಮೂರನೇ ಅಲೆಯನ್ನು ಎದುರಿಸಲು ನಮ್ಮ ಸರ್ಕಾರ ಸಮರ್ಥವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ಆಗಿದೆ. ಇದರಿಂದ ಅವರಿಗೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಗುಡುಗಿದ್ದಾರೆ .

ಕಾಂಗ್ರೆಸ್ ನವರಿಗೆ ಮಾಡಲು ಯಾವುದೇ ಕೆಲಸ ಇರಲಿಲ್ಲ ಅದಕ್ಕಾಗಿ ಮುಂದಿನ ಚುಣಾವಣೆಯಲ್ಲಿ ಜನರ ಗಮನ ಸೆಳೆಯಬೇಕು ಎಂದು ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ. ಇನ್ನು ಮೇಕೆದಾಟು ವಿಚಾರ ಇಂದಿನದಲ್ಲ ಬಹಳ ವರ್ಷಗಳಿಂದ ಇದರ ಚರ್ಚೆ ನಡೆಯುತ್ತಲೇ ಇದೆ. ಆದರೆ ಕಾಂಗ್ರೆಸ್ ಗೆ ಬೇರೆ ವಿಷಯ ಸಿಗದೆ ಈ ರೀತಿಯ ಪ್ರಚಾರ ಪಡೆಯಲು ಮುಂದಾಗಿದ್ದಾರೆ.

ಆದರೆ ಇದು ಫಲಕಾರಿಯಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಇದೆ ವೇಳೆ ಅವರು ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಸೇರಿ ಎಲ್ಲ್ ನಾಯಕರು ಹೇಳುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *