Corona 3rd Wave: ಕೊರೊನಾ ಸೋಂಕು ಹೆಚ್ಚಳ; ಮೂರನೇ ಅಲೆ ಎದುರಿಸಲು ಬೆಂಗಳೂರಿನಲ್ಲಿ ಸಿದ್ಧತೆ

ಬೆಂಗಳೂರು: ದಿನೇದಿನೆ ಹೆಚ್ಚಾಗುತ್ತಿರುವ ಕೊರೊನಾ ಮೂರನೇ ಅಲೆ ಎದುರಿಸಿಲು ಸಿಲಿಕಾನ್ ಸಿಟಿಯಲ್ಲಿ ತಯಾರಿ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಕಚೇರಿಯ ಕೇಂದ್ರ ವಾರ್ ರೂಂ 24/7 ಕೆಲಸ ಮಾಡಲಿದೆ. ಎಲ್ಲಾ 8 ವಲಯವಾರು ನಿಯಂತ್ರಣ ಕೊಠಡಿಗಳು 24/7 ನಿರ್ವಹಣೆ ಮಾಡಲಿದೆ. 27 ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಒಂದೊಂದು ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗುತ್ತದೆ. ಎಲ್ಲ ಪಾಸಿಟಿವ್ ಪ್ರಕರಣಗಳ ದತ್ತಾಂಶ ಸಂಗ್ರಹ ಮಾಡಲಾಗುತ್ತದೆ. ಪ್ರತಿ 27 ಆರೋಗ್ಯವೈದ್ಯಾಧಿಕಾರಿ ವ್ಯಾಪ್ತಿ, ಎಲ್ಲ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ, ಐಸೋಲೇಷನ್ ನಿಗಾ ವಹಿಸಲಾಗುತ್ತದೆ.

ಫಿಸಿಕಲ್ ಟ್ರಯಾಜಿಂಗ್‌ಗಾಗಿ ಹಂಚಿಕೆ ನಿರ್ವಹಣೆ ಉದ್ದೇಶಕ್ಕಾಗಿ 35 ಮಂದಿ ಅಧಿಕಾರಿಗಳ ನೇಮಕ ಮಾಡಲಾಗಿದೆ. ಲಾಗಿನ್‌ ಇಂಡೆಕ್ಸ್ ಡೇಟಾಬೇಸ್ ಬಳಕೆದೈನಂದಿನ ಪಾಸಿಟಿವ್ ಪ್ರಕರಣಗಳು, ಟ್ರಯಾಜಿಂಗ್ ಮತ್ತು ಆಸ್ಪತ್ರೆಗೆ ದಾಖಲು ಮಾಡುವ ಬಗ್ಗೆ ನಿತ್ಯ ನಿಗಾ ವಹಿಸಲಾಗುವುದು. ಟೆಸ್ಟಿಂಗ್ ಸಂಖ್ಯೆಯನ್ನ 1.10 ಲಕ್ಷ ದಿಂದ 1.20ಗೆ ಏರಿಕೆ ಮಾಡಲಾಗುವುದು. ವಿಧಾನಸಭಾ ಕ್ಷೇತ್ರಗಳಲ್ಲಿನ ನಿಯಂತ್ರಣ ಕೊಠಡಿಗಳಿಂದ ಟೆಲಿ ಟ್ರಯಾಜಿಂಗ್ ಮಾಡಲಾಗುವುದು.

ದೂರವಾಣಿ ಕರೆ ಮುಖಾಂತರ ವಿಳಾಸ ಪರಿಶೀಲಿಸಿ ಆರೋಗ್ಯ ಪರಿಸ್ಥಿತಿ ವಿಚಾರಿಸಿ, ಡೇಟಾಬೇಸ್‌ನಲ್ಲಿ ದಾಖಲು ಮಾಡಲು ಸಿದ್ಧತೆ ನಡೆಸಲಾಗಿದೆ. ರೋಗಲಕ್ಷಣಗಳಿರುವ ವ್ಯಕ್ತಿಗಳಿಗೆ ಮನೆ ಬಾಗಿಲಿಗೆ ಹೋಗಿ ಸಂಚಾರಿ ಟ್ರಯಾಜ್ ಘಟಕಗಳ ಮೂಲಕ ಫಿಸಿಕಲ್ ಟ್ರಯಾಜ್, ಕೇಸ್ ಲೋಡ್ ಆಧಾರದ ಮೇಲೆ ಎಲ್ಲ ವಾರ್ಡ್‌ಗಳಲ್ಲಿ 1 ಅಥವಾ 2 ಸಂಚಾರಿ ಟ್ರಯಾಜ್ ಘಟಕ ಸ್ಥಾಪಿಸಲಾಗುವುದು. 60 ವರ್ಷ ಮೇಲ್ಪಟ್ಟವರು ಮತ್ತು ಅನ್ಯಾರೋಗಗಳಿರುವವರಿಗೂ ಫಿಸಿಕಲ್ ಚೆಕ್ ಅಪ್ ಬಯಸುವ ರೋಗಿಗಳಿಗಾಗಿ ವಾಕ್-ಇನ್ ಸೌಲಭ್ಯ ನೀಡಲಾಗುವುದು.

ಫಿಸಿಕಲ್ ಟ್ರಯಾಜ್ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಸಿಟಿಯಲ್ಲಿ ಒಟ್ಟು 28,067 ಹಾಸಿಗೆಗಳನ್ನು ಗುರುತಿಸಲಾಗಿದೆ. (ಸರ್ಕಾರಿ ಆಸ್ಪತ್ರೆಗಳ 3,237 ಹಾಸಿಗೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳ 2,696 ಹಾಸಿಗೆಗಳು, ಖಾಸಗಿ ಆಸ್ಪತ್ರೆಗಳ 13,540 ಹಾಸಿಗೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ 8,594 ಹಾಸಿಗೆಗಳು). ಹೋಂ ಐಸೋಲೇಷನ್ 7 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಕಡ್ಡಾಯ ಎಂದು ಹೇಳಲಾಗಿದೆ. 27 ಕೋವಿಡ್ ಆರೈಕೆ ಕೇಂದ್ರಗಳು ಸಿದ್ಧತೆ ಮಾಡಲಾಗಿದೆ. ಕೊವಿಡ್ ಸಹಾಯವಾಣಿಗಳು ಆರಂಭ ಮಾಡಲಾಗಿದೆ. ಕೊವಿಡ್ ರೂಲ್ಸ್ ಕಠಿಣ ಜಾರಿಗಾಗಿ 580 ಮಾರ್ಷಲ್‌ಗಳು ಮತ್ತು 1217 ಹೋಮ್ ಗಾರ್ಡ್ ಗಳನ್ನು ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ನಿಯೋಜನೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಭಾಗಶಃ ಜನರಿಗೆ ಶೀತ ಜ್ವರ; ಆದರೆ ಕೊರೊನಾ ಅಲ್ಲ

ಬೆಂಗಳೂರಿನಲ್ಲಿ ಭಾಗಶಃ ಜನರಿಗೆ ಕೊರೊನಾ ಲಕ್ಷಣ ಇದೆ. ಆದ್ರೆ ಕೊರೊನಾವಲ್ಲ. ಇಂತಹದೊಂದು ಶೀತ ಜ್ವರ ಪ್ರಕರಣಗಳು ಕಂಡುಬರುತ್ತಿದೆ. ಬೆಂಗಳೂರಿನ ಶೇ. 60 ರಷ್ಟು ಜನರಿಗೆ ಶೀತ, ಜ್ವರ, ಕೆಮ್ಮು, ಸುಸ್ತು ಕಂಡುಬಂದಿದೆ. ಬಿಬಿಎಂಪಿಯ ಆಂತರಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಬೆನ್ನಲ್ಲೇ ಬೆಂಗಳೂರು ಮಂದಿಗೆ ಶೀತ, ಕೆಮ್ಮು, ಜ್ವರ, ತಲೆನೋವು, ಸುಸ್ತು ಉಂಟಾಗಿದೆ. ಆದರೆ, ಹಲವರಿಗೆ ಕೊವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದೆ.

ಕೊರೊನಾಗೆ ನೀಡುವ ಚಿಕಿತ್ಸೆಯನ್ನೇ ಪಡೆಯಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಹತ್ತರಿಂದ ಹದಿನೈದು ದಿನದವರೆಗೂ ಈ ಲಕ್ಷಣಗಳು ಕಾಣಿಸಿಕೊಳ್ತಾಯಿದ್ದು ಆರೋಗ್ಯ ಇಲಾಖೆ‌ ಮತ್ತು ವೈದ್ಯರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ, ಶೇ.60 ರಷ್ಟು ಜನರಿಗೆ ಇದೇ ಲಕ್ಷಣಗಳಿವೆ ಎಂದು ಸೋಮವಾರ ನಡೆಯುವ ಸಿಎಂ ಸಭೆಯಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ವರದಿ ನೀಡಲಿದೆ.

ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ

ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಇಂದು (ಜನವರಿ 17) ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಂಜೆ 4 ಗಂಟೆಗೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ. ಸಚಿವರಾದ ಡಾ.ಕೆ.ಸುಧಾಕರ್​ ಹಾಗೂ ಆರ್​.ಅಶೋಕ್, ಕೊವಿಡ್​-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಸದ್ಯ ವಿಧಿಸಿರುವ ಕಠಿಣ ರೂಲ್ಸ್ ಜನವರಿ 19ಕ್ಕೆ ಅಂತ್ಯವಾಗುತ್ತೆ. ಸಭೆಯಲ್ಲಿ ಕಠಿಣ ರೂಲ್ಸ್​ ಮುಂದುವರಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಫೆಬ್ರವರಿಯಲ್ಲಿ ಏನು ಮಾಡಬೇಕೆಂಬ ಬಗ್ಗೆ ಮಾತುಕತೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಸೋಮವಾರ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಇಂದು 18,408 ಕೊವಿಡ್ ಕೇಸ್ ಪತ್ತೆ ಸಾಧ್ಯತೆ ಇದೆ. ನಗರದಲ್ಲಿ ನಿನ್ನೆಗಿಂತ ಇಂದು 2,663 ಕೊವಿಡ್ ಕೇಸ್ ಇಳಿಕೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ನಿನ್ನೆ 21,071 ಕೊವಿಡ್ ಕೇಸ್ ಪತ್ತೆಯಾಗಿತ್ತು.

ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಸಿಎಂ ಸಭೆಗೂ ಮುನ್ನ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಿದೆ. ಸಂಜೆ 4 ಗಂಟೆಗೆ ಅಧಿಕಾರಿಗಳ ಜತೆ ಸಭೆ ಸಿಎಂ ನಡೆಸಲಿದ್ದಾರೆ. ಸರ್ಕಾರಕ್ಕೆ ಮುನ್ನೆಚ್ಚರಿಕೆ ಸಲಹೆ ಕುರಿತು ಸದಸ್ಯರಿಂದ ಚರ್ಚೆ ನಡೆಸಲಾಗುತ್ತದೆ. ಮುಂದಿನ 2 ವಾರಾಂತ್ಯಗಳಲ್ಲೂ ಕರ್ಫ್ಯೂ ಜಾರಿ ಮಾಡುವ ಬಗ್ಗೆ, ಮುಂದಿನ 14 ದಿನಗಳ ಕಾಲ 50:50 ನಿಯಮ ಮುಂದುವರಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಜ.31ರವರೆಗೂ ಸದ್ಯದ ನಿಯಮ ಮುಂದುವರಿಕೆ ಬಗ್ಗೆ ಸಲಹೆ ನೀಡಲಾಗುವುದು. ಇಂದಿನ ಸಭೆಯಲ್ಲಿ ಸಿಎಂಗೆ ಸಲಹೆ ನೀಡಲು ಸದಸ್ಯರು ನಿರ್ಧಾರ ಕೈಗೊಂಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *