ಇನ್ಮುಂದೆ ಪ್ರಕೃತಿ ಸೌಂದರ್ಯದ ಜೊತೆಗೆ ಸಾಗಲಿದೆ ರೈಲು ಪ್ರಯಾಣ..! ನೈರುತ್ಯ ರೈಲ್ವೆಗೆ ಬಂದಿದೆ ವಿಸ್ಟಾಡೋಮ್ ರೈಲು ಬೋಗಿಗಳು.!

ರೈಲು ಸಂಚಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ರೈಲಿನಲ್ಲಿ ಪ್ರಯಾಣ ಮಾಡುವಾಗ ಹೊರಗಿನ ಪ್ರಕೃತಿ ಸೌಂದರ್ಯವನ್ನ ನೋಡ್ತಾ ಜರ್ನಿ ಮಾಡೋ ಖುಷಿನೇ ಬೇರೆ.‌ ದಟ್ಟಾರಣ್ಯ , ಜಲಪಾತಗಳ ಸೊಬಗನ್ನ ನೊಡ್ತಾ ರೈಲಲ್ಲಿ ಪ್ರಯಾಣ ಮಾಡುವ ದಿನಗಳು ಹತ್ತಿರವಾಗ್ತಾಯಿದೆ…ಎಂದಿನಿಂದ, ಯಾವ ಮಾರ್ಗ ಎಂಬ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…. ನೈರುತ್ಯ ರೈಲ್ವೆ ವಿಭಾಗವು ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡ್ತಾಯಿದೆ.‌ ಇನ್ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವವರು ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ತಾ ಪ್ರಯಾಣ ಮಾಡಲು ವ್ಯವಸ್ಥೆ ಮಾಡಲಾಗಿದೆ.‌ ಈ ಹಿನ್ನಲೆ ಸೌಥ್ ವೆಸ್ಟರ್ನ್ ಗೆ ವಿಸ್ಟಾಡೋಮ್ ಬೋಗಿಗಳು ಸ್ಯಾಂಕ್ಷನ್ ಆಗಿದ್ದು ಈಗಾಗಲೇ ಒಂದು ಭೋಗಿ ಯಶವಂತಪುರ ತಲುಪಿದೆ.‌ ವಿಸ್ಟಾಡೋಮ್ ಬೋಗಿಯು ಸಂಪೂರ್ಣ ಗಾಜಿನಿಂದ‌ ಕೂಡಿದ್ದು ಕಿಟಿಕಿ ಹಾಗೂ ಮೇಲ್ಚಾವಣಿ ಸಂಪೂರ್ಣ ಪಾರದರ್ಶಕವಾಗಿದೆ. ವಿಸ್ಟಾಡೋಮ್ ಬೋಗಿಯಲ್ಲಿನ ಸೀಟುಗಳು 180 ಡಿಗ್ರಿಯಲ್ಲಿ ತಿರುಗುವುದರ ಜೊತೆಗೆ ಸೀಟ್ ಕೂಡ ಹಿಂದಕ್ಕೆ ಬೆಂಡ್ ಆಗಲಿದೆ. ಒಂದು ಬೋಗಿಯಲ್ಲಿ ಐದು ಕಿಟಕಿಗಳ ಜೊತೆಗೆ ಮೇಲ್ಚಾವಣಿ ಪಾರದರ್ಶಕತೆಯಿಂದ ಕೂಡಿದ್ದು ಪ್ರಯಾಣದ ವೇಳೆ ಪ್ರಕೃತಿ ಸೌಂದರ್ಯವನ್ನ ಸವಿಯುತ್ತಾ ಎಂಜಾಯ್ ಮಾಡಬಹುದು.‌ ಈ ಪಾರದರ್ಶಕ ಬೋಗಿಗಳನ್ನ ಬೆಂಗಳೂರು – ಮಂಗಳೂರು ಮಾರ್ಗದ ರೈಲುಗಳಿಗೆ ಅಳವಡಿಸುವ ಚಿಂತನೆ ನಡೆಸಲಾಗುತ್ತಿದೆ.‌ ಈ ಮಾರ್ಗದಲ್ಲಿ ಸಕಲೇಶಪುರ ಘಟ್ಟ ಪ್ರದೇಶ, ಸುಬ್ರಹ್ಮಣ್ಯ ಮಾರ್ಗ ದಲ್ಲಿ ದಟ್ಟಾರಣ್ಯ, ಜಲಪಾತಗಳು ಇದ್ದು ರೈಲು ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಲು ರೈಲ್ವೆ ಇಲಾಖೆ ಅನುವು ಮಾಡಿಕೊಡುತ್ತಿದೆ.‌ ಇದರಲ್ಲಿ 40 ಸುಸಜ್ಜಿತ ಆಸನಗಳು ಸೇರಿದಂತೆ ‌ಡಿಜಿಟಲ್ ಇನ್ಪೋಟೈನ್ ಮೆಂಟ್ ವ್ಯವಸ್ಥೆ ಜೊತೆಗೆ ರೈಲು ಬೋಗಿಯು ಹೈಟೆಕ್ ವ್ಯವಸ್ಥೆ ಹೊಂದಿದೆ. ಮಾರ್ಚ್ 15 ರಿಂದ ಬೆಂಗಳೂರು – ಮಂಗಳೂರು ಮಾರ್ಗದ ಹಲವು ರೈಲುಗಳಿಗೆ ಈ ಬೋಗಿಗಳನ್ನ ಅಳವಡಿಸಲು ಚಿಂತನೆ ನಡೆಯುತ್ತಿದೆ. ವಿಜಯ. ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ. ನೈರುತ್ಯ ರೈಲ್ವೆ. ಪಶ್ಚಿಮ ಘಟ್ಟಗಳ ಸಾಲುಗಳನ್ನ ನೋಡೊದೆ ಒಂದು ಅಂದ. ಇನ್ನೂ ರೈಲು ಪ್ರಯಾಣದಲ್ಲಿ ಆ ಪ್ರಕೃತಿ ಸೌಂದರ್ಯವನ್ನ ಆನಂದಿಸುವುದಕ್ಕೆ ರೈಲ್ವೆ ಇಲಾಖೆ ನೂತನ ಬೋಗಿಗಳನ್ನ ಪರಿಚಯ ಮಾಡ್ತಾಯಿರೋದು ನಿಜಕ್ಕೂ ರೈಲ್ವೆ ಪ್ರಯಾಣಿಕರಿಗೆ ಖುಷಿ ತಂದಿರೊದಂತೂ ಸತ್ಯ

Read more

ರಾಮ ಜನ್ಮಭೂಮಿ ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಸಂಗ್ರಹವಾಯ್ತು ನಿರೀಕ್ಷೆಗೂ ಮೀರಿದ ಬೃಹತ್​ ಮೊತ್ತ..!

ಭಾರತದಲ್ಲಿ ಅಯೋಧ್ಯೆ ರಾಮಮಂದಿರ ವಿವಾದ ಎನ್ನುವುದು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. 1528ರಲ್ಲಿ ಇಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿತ್ತು ಎನ್ನುವ ವಾದ ಕೂಡ ಇದೆ.

Read more

ಬೆಂಗಳೂರಿನಲ್ಲಿ 1520 ಬೀದಿಬದಿ ವ್ಯಾಪಾರಿಗಳಿಗೆ ‘ಪಿಎಂ ಸ್ವ-ನಿಧಿ’ ಸಾಲ ಮಂಜೂರು

ಹೈಲೈಟ್ಸ್‌: ‘ಪಿಎಂ ಸ್ವ-ನಿಧಿ’ ಯೋಜನೆಯ ಕಿರು ಸಾಲ ವಿತರಣಾ ಶಿಬಿರ ಆಯೋಜನೆ ಬೆಂಗಳೂರಿನಲ್ಲಿ ಸುಮಾರು 1520 ಮಂದಿಗೆ ‘ಪಿಎಂ ಸ್ವ-ನಿಧಿ’ ಸಾಲ ಮಂಜೂರು ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗುವ

Read more

ಗಾಣಗಾಪುರ ದತ್ತಾತ್ರೇಯ ಮಾಘಮಾಸ ಉತ್ಸವ ಸರಳ ಆಚರಣೆಗೆ DC ಆದೇಶ

ಕಲಬುರಗಿ: ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲೂ ಆತಂಕ ಹೆಚ್ಚಾಗಿದೆ. ಈ  ಹಿನ್ನೆಲೆಯಲ್ಲಿ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತಾತ್ರೇಯನ ಮಾಘ ಮಾಸ

Read more

ನಿವೃತ್ತ ಆಯುಕ್ತರಾದ ಜಗನ್ನಾಥಪ್ಪ ಪನಸಾಲೆರಿಗೆ ಸನ್ಮಾನ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಲ್ಲಿ ನಡೆದ ಎರಡು ದಿನಗಳ ವಚನ ಸಾಹಿತ್ಯ: ಸಾಮಾಜಿಕ, ಸಾಂಸ್ಕೃತಿಕ, ಮತ್ತು ವೈಚಾರಿಕ ಅನುಸಂಧಾನ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಸಮಾರಂಭಕ್ಕೆ ಬೆಂಗಳೂರಿನಿಂದ ಆಗಮಿಸಿದ

Read more

ವಚನ ಹಸ್ತಪ್ರತಿಗಳು ಆರಾಧನೆ ವಸ್ತುಗಳಾಗಿದ್ದು ವಿಷಾದನೀಯ:ಹಿರಿಯ ಸಾಹಿತಿ ಮ.ಗು.ಬಿರಾದಾರ

ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟ ವಚನಗಳ ಹಸ್ತಪ್ರತಿಗಳು ಸಾಕಷ್ಟು ಹಾಳಾಗಿವೆ. ಜನರು ಆ ಹಸ್ತಪ್ರತಿಗಳನ್ನು ಜಗಲಿ ಮೇಲಿಟ್ಟು ವಿಭೂತಿ, ಕುಂಕುಮ ಹಚ್ಚಿ ಪೂಜೆ ಮಾಡಿ ಆರಾಧನೆಯ ವಸ್ತುಗಳನ್ನಾಗಿಸಿದ್ದಾರೆ ಎಂದು

Read more

ಕೆ.ಕೆ.ಆರ್.ಡಿ.ಬಿ. ಮಂಡಳಿ: ನಾಲ್ಕನೇ ಕಂತಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ:ದತ್ತಾತ್ರೇಯ ಪಾಟೀಲ ರೇವೂರ

ಕೆ.ಕೆ.ಆರ್.ಡಿ.ಬಿ. ಮಂಡಳಿ: ನಾಲ್ಕನೇ ಕಂತಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ:ದತ್ತಾತ್ರೇಯ ಪಾಟೀಲ ರೇವೂರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2020-21ನೇ ಸಾಲಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ

Read more

ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಅಧಿಕೃತವಾಗಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಇಂದು ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ

Read more

ಎಸ್‍ಡಿಪಿಐ, ಪಿಎಫ್‍ಐ ನಿಷೇಧಕ್ಕೆ ಸಚಿವ ಅರವಿಂದ ಲಿಂಬಾವಳಿ ಪಟ್ಟು

ರಾಜ್ಯದಲ್ಲಿ ಈಚೆಗೆ ನಡೆದ ಡಿಜೆ-ಕೆಜಿಹಳ್ಳಿ ಗಲಭೆ ಮತ್ತು ಸಂಘರ್ಷಕ್ಕೆ ಕಾರಣಕರ್ತ ಸಂಘಟನೆಗಳಾದ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ರಾಜ್ಯ

Read more

ಬಸ್ ಟಿಕೆಟ್ ಬುಕಿಂಗ್​ಗಾಗಿ ಅಭಿಬಸ್‌ ಜೊತೆ ಐಆರ್‌ಸಿಟಿಸಿ ಒಪ್ಪಂದ

3000 ಖಾಸಗಿ ಬಸ್ ಆಪರೇಟರ್‌ಗಳಿಗೆ ಬಸ್‌ ಬುಕ್ಕಿಂಗ್ ಮಾಡುವ ಆನ್‌ಲೈನ್ ಇ-ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಅಭಿಬಸ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್, ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ

Read more