ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ‘ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್ ಬದ್ಧ : ಗಿರೀಶ ನೆಲ್ಕುದ್ರಿ : ವಿದ್ಯಾಂಜಲಿ 2.0 ಪೋರ್ಟಲ್ ಮೂಲಕ ಉಚಿತ ಸೇವೆಗಳ ಮಹಾಪೂರ
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಹತ್ವಾಕಾಂಕ್ಷೆಯ ‘ವಿದ್ಯಾಂಜಲಿ 2.0’ ಕಾರ್ಯಕ್ರಮದಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ದತ್ತು ಪಡೆದು, ವಿವಿಧ ಉಚಿತ ಸೌಲಭ್ಯ ಹಾಗೂ ಸಿಬ್ಬಂದಿ ಸೇವೆಗಳನ್ನು ಒದಗಿಸಲು ‘ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್ ’ ಪ್ರಶಂಸನೀಯ ಹೆಜ್ಜೆ ಇಟ್ಟಿದೆ.
ಈಗಾಗಲೇ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್, ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಉಚಿತ ಬ್ಯಾಗ್, ಪುಸ್ತಕಗಳು ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ವಿತರಿಸುತ್ತಾ ಬಂದಿದೆ.
ಸಂಸ್ಥೆಗೆ ಲಭ್ಯವಾಗುವ ವಿವಿಧ ಕಂಪನಿಗಳ ಸಿ.ಎಸ್.ಆರ್ (CSR FUND) ನಿಧಿ ಹಾಗೂ ಸಾರ್ವಜನಿಕರ ದೇಣಿಗೆಯನ್ನು ಸಂಪೂರ್ಣವಾಗಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬಳಸಲು ಟ್ರಸ್ಟ್ ನಿರ್ಧರಿಸಿದೆ. ಜಿಲ್ಲಾ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಸರ್ಕಾರಿ ಶಾಲೆಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ ಹಾಗೂ ಅಗತ್ಯತೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಅದರನ್ವಯ :
ಶಾಲಾ ಆವರಣದ ಸ್ವಚ್ಛತೆ ಮತ್ತು ನವೀಕರಣ: ಸ್ವಚ್ಛತಾ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳ ಆವರಣಗಳಿಗೆ ಆಕರ್ಷಕ ಪೇಂಟಿಂಗ್ ಮಾಡಿಸುವುದು.
ಆಕರ್ಷಕ ಬಿತ್ತಿಚಿತ್ರಗಳು: ಸ್ಥಳೀಯ ಕಲಾ ಪ್ರಕಾರಗಳಿಂದ ಪ್ರೇರಿತವಾದ ಸುಂದರ ಚಿತ್ರಕಲೆಗಳನ್ನು ಶಾಲಾ ಗೋಡೆಗಳ ಮೇಲೆ ಬಿಡಿಸುವ ಮೂಲಕ ಶಾಲಾ ಆವರಣವನ್ನು ಆಕರ್ಷಕಗೊಳಿಸುವುದು.

ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ದುರಸ್ತಿ: ಕುಡಿಯುವ ನೀರು ಮತ್ತು ಶೌಚಾಲಯ ಅಭಿವೃದ್ಧಿ: ಪೀಠೋಪಕರಣ ಹಾಗೂ ತಂತ್ರಜ್ಞಾನದ ನೆರವು: ಗ್ರಂಥಾಲಯ ಅಭಿವೃದ್ಧಿ: ಮಾನವ ಸಂಪನ್ಮೂಲ ಮತ್ತು ಉದ್ಯೋಗ ತರಬೇತಿ: ಉಚಿತ ಕಲಿಕಾ ಸಾಮಗ್ರಿ ವಿತರಣೆ:.
ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ಈಗಾಗಲೇ ಯಶಸ್ವಿಯಾಗಿ ನೋಂದಣಿಯಾಗಿರುವ ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್, ಈ ಮಹತ್ಕಾರ್ಯವನ್ನು ಯಶಸ್ವಿಗೊಳಿಸಲು ಶಿಕ್ಷಣ ಇಲಾಖೆಯ ಮತ್ತು ಜಿಲ್ಲಾ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಹಕಾರವನ್ನು ಕೋರಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಟ್ರಸ್ಟ್‌ನ ಅಧ್ಯಕ್ಷರಾದ ಗಿರೀಶ ನೆಲ್ಕುದ್ರಿ ಅವರು, “ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಮ್ಮ ಈ ಯೋಜನೆಗೆ ಶಿಕ್ಷಣ ಇಲಾಖೆಯು ಸೂಕ್ತ ಅನುಮತಿ ನೀಡಿದ್ದು ಎಲ್ಲಾ ಶಾಲೆಗಳ ಮುಖ್ಯಸ್ಥರು, ಪ್ರತಿ ಗ್ರಾಮ ಹಾಗೂ ಪಟ್ಟಣದ ಸಾರ್ವಜನಿಕರು ತಮಗೆ ಪ್ರೋತ್ಸಾಹ ನೀಡುವ ಮೂಲಕ ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು” ಎಂದು ವಿನಂತಿಸಿದ್ದಾರೆ.
