ತೀವ್ರ ಅಸ್ವಸ್ಥನಾಗಿ ನಡುರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸದ ಸಾರ್ವಜನಿಕರಿಗೆ ಪಿಎಸ್ಐ ತರಾಟೆ

ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿ ತಿಮ್ಮರಾಜು ಎಂಬ ವ್ಯಕ್ತಿ ಮೇಲೆ ಗ್ರಾಮದ ಕೆಲವರಿಂದ ಹಲ್ಲೆ ನಡೆದಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಾಡಗಾನಹಟ್ಟಿಯಲ್ಲಿ ನಡೆದಿದೆ. ಹಾಗೂ ಇದೇ ವೇಳೆ ಸ್ಥಳಕ್ಕೆ ಬಂದ ಮಧುಗಿರಿ ಪಿಎಸ್ಐ ಲಕ್ಷ್ಮೀನಾರಾಯಣ ತಿಮ್ಮರಾಜುನನ್ನು ಆಸ್ಪತ್ರೆಗೆ ಸೇರಿಸಿ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕೆಲವರು ತಿಮ್ಮರಾಜು ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಾದ ಪರಿಣಾಮ ತಿಮ್ಮರಾಜು ತೀವ್ರ ಅಸ್ವಸ್ಥನಾಗಿ ನಡುರಸ್ತೆಯಲ್ಲಿ ಬಿದ್ದಿದ್ದ. ಈ ವೇಳೆ ಸ್ಥಳಕ್ಕೆ ಧಾವಿಸಿದ ಮಧುಗಿರಿ ಪಿಎಸ್ಐ ಲಕ್ಷ್ಮೀನಾರಾಯಣ, ಅಸ್ವಸ್ಥನಾಗಿರುವ ತಿಮ್ಮರಾಜುನನ್ನು ಆಸ್ಪತ್ರೆಗೆ ಸೇರಿಸದೆ ಮೂಕಪ್ರೇಕ್ಷಕರಂತೆ ನೋಡುತ್ತಿದ್ದ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಸ್ವಸ್ಥರಾದವರನ್ನು ಮೊದಲು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆಯಬೇಕು ಅದುಬಿಟ್ಟು ಮೂಕಪ್ರೇಕ್ಷಕರಂತೆ ನೋಡುತ್ತಿರುವುದು ಎಷ್ಟು ಸರಿ ಎಂದು ಗ್ರಾಮಸ್ಥರಿಗೆ ಬುದ್ದಿವಾದ ಹೇಳಿದ್ದಾರೆ. ಬಳಿಕ ಪೊಲೀಸ್ ಇಲಾಖೆಯ ಹೈವೇ ಪೆಟ್ರೋಲ್ ವಾಹನದಲ್ಲಿ ಅಸ್ವಸ್ಥರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

2 ಕೃಷ್ಣಮೃಗಗಳ ನಡುವೆ ಕದನ ತುಮಕೂರು: ಮಧುಗಿರಿ ತಾಲೂಕಿನ ಜನಕಲೂಟಿ ಗ್ರಾಮದ ಬಳಿ 2 ಕೃಷ್ಣಮೃಗಗಳ ನಡುವೆ ಕದನ ನಡೆದಿದ್ದು ಒಂದು ಕೃಷ್ಣಮೃಗಕ್ಕೆ ಗಾಯ ಆಗಿದೆ. ಅರಣ್ಯ ಸಿಬ್ಬಂದಿಯಿಂದ ಗಾಯಗೊಂಡಿರುವ ಕೃಷ್ಣಮೃಗಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಾಗೇನಹಳ್ಳಿ ಬಳಿ ಕಾರು ಡಿಕ್ಕಿ, ಬೈಕ್‌ನಲ್ಲಿದ್ದ ಮಹಿಳೆ ಸಾವು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಬಳಿ ಕಾರು ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ವೀಣಾ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಬೈಕ್​ನಲ್ಲಿ ರಂಗಸ್ವಾಮಿ, ಪತ್ನಿ ವೀಣಾ ಮತ್ತು ಮಗಳು ದೇವಾಲಯಕ್ಕೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು ವೀಣಾ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ರಂಗಸ್ವಾಮಿ ಕುಟುಂಬ ಮಧುಗಿರಿ ತಾಲೂಕಿನ ಚುಂಚನಹಳ್ಳಿ ಗ್ರಾಮದವರು ಎನ್ನಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಹಿಳೆಗೆ ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ, ಇಬ್ಬರು ಅರೆಸ್ಟ್ ಮಹಿಳೆಗೆ ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಹುಲ್ಲಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಹೆಡಿಯಾಲ ಗ್ರಾಮದ ವೆಂಕಟೇಶ್, ಮಂಜು ಬಂಧಿತ ಆರೋಪಿಗಳು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮದಲ್ಲಿ ಚಿಕ್ಕಮ್ಮ ಎಂಬುವವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಹಣ, ಮೊಬೈಲ್ ಫೋನ್ ಸುಲಿಗೆ ಮಾಡಿದ್ದರು. ಜ.9ರಂದು‌ ಹುಲ್ಲಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಬಂಧಿತರಿಂದ 25 ಗ್ರಾಂ ಚಿನ್ನದ ಸರ, ಪರ್ಸ್, ಮೊಬೈಲ್ ವಶಕ್ಕೆ ಪಡೆದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *