ರೈಲು ಸಂಚಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ರೈಲಿನಲ್ಲಿ ಪ್ರಯಾಣ ಮಾಡುವಾಗ ಹೊರಗಿನ ಪ್ರಕೃತಿ ಸೌಂದರ್ಯವನ್ನ ನೋಡ್ತಾ ಜರ್ನಿ ಮಾಡೋ ಖುಷಿನೇ ಬೇರೆ. ದಟ್ಟಾರಣ್ಯ , ಜಲಪಾತಗಳ ಸೊಬಗನ್ನ ನೊಡ್ತಾ ರೈಲಲ್ಲಿ ಪ್ರಯಾಣ ಮಾಡುವ ದಿನಗಳು ಹತ್ತಿರವಾಗ್ತಾಯಿದೆ…ಎಂದಿನಿಂದ, ಯಾವ ಮಾರ್ಗ ಎಂಬ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…. ನೈರುತ್ಯ ರೈಲ್ವೆ ವಿಭಾಗವು ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡ್ತಾಯಿದೆ. ಇನ್ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವವರು ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ತಾ ಪ್ರಯಾಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನಲೆ ಸೌಥ್ ವೆಸ್ಟರ್ನ್ ಗೆ ವಿಸ್ಟಾಡೋಮ್ ಬೋಗಿಗಳು ಸ್ಯಾಂಕ್ಷನ್ ಆಗಿದ್ದು ಈಗಾಗಲೇ ಒಂದು ಭೋಗಿ ಯಶವಂತಪುರ ತಲುಪಿದೆ. ವಿಸ್ಟಾಡೋಮ್ ಬೋಗಿಯು ಸಂಪೂರ್ಣ ಗಾಜಿನಿಂದ ಕೂಡಿದ್ದು ಕಿಟಿಕಿ ಹಾಗೂ ಮೇಲ್ಚಾವಣಿ ಸಂಪೂರ್ಣ ಪಾರದರ್ಶಕವಾಗಿದೆ. ವಿಸ್ಟಾಡೋಮ್ ಬೋಗಿಯಲ್ಲಿನ ಸೀಟುಗಳು 180 ಡಿಗ್ರಿಯಲ್ಲಿ ತಿರುಗುವುದರ ಜೊತೆಗೆ ಸೀಟ್ ಕೂಡ ಹಿಂದಕ್ಕೆ ಬೆಂಡ್ ಆಗಲಿದೆ. ಒಂದು ಬೋಗಿಯಲ್ಲಿ ಐದು ಕಿಟಕಿಗಳ ಜೊತೆಗೆ ಮೇಲ್ಚಾವಣಿ ಪಾರದರ್ಶಕತೆಯಿಂದ ಕೂಡಿದ್ದು ಪ್ರಯಾಣದ ವೇಳೆ ಪ್ರಕೃತಿ ಸೌಂದರ್ಯವನ್ನ ಸವಿಯುತ್ತಾ ಎಂಜಾಯ್ ಮಾಡಬಹುದು. ಈ ಪಾರದರ್ಶಕ ಬೋಗಿಗಳನ್ನ ಬೆಂಗಳೂರು – ಮಂಗಳೂರು ಮಾರ್ಗದ ರೈಲುಗಳಿಗೆ ಅಳವಡಿಸುವ ಚಿಂತನೆ ನಡೆಸಲಾಗುತ್ತಿದೆ. ಈ ಮಾರ್ಗದಲ್ಲಿ ಸಕಲೇಶಪುರ ಘಟ್ಟ ಪ್ರದೇಶ, ಸುಬ್ರಹ್ಮಣ್ಯ ಮಾರ್ಗ ದಲ್ಲಿ ದಟ್ಟಾರಣ್ಯ, ಜಲಪಾತಗಳು ಇದ್ದು ರೈಲು ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಲು ರೈಲ್ವೆ ಇಲಾಖೆ ಅನುವು ಮಾಡಿಕೊಡುತ್ತಿದೆ. ಇದರಲ್ಲಿ 40 ಸುಸಜ್ಜಿತ ಆಸನಗಳು ಸೇರಿದಂತೆ ಡಿಜಿಟಲ್ ಇನ್ಪೋಟೈನ್ ಮೆಂಟ್ ವ್ಯವಸ್ಥೆ ಜೊತೆಗೆ ರೈಲು ಬೋಗಿಯು ಹೈಟೆಕ್ ವ್ಯವಸ್ಥೆ ಹೊಂದಿದೆ. ಮಾರ್ಚ್ 15 ರಿಂದ ಬೆಂಗಳೂರು – ಮಂಗಳೂರು ಮಾರ್ಗದ ಹಲವು ರೈಲುಗಳಿಗೆ ಈ ಬೋಗಿಗಳನ್ನ ಅಳವಡಿಸಲು ಚಿಂತನೆ ನಡೆಯುತ್ತಿದೆ. ವಿಜಯ. ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ. ನೈರುತ್ಯ ರೈಲ್ವೆ. ಪಶ್ಚಿಮ ಘಟ್ಟಗಳ ಸಾಲುಗಳನ್ನ ನೋಡೊದೆ ಒಂದು ಅಂದ. ಇನ್ನೂ ರೈಲು ಪ್ರಯಾಣದಲ್ಲಿ ಆ ಪ್ರಕೃತಿ ಸೌಂದರ್ಯವನ್ನ ಆನಂದಿಸುವುದಕ್ಕೆ ರೈಲ್ವೆ ಇಲಾಖೆ ನೂತನ ಬೋಗಿಗಳನ್ನ ಪರಿಚಯ ಮಾಡ್ತಾಯಿರೋದು ನಿಜಕ್ಕೂ ರೈಲ್ವೆ ಪ್ರಯಾಣಿಕರಿಗೆ ಖುಷಿ ತಂದಿರೊದಂತೂ ಸತ್ಯ
Read more