Hrithik Roshan: ಬಾಲಿವುಡ್ `ಗ್ರೀಕ್ ಗಾಡ್’ಗೆ 48ರ ಹರೆಯ..ಈ ವಯಸ್ಸಲ್ಲೂ ಹೃತಿಕ್ ಸಖತ್ ಫಿಟ್!
Hrithik Roshan: ಸದ್ಯಕ್ಕೆ ಹೃತಿಕ್ ರೋಷನ್ ತಮಿಳಿನ ವಿಕ್ರಂ ವೇದ ರೀಮೆಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಫೋಟೋ ಕೂಡ ಇಂದು ರೀವಿಲ್ ಆಗಿದೆ.

ಬಾಲಿವುಡ್ನ ಚೆಂದದ ಚಿರ ತರುಣ, ಗ್ರೀಕ್ ದೇವರ ಅವತಾರ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ.

ಭಾರತದ ಚಲನಚಿತ್ರ ಜಗತ್ತಿನ ಮೊದಲ ಸೂಪರ್ ಹೀರೊ ಯಾರೆಂದು ಯಾರನ್ನೇ ಕೇಳಿದರೂ ಕಪ್ಪು ಮುಖವಾಡ ಧರಿಸಿ ಪಿಳಿಪಿಳಿಗುಡುವ ಕಣ್ಣಿನ ಕ್ರಿಶ್ ನೆನಪಾಗುತ್ತಾರೆ. ಆ ಮುಖವಾಡದ ಹಿಂದಿನ ಮುಖ ಹೃತಿಕ್ ರೋಷನ್ದು ಎಂದು ಯಾರಿಗೂ ಪ್ರತ್ಯೇಕವಾಗಿ ಹೇಳಬೇಕಿಲ್ಲ, ಅಷ್ಟು ಪ್ರಸಿದ್ಧಿಯನ್ನು ಹೃತಿಕ್ ರೋಷನ್ರಿಗೆ ಕ್ರಿಶ್ ಸಿನಿಮಾ ತಂದುಕೊಟ್ಟಿತು.

ಬಾಲಿವುಡ್ ತಾರೆಯರು ಹಾಗೂ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ‘ಗ್ರೀಕ್ ಗಾಡ್’ ಎಂದೇ ಪ್ರಖ್ಯಾತಿ ಪಡೆದಿರುವ ಹೃತಿಕ್ ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.

ಆರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದರುವ ಪ್ರತಿಭಾನ್ವಿತ ನಟ ಮತ್ತು ಅವರ ಮನಮೋಹಕ ನಟನೆ, ನೃತ್ಯ ಕೌಶಲ್ಯದಿಂದ ಪ್ರೇಕ್ಷಕರನ್ನು ರಂಜಿಸುವ ಕಲೆಗಾರ ಹೃತಿಕ್ ರೋಷನ್.

2000ನೇ ಇಸವಿಯಲ್ಲಿ ತಂದೆ ರಾಕೇಶ್ ರೋಶನ್ ನಿರ್ದೇಶಿಸಿದ್ದ ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ಹೃತಿಕ್ ಯುವ ಮನಸ್ಕರ ಪಾಲಿಗೆ ಚಾಕೋಲೇಟ್ ಹೀರೊ ಎನಿಸಿಕೊಂಡಿದ್ದರು.

ಇನ್ನೂ ಬಾಲಿವುಡ್ನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಗಮನ ಕೂಡ ಯಶ್ ಕಡೆಗೆ ಹರಿದಿದೆ. ಯಶ್ ಬಗ್ಗೆ ಹೃತಿಕ್ ಪ್ರೀತಿ ತೋರಿದ್ದಾರೆ. ‘ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಯಶ್’ ಎಂದು ಟ್ವೀಟ್ ಮಾಡುವ ಮೂಲಕ ಯಶ್ ಬರ್ತ್ಡೇಗೆ ಮನಸಾರೆ ವಿಶ್ ಮಾಡಿದ್ದಾರೆ ‘ಗ್ರೀಕ್ ಗಾಡ್’ ಹೃತಿಕ್ ರೋಷನ್. ಇದನ್ನು ಕಂಡು ಯಶ್ ಅಭಿಮಾನಿಗಳು ಖುಷಿಪಟ್ಟಿದ್ದರು.

ಏನನ್ನೂ ಮರೆತರೂ ಧೂಮ್ ಸಿನಿಮಾವನ್ನು ಮರೆಯಲಾರರು ಭಾರತೀಯ ಚಿತ್ರ ಪ್ರೇಮಿಗಳು. ಸಿನಿಮಾದಲ್ಲಿ ಕಳುವು ಮಾಡಿದಂತೆ ಪ್ರೇಕ್ಷಕರ ಹೃದಯವನ್ನೂ ಧೂಮ್ ಮೂಲಕ ಹೃತಿಕ್ ಕದ್ದುಬಿಟ್ಟಿದ್ದರು.

ಸದ್ಯಕ್ಕೆ ಹೃತಿಕ್ ರೋಷನ್ ತಮಿಳಿನ ವಿಕ್ರಂ ವೇದ ರೀಮೆಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಫೋಟೋ ಕೂಡ ಇಂದು ರೀವಿಲ್ ಆಗಿದೆ.