Chiranjeevi Sarja: ಅಣ್ಣನ ಕೊನೆ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ: ಶೀಘ್ರವೇ ತೆರೆಗೆ ಬರಲಿದೆ ‘ರಾಜಮಾರ್ತಾಂಡ’!

ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಕಳೆದುಕೊಂಡು ಇಡೀ ಕರುನಾಡು ಕಣ್ಣೀರಿಟ್ಟಿದ್ದು, ಯುವ ನಟ ಬಾಳಿ ಬದುಕಬೇಕಾಗಿದ್ದ ಚಿರು ಹೇಳದೇ ಕೇಳದೇ ಪರ ಲೋಕಕ್ಕೆ ಹೊರಟುಬಿಟ್ಟರು. ಹೃದಯಾಘಾತ(Heart Attack)ದಿಂದ ನಿಧನರಾಗುವುದಕ್ಕೂ ಮುನ್ನ ಚಿರು ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆ ಪೈಕಿ ‘ರಾಜಮರ್ತಾಂಡ’(Rajamarthanda) ಸಿನಿಮಾ ಶೂಟಿಂಗ್​ ಮುಗಿದಿತ್ತು. ಉಳಿದ ಕೆಲಸಗಳು ಬಾಕಿ ಇತ್ತು. ಅಷ್ಟರಲ್ಲಿ ಚಿರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು.  ಈ ಸಿನಿಮಾ ಟೀಸರ್​ ಮೂಲಕ ಭಾರಿ ಹೈಪ್​(Hype) ಕೂಡ ಸೃಷ್ಟಿ ಮಾಡಿತ್ತು. ಆದರೆ ಆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುಕ್ಕೂ ಮುನ್ನವೇ ಚಿರಂಜೀವಿ ಸರ್ಜಾ ವಿಧಿವಶರಾದರು. ಈಗ ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಕುರಿತು ಚಿತ್ರತಂಡದಿಂದ ಅಪ್​ಡೇಟ್(Update)​ ಸಿಕ್ಕಿದೆ. ಚಿರಂಜೀವಿ ಸರ್ಜಾ ಅವರನ್ನು ಮತ್ತೆ ಬೆಳ್ಳಿಪರದೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.ಒಂದೂವರೆ ವರ್ಷದಿಂದ ‘ರಾಜಮಾರ್ತಾಂಡ’ ಸಿನಿಮಾ ಪೋಸ್ಟ್ ಪ್ರೊಡಕ್ಷನ್‌(Post Production) ಕೆಲಸದಲ್ಲಿ ಬ್ಯುಸಿಯಾಗಿತ್ತು. ಈಗ ಸಿನಿಮಾದ ಚಟುವಟಿಕೆಗಳು ಜೋರಾಗಿದ್ದು, ಅಭಿಮಾನಿಗಳಿಗೆ ಸಿನಿಮಾ ತೋರಿಸಲು ಚಿತ್ರತಂಡ ಮುಂದಾಗಿದೆ. ಶೀಘ್ರದಲ್ಲೇ ಈ ಚಿತ್ರವನ್ನು ಸೆನ್ಸಾರ್​(Sensor) ಮಂಡಳಿ ಸದಸ್ಯರು ವೀಕ್ಷಿಸಲಿದ್ದಾರೆ. ಇದರ ಜೊತೆ ಮತ್ತೊಂದು ವಿಚಾರ ಚಿರು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಹಾಗಿದ್ದರೆ ಆ ವಿಚಾರ ಏನು ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ!

ಅಣ್ಣನ ಕೊನೆ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ!

ಚಿರಂಜೀವಿ ಸರ್ಜಾ ನಿಧನದ ಬಳಿಕ ಸಹೋದರ ಧ್ರುವ ಸರ್ಜಾ ‘ರಾಜಮಾರ್ತಾಂಡ’ ಚಿತ್ರದ  ನಿರ್ಮಾಪಕರಿಗೆ ಮಾತು ಕೊಟ್ಟಿದ್ದರು. ಅಣ್ಣ ಬಿಟ್ಟು ಹೋದ ಸಿನಿಮಾಗೆ ತಾವೇ ಡಬ್ಬಿಂಗ್ (Dubbing) ಮಾಡುವುದಾಗಿ ಹೇಳಿದ್ದರು. ಅಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ  ಚಿತ್ರಕ್ಕೆ ಡಬ್ಬಿಂಗ್ ಮಾಡಲಿದ್ದರಂತೆ. ಹಾಗೂ ಶೀಘ್ರದಲ್ಲೇ ಈ ಚಿತ್ರವನ್ನು ಸೆನ್ಸಾರ್​ ಮಂಡಳಿ ಸದಸ್ಯರು ವೀಕ್ಷಿಸಲಿದ್ದಾರೆ. ಕೆ.ರಾಮ್‌ ನಾರಾಯಣ್‌ ನಿರ್ದೇಶನದ ಈ ಚಿತ್ರಕ್ಕೆ ಶಿವಕುಮಾರ್‌ ಎನ್‌ ನಿರ್ಮಾಣ ಮಾಡುತ್ತಿದ್ದಾರೆ.

‘ರಾಜಮರ್ತಾಂಡ’ ಸಿನಿಮಾದಲ್ಲಿದೆ ದೊಡ್ಡ ತಾರಾಬಳಗ!

ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ‘ಟಗರು’ ಖ್ಯಾತಿಯ ತ್ರಿವೇಣಿ ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವಥ್, ವಿನೀತ್ ಕುಮಾರ್ ಮುಂತಾದವರು ಈ ಚಿತ್ರದ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ನಿಧನಕ್ಕೂ ಮುನ್ನ ‘ರಾಜಮಾರ್ತಾಂಡ’ ಚಿತ್ರೀಕರಣ ಪೂರ್ತಿಯಾಗಿತ್ತು. ಕೆಲ ಸೀನ್​ಗಳು ಮಾತ್ರ ಬಾಕಿ ಉಳಿದಿತ್ತು. ಆದರೆ, ಈ ದೃಶ್ಯಗಳಲ್ಲಿ ಚಿರಂಜೀವಿ ಸರ್ಜಾ ಪಾತ್ರ ಇರಲಿಲ್ಲ. ಹೀಗಾಗಿ ಸಿನಿಮಾದ ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ.

ಸಿಂಹದಂತೆ ಕ್ಯೂಟ್​ ಆಗಿ ಘರ್ಜಿಸಿದ್ದ ರಾಯನ್​!

 ಚಿರಂಜೀವಿ ಸರ್ಜಾ(Chiranjeevi Sarja) ಅವರ ಪುತ್ರ ರಾಯನ್​ ರಾಜ್​ ಸರ್ಜಾ(Rayan Raj Sarja) ಅವರ ವಿಡಿಯೋಗಳು ಕೂಡ ಇಂಟರ್​​ನೆಟ್​ನಲ್ಲಿ ವೈರಲ್​ ಆಗಾಗ ವೈರಲ್​ ಆಗುತ್ತಿರುತ್ತವೆ. ಅದೇ ರೀತಿ ಈ ವಿಡಿಯೋ ಸಖತ್​ವೈರಲ್​ ಆಗಿತ್ತು. ವಿಡಿಯೋದಲ್ಲಿ ರಾಯನ್ ಸರ್ಜಾ ಅವರನ್ನು ಮತ್ತೊಬ್ಬರು ಎತ್ತಿಕೊಂಡಿದ್ದಾರೆ. ಇತ್ತ ತಾಯಿ ಮೇಘನಾ ರಾಜ್​, ಸಿಂಹ ಹೇಗೆ ಸೌಂಡ್​ ಮಾಡುತ್ತೆ ಎಂದು ರಾಯನ್​ ರಾಜ್​ ಸರ್ಜಾಗೆ ಕೇಳುತ್ತಾರೆ. ಅದಕ್ಕೆ ಆ ಮಗು ಸೌಂಡ್​ ಮಾಡಿ ತೋರಿಸುತ್ತೆ. ಇದಕ್ಕೆ ಮೇಘನಾ ರಾಜ್ ಇದು ಬೆಕ್ಕು ಸೌಂಡ್ ಮಾಡಿದಂತಿದೆ ಎಂದು ಹೇಳುತ್ತಾರೆ. ಮತ್ತೆ ರಾಯನ್​ ರಾಜ್​ ಸರ್ಜಾ ಸಿಂಹದಂತೆ ಘರ್ಜಿಸಲು ಪ್ರಯತ್ನಿಸುತ್ತಾರೆ. ಈ ವಿಡಿಯೋ ನೋಡಲು ತುಂಬಾ ಮುದ್ದಾಗಿದೆ. ಕ್ಯೂಟ್ ಆಗಿ ರಾಯನ್​ ರಾಜ್​ ಸರ್ಜಾ ಸಿಂಹದಂತೆ ಘರ್ಜಿಸಿರುವುದು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *